ಲಕ್ಷ್ಮೇಶ್ವರ: ಹಿರೇಮಲ್ಲಾಪುರ ಗ್ರಾಮದಲ್ಲಿ ಎಥೆನಾಲ್ ಕಾರ್ಖಾನೆಯವರು ಹಾಗೂ ಅವರ ಸಂಬಂಧಿಕರ ಹೆಸರಿನಲ್ಲಿ 50 ಎಕರೆ ಜಮೀನು ಖರೀದಿಗೆ ಮುಂದಾಗಿದ್ದು, ಈ ಖರೀದಿ ಕಾರ್ಖಾನೆಗೋ ಅಥವಾ ತಮ್ಮ ಸ್ವಂತ ಉಳುಮೆ ಮಾಡಲು ಖರೀದಿಸುತ್ತಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಇಸ್ಮಾಯಿಲ್ ಆಡೂರ, ಪ್ರ. ಕಾರ್ಯದರ್ಶಿ ಹಾಲಪ್ಪ ಭಂಡಾರಿ, ಹಾಗೂ ತಾಲೂಕು ಸಂಚಾಲಕ ರಮೇಶ ಹಂಗನಕಟ್ಟಿ ಆಗ್ರಹಿಸಿದರು.
ಅಲ್ಲದೆ ಹತ್ತಿರ ಸರ್ಕಾರಿ ಶಾಲೆ ಇದೆ. ಗ್ರಾಮದ ರೈತರ ಜಮೀನುಗಳಿಗೆ ಹಾನಿಯಾಗಲಿದೆ. ಇದರ ಮಧ್ಯೆ ಮತ್ತೆ 50 ಎಕರೆ ಜಮೀನು ಖರೀದಿ ಮಾಡಲು ಹೊರಟಿದ್ದು, ಜಮೀನು ಖಾತೆ ಬದಲಾವಣೆ ಮಾಡಬಾರದು. ಇದಕ್ಕೆ ಸಂಪೂರ್ಣ ವಿರೋಧ ಇದ್ದು, ಒಂದು ವೇಳೆ ಖಾತೆ ಬದಲಾವಣೆ ಮಾಡುವುದು ಕಂಡುಬಂದಲ್ಲಿ ಜಯಕರ್ನಾಟಕ ಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆ, ಗ್ರಾಮಸ್ಥರಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ತಾಲೂಕು ಗೌರವಾಧ್ಯಕ್ಷ ಇಶಾಕಭಾಷಾ ಹರಪನಹಳ್ಳಿ, ನಾಗರಾಜ ಉಪ್ಪಾರ, ಯಲ್ಲಪ್ಪ ಹಂಜಗಿ, ಬಸವರಾಜ ಮೇಲ್ಮುರಿ, ಶಾಹಿದ ಉಳ್ಳಟ್ಟಿ, ಅಬ್ದುಲ್ ಕರೀಂ, ಎ.ಎಂ. ಕೊಪ್ಪಳ, ಮಂಜುನಾಥ ಶಿರಹಟ್ಟಿ, ಬಸಣ್ಣ ಮೂಕಿ, ಮೈನು ಮೊಮೀನ್, ಜಗದೀಶ ತಳವಾರ, ಮಲ್ಲು ಕಡಕೋಳ, ಹನುಮಂತಪ್ಪ ಬೆಟಗೇರಿ, ಮಾದೇವಪ್ಪ ತಳವಾರ, ಹನುಮಂತ ಕಿಳ್ಳಿಕ್ಯಾತರ ಇದ್ದರು. ಏ. 1ರಿಂದ ಉಚಿತ ಟ್ಯೂಷನ್ ಆರಂಭಗದಗ: ನಗರದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಏ. 1ರಿಂದ ಬೇಸಿಗೆಯ ಟ್ಯೂಷನ್ ವರ್ಗಗಳನ್ನು ಆರಂಭಿಸಲಿದೆ. ಪ್ರತಿದಿನ ಮೊದಲ ಬ್ಯಾಚ್ ಬೆಳಗ್ಗೆ 7ಕ್ಕೆ ಆರಂಭಗೊಳ್ಳುವುದು. ವಿಶೇಷವಾಗಿ 8ನೇ ತರಗತಿಗೆ ಪ್ರವೇಶ ಪಡೆದಿರುವ ಗ್ರಾಮೀಣ ಪ್ರದೇಶದ ಆಯ್ದ 20 ಬಡ ವಿದ್ಯಾರ್ಥಿಗಳಿಗೆ 10ನೇ ತರಗತಿಯವರೆಗೂ ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಉಚಿತ ಟ್ಯೂಷನ್‌ದೊಂದಿಗೆ ಉಚಿತ ಊಟ ಮತ್ತು ಉಚಿತ ವಸತಿ ಸೌಲಭ್ಯವಿದೆ.(ವಿದ್ಯಾರ್ಥಿನಿಯರಿಗೆ ವಸತಿಗೆ ಅವಕಾಶವಿಲ್ಲ)ಅನುಭವಿಕ ಶಿಕ್ಷಕ, ಶಿಕ್ಷಕಿಯರ ತಂಡವು ಉಚಿತ ಟ್ಯೂಷನ್ ಹೇಳಲು ಸನ್ನದ್ಧಗೊಂಡಿದೆ. ಆಸಕ್ತಿವಿರುವ ವಿದ್ಯಾರ್ಥಿ/ನಿಯರು ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮ, ಡಾ. ಪಂ. ಪುಟ್ಟರಾಜ ಗವಾಯಿಗಳ ಪುತ್ಥಳಿ ಹತ್ತಿರ(ಭೂಮರಡ್ಡಿ ಸರ್ಕಲ್) ಗದಗ. ಮೊ. 9902652860, 8495877018ಕ್ಕೆ ಮಾ. 28ರೊಳಗೆ ಸಂಪರ್ಕಿಸಿ ಹೆಸರು ನೋಂದಾಯಿಸಲು ಶಿಕ್ಷಣಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.