ಜೇಸಿ ಸಂಸ್ಥೆಯಿಂದ ಸಮಾಜಕ್ಕೆ ಉಪಯೋಗವಾದ ಕಾರ್ಯಕ್ರಮ: ಸ್ಟರ್ ಜಸ್ಲಿನ್ ಮೆಚ್ಚುಗೆ

KannadaprabhaNewsNetwork |  
Published : Oct 12, 2025, 01:00 AM IST
 ನರಸಿಂಹರಾಜಪುರ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯವರು ಜೇಸಿ ಸಪ್ತಾಹದ ಅಂಗವಾಗಿ ಪುಷ್ಪಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ  ಕ್ಷಯ ರೋಗ ಅರಿವು ಕಾರ್ಯಕ್ರಮದಲ್ಲಿ  ಜಿಲ್ಲಾ ಹಿರಿಯ ಡಿ.ಆರ್.ಟಿ.ವಿ. ಮೇಲ್ವೀಚಾರಕ ಎಚ್.ಕೆ.ಕೃಷ್ಣಮೂರ್ತಿ ಹಾಗೂ ಪುಷ್ಪ ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಸಿಸ್ಟರ್ ಜೋಳಿ ಜೋಸ್ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನರಸಿಂಹರಾಜಪುರ, ಜೇಸಿ ಸಂಸ್ಥೆ ಜೇಸಿ ಸಪ್ತಾಹದಲ್ಲಿ ಸಮಾಜಕ್ಕೆ ಉಪಯೋಗವಾಗುವ ಕಾರ್ಯಕ್ರಮ ನಡೆಸುತ್ತಿದೆ ಎಂದು ಪುಷ್ಪ ಆಸ್ಪತ್ರೆ ಸಿಸ್ಟರ್ ಜಸ್ಲಿನ್ ಮೆಚ್ಚುಗೆ ವ್ಯಕ್ತಪಡಿಸಿದರು.

- ಪುಷ್ಪ ಆಸ್ಪತ್ರೆಯ ಸಭಾಂಗಣದಲ್ಲಿ ಕ್ಷಯ ರೋಗ ಕುರಿತು ಅರಿವು ಹಾಗೂ ರಸ ಪ್ರಶ್ನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಜೇಸಿ ಸಂಸ್ಥೆ ಜೇಸಿ ಸಪ್ತಾಹದಲ್ಲಿ ಸಮಾಜಕ್ಕೆ ಉಪಯೋಗವಾಗುವ ಕಾರ್ಯಕ್ರಮ ನಡೆಸುತ್ತಿದೆ ಎಂದು ಪುಷ್ಪ ಆಸ್ಪತ್ರೆ ಸಿಸ್ಟರ್ ಜಸ್ಲಿನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಪುಷ್ಪ ಆಸ್ಪತ್ರೆ ಸಭಾಂಗಣದಲ್ಲಿ ಪುಷ್ಪ ಆಸ್ಪತ್ರೆ, ಜ್ವಾಲಾ ಮಾಲಿನಿ ಜೇಸಿ ಸಂಸ್ಥೆ ಮತ್ತು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಜ್ವಾಲಾಮಾಲಿನಿ ಜೇಸಿ ಸಪ್ತಾಹದ 3 ನೇ ದಿನ ನಡೆದ ಪುಷ್ಪ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕ್ಷಯ ರೋಗದ ಕುರಿತು ಅರಿವು ಹಾಗೂ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಗಳಲ್ಲಿ ಅಡಗಿರುವಂತಹ ಒಂದು ಆಸಕ್ತಿದಾಯಕ ದಿವ್ಯಶಕ್ತಿಯನ್ನು ಸಮಾಜಕ್ಕೆ ತಿಳಿಸುವಂತಹ ಕಾರ್ಯವನ್ನು ಜೇಸಿ ಸಂಸ್ಥೆ ನಡೆಸುತ್ತಿದೆ. ಈ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರಲಿ ಎಂದರು. ಚಿಕ್ಕಮಗಳೂರು ಜಿಲ್ಲಾ ಹಿರಿಯ ಡಿಆರ್‌ಟಿಬಿ ಮೇಲ್ವಿಚಾರಕ ಎಚ್.ಕೆ.ಕೃಷ್ಣಮೂರ್ತಿ ಮಾತನಾಡಿ, ಕ್ಷಯ ರೋಗ ಎಂಬುದು ಒಂದು ಪುರಾತನ ಕಾಯಿಲೆ, ದೇಹ ಕ್ಷೀಣಿಸಿ ಮರಣ ಹೊಂದುವಂತಹ ಕಾಯಿಲೆಯಾಗಿದೆ, ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಗಾಳಿ ತುಂತುರುಗಳ ಮೂಲಕ ಹರಡುವ ಮಾರಣಾಂತಿಕ ಕಾಯಿಲೆಯಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ್‌ ಗೌಡ ಮಾತನಾಡಿ, ಪ್ರತಿ ದಿನ ಹೊಸತನ್ನು ಕಲಿಯಲು ಹಾಗೂ ಜ್ಞಾನ ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರೂ ಪುಸ್ತಕಗಳನ್ನು ಓದಬೇಕು. ಪುಸ್ತಕ ಎಲ್ಲರಿಗೂ ಒಳ್ಳೆಯ ಸ್ನೇಹಿತ ಇದ್ದಂತೆ. ಮೊಬೈಲ್ ನೋಡುವುದನ್ನು ಕಡಿಮೆ ಮಾಡಿ ಒಳ್ಳೆಯ ಸಾಹಿತ್ಯ ಓದುವ ಕಡೆ ಗಮನ ಹರಿಸಿಸುವಂತೆ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಪುಷ್ಪ ಆಸ್ಪತ್ರೆ ಆಡಳಿತಾಧಿಕಾರಿ ಸಿಸ್ಟರ್ ಪ್ರಿನ್ಸಿ ಜೀಸ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಜೇಸಿ ಸಂಸ್ಥೆ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಜಿಲ್ಲಾ ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಎಚ್. ಕೃಷ್ಣಮೂರ್ತಿ, ಪುಷ್ಪಾ ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಸಿಸ್ಟರ್ ಜೋಳಿ ಜೋಸ್ ಅವರನ್ನು ಸನ್ಮಾನಿಸಲಾಯಿತು.

ನಂತರ ತಾಲೂಕು ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್ಕರ್ ವಿದ್ಯಾರ್ಥಿನಿಯರಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು. ಒಟ್ಟು 5 ತಂಡ ಒಳಗೊಂಡ 36 ವಿದ್ಯಾರ್ಥಿನಿಯರು ಭಾಗವಹಿಸಿ ಪ್ರಥಮ ದ್ವಿತೀಯ ತೃತೀಯ ಬಹುಮಾನ ಪಡೆದರು. ಜೇಸಿ ಸಪ್ತಾಹ ಪ್ರಧಾನ ನಿರ್ದೇಶಕ ಜೋಯಿ ಬ್ರೋ ಜೇಸಿ ವಾಣಿ ವಾಚಿಸಿದರು. ಜೇಸಿ ಸಂಸ್ಥೆ ಕಾರ್ಯದರ್ಶಿ ಮಿಥುನ್ ಗೌಡ, ಕಾರ್ಯಕ್ರಮ ನಿರ್ದೇಶಕ ಪವನಕರ್ , ಸುಹಾಸ್ ಇದ್ದರು.

PREV

Recommended Stories

ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌
ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ