ಜನಿವಾರ ತೆಗೆಸಿದ ಘಟನೆ: ವಿಬಿಎಫ್ ಖಂಡನೆ

KannadaprabhaNewsNetwork |  
Published : Apr 27, 2025, 01:52 AM IST
26ಎಚ್‌ಯುಬಿ32ವಿಪ್ರ ಬ್ಯುಸಿನೆಸ್ ಫಾರಂನ ಹುಬ್ಬಳ್ಳಿ ಘಟಕದ ಸಭೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ಸಭೆಯಲ್ಲಿ ಶಿವಮೊಗ್ಗ ಮತ್ತು ಬೀದರ್‌ಗಳಲ್ಲಿ ನಡೆದ ಘಟನೆಗಳನ್ನು ತೀವ್ರವಾಗಿ ಖಂಡಿಸಿ ನಿರ್ಣಯ ಕೈಗೊಳ್ಳಲಾಯಿತಲ್ಲದೇ, ತಪ್ಪಿತಸ್ಥರ ವಿರುದ್ಧ ತೀವ್ರ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಯಿತು.

ಹುಬ್ಬಳ್ಳಿ:

ಪರೀಕ್ಷೆಗೆ ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಹೀನ ಕೃತ್ಯ ಎಸಗಿದ ಘಟನೆಯನ್ನು ಇಲ್ಲಿನ ವಿಪ್ರ ಬ್ಯುಸಿನೆಸ್ ಪೋರಂ (ವಿಬಿಎಫ್‌) ತೀವ್ರವಾಗಿ ಖಂಡಿಸಿದೆ.

ನಗರದಲ್ಲಿ ಶನಿವಾರ ನಡೆದ ವಿಬಿಎಫ್‌ನ ಸದಸ್ಯರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಶಿವಮೊಗ್ಗ ಮತ್ತು ಬೀದರ್‌ಗಳಲ್ಲಿ ನಡೆದ ಘಟನೆಗಳನ್ನು ತೀವ್ರವಾಗಿ ಖಂಡಿಸಿ ನಿರ್ಣಯ ಕೈಗೊಳ್ಳಲಾಯಿತಲ್ಲದೇ, ತಪ್ಪಿತಸ್ಥರ ವಿರುದ್ಧ ತೀವ್ರ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಯಿತು.

ಸಭೆಯಲ್ಲಿ ಸದಸ್ಯತ್ವ ಹೆಚ್ಚಳದ ಬಗ್ಗೆ ಹಾಗೂ ಸದಸ್ಯರು ಪರಸ್ಪರ ಸಹಕಾರ ಮತ್ತು ತಮ್ಮ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಮಾಹಿತಿ ವಿನಿಯಮ ಮಾಡಿಕೊಂಡು ಪ್ರಗತಿ ಸಾಧಿಸಲು ಪಣ ತೊಡಬೇಕೆಂದು ನಿರ್ಧರಿಸಲಾಯಿತು. ಹುಬ್ಬಳ್ಳಿ ವಿಬಿಎಫ್ ಅಗಸ್ತ್ಯ ವಾಹಿನಿಯ ಹೊಸ ಹೆಡ್ ಟೇಬಲ್‌ನ ಪದಾಧಿಕಾರಿಗಳಾದ ನಂದನ್ ಇನಾಂದಾರ್, ಸಂತೋಷ ಮೊಕಾಶಿ, ವೀಣಾ ಅಂಗಡಿ ಪದಗ್ರಹಣ ಮಾಡಿದರು.

ಸಭೆಯಲ್ಲಿ ವಿಪ್ರ ಬ್ಯುಸಿನೆಸ್ ಫೋರಂನ ಅಧ್ಯಕ್ಷ ಜಯತೀರ್ಥ ಕೆ.ಆರ್., ಸಂಘಟನಾ ಕಾರ್ಯದರ್ಶಿ ರವಿ ರಾಮನಾರಾಯಣ್, ಪ್ರಾದೇಶಿಕ ನಿರ್ದೇಶಕ ಶರದ ರಾಜಪುರೋಹಿತ್, ನಿಕಟಪೂರ್ವ ಹೆಡ್ ಟೇಬಲ್ ಪದಾಧಿಕಾರಿಗಳಾದ ಕೃಷ್ಣ ಜೋಶಿ, ಸಾಗರ್ ಗ್ರಾಮಪುರೋಹಿತ್, ವೈಶಾಲಿ ಪಾಟೀಲ ಹಾಜರಿದ್ದರು.

ಸಭೆಯಲ್ಲಿ ಉಡುಪಿಯ ಬಾ.ನಾ. ಶಾಂತಪ್ರಿಯ, ಶಂಕರ ಪಾಟೀಲ ಮತ್ತಿತರರು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌