ಜನಿವಾರ: ಏ. 25ಕ್ಕೆ 10 ಸಾವಿರ ಜನರಿಂದ ಪ್ರತಿಭಟನೆ

KannadaprabhaNewsNetwork |  
Published : Apr 22, 2025, 01:48 AM IST
ಹುಬ್ಬಳ್ಳಿಯ ದೇ​ಶ​ಪಾಂಡೆ ನ​ಗ​ರ​ದ ಶ್ರೀ ರಾ​ಘ​ವೇಂದ್ರ ಸ​ಭಾ​ ಭ​ವ​ನ​ದ​ಲ್ಲಿ ಅಖಿಲ ಭಾ​ರತ ಬ್ರಾ​ಹ್ಮಣ ಮಹಾಸಭಾದಿಂದ ಸಭೆ ನಡೆಸಲಾಯಿತು. | Kannada Prabha

ಸಾರಾಂಶ

ಅಂದಾಜು 10 ಸಾ​ವಿ​ರಕ್ಕೂ ಅ​ಧಿಕ ಜ​ನರು ಭಾ​ಗ​ವ​ಹಿ​ಸ​ಲಿ​ದ್ದಾರೆ. ಜ​ನಿ​ವಾರ ಧರಿಸಿ ರ್‍ಯಾ​ಲಿ​ಯಲ್ಲಿ ಭಾ​ಗ​ವ​ಹಿ​ಸು​ವಂತೆ ಸೂ​ಚಿ​ಸ​ಲಾ​ಯಿತು. ಅಂದು 10 ಗಂಟೆ​ಯೊ​ಳಗೆ ನಗರದ ಈ​ಶ್ವರ ದೇ​ವ​ಸ್ಥಾ​ನ​ದಲ್ಲಿ ಸ​ಮಾ​ವೇ​ಶ​ಗೊ​ಳ್ಳ​ಬೇಕು. ಅ​ಲ್ಲಿಂದ ರ್‍ಯಾಲಿಯ ಮೂ​ಲಕ ಡಾ.ಅಂಬೇ​ಡ್ಕರ್‌ ಸ​ರ್ಕಲ್‌ಗೆ ಆ​ಗ​ಮಿಸಿ ರಸ್ತೆ ಸಂಚಾರ ತಡೆದು ಪ್ರ​ತಿ​ಭ​ಟನೆ ನ​ಡೆ​ಸು​ವು​ದು.

ಹು​ಬ್ಬ​ಳ್ಳಿ: ಸಿ​ಇಟಿ ಪ​ರೀ​ಕ್ಷೆ​ಯಲ್ಲಿ ಬ್ರಾಹ್ಮಣ ವಿ​ದ್ಯಾ​ರ್ಥಿ​ಗಳ ಜ​ನಿ​ವಾರ ತೆ​ಗೆ​ಸಿದ ಪ್ರ​ಕ​ರಣ ಖಂಡಿಸಿ ಬ್ರಾ​ಹ್ಮ​ಣರು ಹಾಗೂ ಇ​ತರ ಎ​ಲ್ಲ ಸ​ಮಾ​ಜದ ಜ​ನಿ​ವಾರಧಾ​ರಿ​ಗಳ ಮು​ಖಂಡರ ನೇ​ತೃ​ತ್ವ​ದಲ್ಲಿ ಏ. 25ರಂದು ಪಂಚೆ, ​ಶಲ್ಯ ಹಾಗೂ ಜ​ನಿ​ವಾರ ಧ​ರಿ​ಸಿ​ಕೊಂಡು ಸರ್ಕಾರದ ವಿರುದ್ಧ ನಗರದಲ್ಲಿ ಪ್ರ​ತಿ​ಭ​ಟನಾ ರ್‍ಯಾಲಿ ನ​ಡೆ​ಸಲು ನಿ​ರ್ಧಾರ ಕೈ​ಗೊ​ಳ್ಳ​ಲಾ​ಯಿ​ತು.

ಇ​ಲ್ಲಿನ ದೇ​ಶ​ಪಾಂಡೆ ನ​ಗ​ರ​ದ ಶ್ರೀ ರಾ​ಘ​ವೇಂದ್ರ ಸ​ಭಾ​ ಭ​ವ​ನ​ದ​ಲ್ಲಿ ಅಖಿಲ ಭಾ​ರತ ಬ್ರಾ​ಹ್ಮಣ ಮಹಾಸಭಾ ಧಾ​ರ​ವಾಡ ಜಿಲ್ಲೆ ಹಾಗೂ ವಿ​ವಿಧ ಸ​ಮಾ​ಜದ ಮು​ಖಂಡರ ನೇ​ತೃ​ತ್ವ​ದ​ಲ್ಲಿ ಸೋ​ಮ​ವಾರ ಸಂಜೆ ನ​ಡೆದ ಪೂ​ರ್ವ​ಭಾವಿ ಸ​ಭೆ​ಯಲ್ಲಿ ತೀರ್ಮಾನಿಸಲಾಯಿತು.

ಅಂದಾಜು 10 ಸಾ​ವಿ​ರಕ್ಕೂ ಅ​ಧಿಕ ಜ​ನರು ಭಾ​ಗ​ವ​ಹಿ​ಸ​ಲಿ​ದ್ದಾರೆ. ಜ​ನಿ​ವಾರ ಧರಿಸಿ ರ್‍ಯಾ​ಲಿ​ಯಲ್ಲಿ ಭಾ​ಗ​ವ​ಹಿ​ಸು​ವಂತೆ ಸೂ​ಚಿ​ಸ​ಲಾ​ಯಿತು. ಅಂದು 10 ಗಂಟೆ​ಯೊ​ಳಗೆ ನಗರದ ಈ​ಶ್ವರ ದೇ​ವ​ಸ್ಥಾ​ನ​ದಲ್ಲಿ ಸ​ಮಾ​ವೇ​ಶ​ಗೊ​ಳ್ಳ​ಬೇಕು. ಅ​ಲ್ಲಿಂದ ರ್‍ಯಾಲಿಯ ಮೂ​ಲಕ ಡಾ.ಅಂಬೇ​ಡ್ಕರ್‌ ಸ​ರ್ಕಲ್‌ಗೆ ಆ​ಗ​ಮಿಸಿ ರಸ್ತೆ ಸಂಚಾರ ತಡೆದು ಪ್ರ​ತಿ​ಭ​ಟನೆ ನ​ಡೆ​ಸು​ವು​ದು. ತದನಂತರ ಸಂಗೊಳ್ಳಿ ರಾ​ಯಣ್ಣ ಸ​ರ್ಕಲ್‌ ಮೂ​ಲಕ ತ​ಹ​ಸೀ​ಲ್ದಾರ್ ಕ​ಚೇ​ರಿಗೆ ಆ​ಗ​ಮಿಸಿ, ಪ್ರ​ತಿ​ಭ​ಟನಾ ಸ​ಮಾ​ವೇಶ ಕೈಗೊಳ್ಳುವುದರ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು.

ಅಖಿಲ ಕ​ರ್ನಾ​ಟ​ಕ ಬ್ರಾ​ಹ್ಮಣ ಸ​ಮಾ​ಜದ ಧಾ​ರ​ವಾಡ ಜಿ​ಲ್ಲಾ ಪ್ರ​ತಿ​ನಿಧಿ ಲ​ಕ್ಷ್ಮಣ ಕು​ಲ​ಕರ್ಣಿ ಮಾ​ತ​ನಾಡಿ, ಅ​ನೇಕ ಕ​ಡೆ​ಗ​ಳಲ್ಲಿ ಬ್ರಾ​ಹ್ಮಣ ವಿ​ದ್ಯಾ​ರ್ಥಿ​ಗಳ ಜ​ನಿ​ವಾರ ತೆ​ಗೆ​ಸುವ ಮೂ​ಲಕ ನೀಚ ಕೃತ್ಯ ಮಾ​ಡ​ಲಾ​ಗಿದೆ. ಇದರಿಂದ ಬ್ರಾಹ್ಮಣ ಸಮಾಜಕ್ಕೆ ಅಪಮಾನವಾಗಿದ್ದು, ಇದರ ವಿರುದ್ಧ ​ಉಗ್ರ ಹೋರಾಟ ಮಾ​ಡು​ವು​ದು ಅ​ನಿ​ವಾ​ರ್ಯ​ವಾ​ಗಿದೆ. ಹಿಂದೂ ಸಮಾಜಕ್ಕೆ ಏನಾದರೂ ಅನ್ಯಾಯ, ಅ​ಪ​ಮಾನ ಹಾ​ಗೂ ದೌರ್ಜನ್ಯ ಆದಲ್ಲಿ ರಕ್ತಕ್ರಾಂತಿಗೂ ಸಿ​ದ್ಧ​ರಿ​ದ್ದೇವೆ ಎಂದು ಎ​ಚ್ಚ​ರಿ​ಸಿ​ದ​ರು.

ವಿಶ್ವಕರ್ಮ ಸಮಾಜದ ಮುಖಂಡ ರಾಜೇಶ ಬಡಿಗೇರ, ಮರಾಠಾ ಸಮಾಜದ ಮುಖಂಡ ಗಾಯಕವಾಡ ಮಾ​ತ​ನಾ​ಡಿ, ಬ್ರಹ್ಮ-ವಿಷ್ಣು- ಮಹೇಶ್ವರ ಕೂಡಿದಾಗ ಮಾತ್ರ ಜನಿವಾರ ಆಗುತ್ತದೆ. ಜನಿವಾರ ಎಂಬುದನ್ನು ಸಾಕ್ಷಾತ್‌ ಭಗವಂತನ ಪ್ರತಿ ರೂಪವಾಗಿದೆ. ಅದಕ್ಕೆ ಕತ್ತರಿ ಹಾಕಿಸುವ ಮೂಲಕ ಬ್ರಾಹ್ಮಣ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಉಗ್ರ ಹೋರಾಟದ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸೋಣ ಎಂದರು.

ಸ​ಮಾ​ಜದ ಮು​ಖಂಡ ಎ.ಸಿ. ಗೋಪಾಲ ಮಾತನಾಡಿ, ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದ ಸಭೆ ಅಥವಾ ಹೋರಾಟವಲ್ಲ ಎಂಬುದನ್ನು ಮೊದಲು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ವಿ​ದ್ಯಾ​ರ್ಥಿ​ಗ​ಳಿಂದ ಜನಿವಾರದ ಜತೆಗೆ ಲಿಂಗ, ರುದ್ರಾಕ್ಷಿ ಸಹ ತೆಗೆಸಲಾಗಿದೆ. ಇದನ್ನು ಸ್ಪಷ್ಟಪಡಿಸಿಕೊಂಡು, ಅವರೆಲ್ಲನ್ನೂ ಒಗ್ಗೂಡಿಸಿಕೊಂಡು ಪಕ್ಷಾತೀತವಾಗಿ ತ​ಪ್ಪಿ​ತ​ಸ್ಥರ ವಿ​ರು​ದ್ಧ ಹೋರಾಟ ಮಾಡೋಣ ಎಂದರು.

ಡಾ. ಜಿ.ಬಿ. ಸತ್ತೂರ, ಏ. 25ರಂದು ನ​ಡೆ​ಯು​ವ ರ್‍ಯಾ​ಲಿಯ ದಿ​ನ​ದಂದು ಒಂದು ಸಾ​ವಿರ ಜ​ನಿವಾರ ಹಾಗೂ ಕು​ಡಿ​ಯುವ ನೀ​ರಿನ ವ್ಯ​ವ​ಸ್ಥೆ​ಯನ್ನು ಕ​ಲ್ಪಿ​ಸು​ವು​ದಾಗಿ ಭ​ರ​ವಸೆ ನೀ​ಡಿ​ದ​ರು.

ಮು​ಖಂಡ ಜ​ಯ​ತೀರ್ಥ ಕಟ್ಟಿ, ನಾವು ಹಿಂದೂ​ಗ​ಳು ಮು​ಸ್ಲಿಮರ ಹಿಜಾಬ್ ತೆಗೆಸಿದ ಕಾರಣಕ್ಕೆ ಅವರು ಬ್ರಾಹ್ಮಣರ ಜನಿವಾರ ತೆಗೆಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ನ​ಡೆ​ಯನ್ನು ಸ​ಮಸ್ತ ಹಿಂದೂ​ಗಳು ಉ​ಗ್ರ​ವಾಗಿ ಖಂಡಿ​ಸ​ಬೇ​ಕಿದೆ ಎಂದರು.

ಸಂಧ್ಯಾ ದಿ​ಕ್ಷೀ​ತ್‌, ಜನಿವಾರ ಎಂಬುದು ಕೇವಲ ದಾರ ಅಲ್ಲ. ಅದು ನಮ್ಮ ಜೀವನದ ಆಧಾರ. ಅದನ್ನೆ ಕಿತ್ತು ಹಾಕುವ ನೀಚ ಸಂಸ್ಕೃತಿ ಸರಿಯಲ್ಲ. ಹಿಂದೆ ಮಹಿಳೆಯರಿಗೆ ಜನಿವಾರ ಇತ್ತು. ಅದನ್ನು ಮುಂದುವರೆಸೋಣ ಎಂದು ಸ​ಲ​ಹೆ ನೀ​ಡಿ​ದ​ರು.

ಸ​ಭೆ​ಯಲ್ಲಿ ದತ್ತಮೂರ್ತಿ ಕುಲಕರ್ಣಿ, ವೇ​ಣು​ಗೋ​ಪಾಲ ಆ​ಚಾ​ರ್ಯ, ಬಿಂದುಮಾಧವ ಕುಲಕರ್ಣಿ, ಶಂಕರ ಪಾಟೀಲ ಕುಲಕರ್ಣಿ, ಹನುಮಂತ, ವೇಣುಗೋಪಾಲ ಆಚಾರ್ಯ, ನರೇಂದ್ರ ಕುಲಕರ್ಣಿ, ಜೆ.ಬಿ.ಪಾಟೀಲ ಕುಲಕರ್ಣಿ, ರವಿ ಆಚಾರ್ಯ, ಮನೋಹರ ಪರ್ವತಿ ಹಾಗೂ ಸರ್ವ ಬ್ರಾಹ್ಮಣ ಸಮಾಜ, ಆರ್ಯ ವೈಶ್ಯ ಸಮಾಜ,ಎಸ್‌.ಎಸ್‌.ಕೆ. ಸಮಾಜ, ಜೈನ ಸಮಾಜ ಹಾಗೂ ಮರಾಠಾ ಸಮಾಜದ ಮುಖಂಡರು ಇ​ದ್ದ​ರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!