ಮಠಗಳ ಅನ್ನ ದಾಸೋಹದಿಂದ ಸಂಸ್ಕೃತಿಯಿಂದ ಪ್ರೇರೇಪಿತನಾಗಿ ಬಿಸಿಯೂಟ

KannadaprabhaNewsNetwork | Published : Feb 8, 2024 1:31 AM

ಸಾರಾಂಶ

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ತೀವ್ರವಾದ ಬರಗಾಲವಿತ್ತು, ಆದರೂ ಸಹ ಶಾಲಾ ಮಕ್ಕಳು ಹಸಿದು ಪಾಠ ಕೇಳಲು ಆಗುವುದಿಲ್ಲ ಎಂಬ ಕಾರಣದಿಂದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ಮುಂದುವರೆಸುವಂತೆ ಸೂಚನೆ ಕೊಟ್ಟಿದ್ದೆ, ಬಿಸಿಯೂಟ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ನನಗೆ ಖುಷಿ ಕೊಟ್ಟ ವಿಷಯ ಎಂದರಲ್ಲದೆ ರಾಜ್ಯದಲ್ಲಿ ಬರಗಾಲ ಮತ್ತು ವರನಟ ಡಾ. ರಾಜ್ ಕುಮಾರ್ ಅವರ ಅಪಹರಣದಿಂದ ರಾಜ್ಯದಲ್ಲಿ ಸಾಕಷ್ಟು ಅಡಚಣೆಗಳುಂಟಾಗಿ ಕತ್ತಲು ಕವಿದ ವಾತಾವರಣವಿತ್ತು. ಆ ಸನ್ನಿವೇಶದಲ್ಲಿ ಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮಿಜೀ, ಸುತ್ತೂರಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ನೀಡಿದ ಧೈರ್ಯದಿಂದ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಯಿತು

- ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ

-----

ಕನ್ನಡಪ್ರಭ ವಾರ್ತೆ ನಂಜನಗೂಡು

ಮಠಗಳ ಅನ್ನ ದಾಸೋಹದಿಂದ ಸಂಸ್ಕೃತಿಯಿಂದ ಪ್ರೇರೇಪಿತನಾಗಿ ನಾನು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ 2001ರಲ್ಲಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರವನ್ನು ಪ್ರಾರಂಭಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದರು.

ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ರಾಜ್ಯಮಟ್ಟದ ಭಜನಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ನೆ

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ತೀವ್ರವಾದ ಬರಗಾಲವಿತ್ತು, ಆದರೂ ಸಹ ಶಾಲಾ ಮಕ್ಕಳು ಹಸಿದು ಪಾಠ ಕೇಳಲು ಆಗುವುದಿಲ್ಲ ಎಂಬ ಕಾರಣದಿಂದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ಮುಂದುವರೆಸುವಂತೆ ಸೂಚನೆ ಕೊಟ್ಟಿದ್ದೆ, ಬಿಸಿಯೂಟ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ನನಗೆ ಖುಷಿ ಕೊಟ್ಟ ವಿಷಯ ಎಂದರಲ್ಲದೆ ರಾಜ್ಯದಲ್ಲಿ ಬರಗಾಲ ಮತ್ತು ವರನಟ ಡಾ. ರಾಜ್ ಕುಮಾರ್ ಅವರ ಅಪಹರಣದಿಂದ ರಾಜ್ಯದಲ್ಲಿ ಸಾಕಷ್ಟು ಅಡಚಣೆಗಳುಂಟಾಗಿ ಕತ್ತಲು ಕವಿದ ವಾತಾವರಣವಿತ್ತು. ಆ ಸನ್ನಿವೇಶದಲ್ಲಿ ಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮಿಜೀ, ಸುತ್ತೂರಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ನೀಡಿದ ಧೈರ್ಯದಿಂದ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಯಿತು ಎಂದರು.

ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಧಾರ್ಮಿಕ ಸಂಸ್ಥೆಗಳಿವೆ. ಆದರೆ ಕೆಲವೆ ಸಂಸ್ಥೆಗಳು ದಾಸೋಹ, ಶೈಕ್ಷಣಿಕ ಕೊಡುಗೆ ಮೂಲಕ ಸಮಾಜದಲ್ಲಿ ಜನರಿಗೆ ನೆರವಾಗುತ್ತಿವೆ. ಅದರಲ್ಲಿ ಸುತ್ತೂರು ಮಠದ ಸಮಾಜ ಸೇವೆ ಅನನ್ಯವಾದದ್ದು ಎಂದರು.

ವಿಧಾನ ಪರಿಷತ್ ನ ಪ್ರತಿಪಕ್ಷದ ನಾಯಕರಾದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮಾಜದಲ್ಲಿ ಮಠಗಳಿಗೆ ಉನ್ನತ ಸ್ಥಾನವಿದೆ. ಆರೋಗ್ಯ ಕರ ಸಮಾಜ ನಿರ್ಮಾಣದಲ್ಲಿ ಮಠಗಳ ಪಾತ್ರ ಹೆಚ್ಚಿನದಾಗಿದೆ. ಮನುಕುಲ ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿದಾಗ ಮಠಗಳು ಜನರ ನೆರವಿಗೆ ಧಾವಿಸಿರುವುದು ಸ್ಮರಣೀಯ. ಸಮಾಜಕ್ಕೆ ಮಠಗಳು ಮಹತ್ತರವಾದ ಸೇವೆ, ನೆರವುಗಳನ್ನು ನಿರಂತರವಾಗಿ ನೀಡುತ್ತಿವೆ. ಶ್ರೀಗಳು ಜಾತ್ರೆ ಸಂಧರ್ಭದಲ್ಲಿ ಭಜನಾ ಮೇಳ, ದೇಸೀ ಆಟಗಳು ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ.

ನಮ್ಮ ಬಾಲ್ಯದಲ್ಲಿ ನಾವುಗಳು ಭಜನೆಯಲ್ಲಿ ತೊಡಗುತ್ತಿದ್ದೆವು. ಭಜನೆ, ತಾಳ, ಮುಂತಾದವುಗಳ ಸಂಸ್ಕ್ರತಿ ಮರೆಯಾಗುತ್ತಿದೆ ಎಂಬ ಆತಂಕದ ಪರಿಸ್ಥಿತಿಯಲ್ಲಿ ಶ್ರೀಗಳು ಜಾತ್ರಾ ಮಹೋತ್ಸವದಲ್ಲಿ ಭಜನೆ, ಜನಪದ ದೇಸೀ ಆಟಗಳು ಮುಂತಾದ ಕಾರ್ಯಗಳನ್ನು ಆಯೊಜಿಸುವ ಮೂಲಕ ನಮ್ನ ದೇಸೀ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.

ಚಿತ್ರನಟ ಡಾರ್ಲಿಂಗ್ ಕೃಷ್ಣ, ಎಸ್.ಕೆ. ಮಂಜುನಾಥ್, ಉದ್ಯಮಿ ಮೂಲ್ ಚಂದ್ ನೆಹರ್, ಶ್ರೀಶೈಲದ ಅಕ್ಕಮಹದೇವಿ ಚೈತನ್ಯ ಪೀಠದ ತಪೋ ರತ್ನ ಕರುಣಾದೇವಿ ಮಾತಾ, ಧಾರವಾಡದ ಗುರುಬಸವ ಮಹಾ ಮನೆಯ ಬಸವಾನಂದ ಸ್ವಾಮೀಜಿ ಇದ್ದರು.

Share this article