- ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮ
- - -ಚನ್ನಗಿರಿ: ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿರುವ ಕೇಂದ್ರ ಸರ್ಕಾರದ ಜಿಲ್ಲಾ ಜವಾಹರ್ ನವೋದಯ ವಿದ್ಯಾಲಯಕ್ಕೆ 5 ಸ್ವಾರ್ ಮಾನ್ಯತೆಗೆ ಪಾತ್ರವಾಗಿ, ಪ್ರಶಸ್ತಿ ಪಡೆದಿದೆ. ಜೂ.20ರಂದು ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದ್ಯಾಲಯದ ಪ್ರಾಂಶುಪಾಲರಾದ ಎ.ವಿಜಯ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು 5 ಸ್ವಾರ್ ಮಾನ್ಯತಾ ಪ್ರಶಸ್ತಿ ನೀಡಿ ಗೌರವಿಸಿದರು.
ಗೃಹ ಮಂಡಳಿ ಸಹಯೋಗದೊಂದಿಗೆ ಕೇಂದ್ರ ಮತ್ತು ಪುನರ್ ನವೀಕರಿಸಬಹುದಾದ ಇಂಧನ ಸಚಿವಾಲಯವು ಈ ಪ್ರಶಸ್ತಿ ಘೋಷಿಸಿತ್ತು. ಕಾರ್ಯಕ್ರಮದಲ್ಲಿ ಗೃಹ ಮಂಡಳಿ ಸಿಇಒ ಸಂಜಯ್ ಸೇಠ್ ಉಪ ಸಿಇಒ ಶಿಬ್ ನಮ್ ಬಸ್ಸಿ ಸಮಾರಂಭದಲ್ಲಿ ಉಪಸ್ಥಿತರಿದ್ದರು ಎಂದು ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.ವಿದ್ಯಾಲಯದಲ್ಲಿ ಮೂಲ ಸೌಕರ್ಯಗಳು, ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಸಂರಕ್ಷಣೆ ಇಂತಹ ಸಾಧನೆ ಆಧಾರದ ಮೇಲೆ ಪ್ರಶಸ್ತಿ ನೀಡಲಾಗಿದೆ. ಪ್ರಧಾನಮಂತ್ರಿ ಜವಾಹರ ನವೋದಯ ವಿದ್ಯಾಲಯಕ್ಕೆ ಕೇಂದ್ರ ಸರ್ಕಾರದ ಮೊದಲ 5 ನಕ್ಷತ್ರಗಳ ಮಾನ್ಯತೆ ಪಡೆದ ಶಾಲೆಗಳಲ್ಲಿ ತಾಲೂಕಿನ ದೇವರಹಳ್ಳಿ ವಿದ್ಯಾಲಯ ಒಂದಾಗಿದೆ. ಇಂತಹ ಸಾಧನೆಗಾಗಿ ವಿದ್ಯಾಲಯದ ಶಿಕ್ಷಕರುಗಳನ್ನು ಅಭಿನಂದಿಸಿದ್ದಾರೆ.
ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಆನ್ ಲೈನ್ ನೋಂದಣಿ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.- - -
-24ಕೆಸಿಎನ್‌ಜಿ1.ಜೆಪಿಜಿ:ದೇವರಹಳ್ಳಿಯ ಜವಾಹರ ನವೋದಯ ವಿದ್ಯಾಲಯಕ್ಕೆ ಲಭಿಸಿದ 5 ಸ್ವಾರ್ ಮಾನ್ಯತೆ ಪ್ರಶಸ್ತಿಯನ್ನು ಪ್ರಾಂಶುಪಾಲೆ ಎ.ವಿಜಯ ಸ್ವೀಕರಿಸಿದರು.