ಜೆಡಿಎಸ್ ಬೆಂಬಲತ ಅಭ್ಯರ್ಥಿ ಇರಿಗೇನಹಳ್ಳಿ ಶ್ರೀನಿವಾಸ್

KannadaprabhaNewsNetwork | Published : May 16, 2025 2:25 AM
Follow Us

ಸಾರಾಂಶ

ವಿಜಯಪುರ: ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಇರಿಗೇನಹಳ್ಳಿ ಶ್ರೀನಿವಾಸ್ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ವಿಜಯಪುರ: ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಇರಿಗೇನಹಳ್ಳಿ ಶ್ರೀನಿವಾಸ್ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಹೋಬಳಿಯ ಭಟ್ರೇನಹಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಗುರುವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಜೆಡಿಎಸ್ ರೈತರು, ಕೃಷಿ ಕಾರ್ಮಿರು, ಬಡವರ ಪರ ಹೋರಾಡಿಕೊಂಡು ಬಂದಿದೆ. ಶ್ರೀನಿವಾಸ್, ಎರಡು ಬಾರಿ ನಿರ್ದೇಶಕರಾಗಿ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಡೇರಿಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸ್ವತಃ ಅವರೂ ಹಾಲು ಉತ್ಪಾದಕರಾಗಿದ್ದು, ಅವರ ಶ್ರಮ ಗೊತ್ತಿದೆ. ತಾಲೂಕಿನಲ್ಲಿ ನಡೆದಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗಳಲ್ಲಿ ೧೫೯ ಸಂಘಗಳಲ್ಲಿ ಹೆಚ್ಚಿನ ಸಂಖ್ಯೆಯ ಸಂಘಗಳಲ್ಲಿ ಜೆಡಿಎಸ್ ಬೆಂಬಲಿತ ಅಧ್ಯಕ್ಷರಿದ್ದಾರೆ. ಹಾಲು ಉತ್ಪಾದಕರು ಜೆಡಿಎಸ್ ಮೇಲೆ ಇಟ್ಟಿರುವ ನಂಬಿಕೆ ಎಂದಿಗೂ ಬದಲಾಗುವುದಿಲ್ಲ. ಶ್ರೀನಿವಾಸ್ ಅವರನ್ನು ಮೂರನೇ ಬಾರಿಗೆ ಗೆಲ್ಲಿಸಿಕೊಳ್ಳುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಬೇಕು. ಪಕ್ಷದ ಪ್ರತಿಯೊಬ್ಬ ಮುಖಂಡರು ಶ್ರಮಿಸಬೇಕು ಎಂದರು.

ಇರಿಗೇನಹಳ್ಳಿ ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಸರಕಾರಿ ಶಾಲೆಗಳಿಗೆ ಪೀಠೋಪಕರಣಗಳು, ಹಳ್ಳಿಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು, ಡೇರಿ ಕಟ್ಟಡಗಳಿಗೆ ಬಣ್ಣ, ನಂದಿನಿ ಉತ್ಪನ್ನಗಳ ಪ್ರಚಾರ, ರಾಸುಗಳಿಗೆ ವಿಮೆ, ಪಶುಗಳ ಆರೋಗ್ಯ, ಆಹಾರ ಪೂರೈಕೆ, ಲಸಿಕೆ ಸೇರಿದಂತೆ ವಿವಿಧ ಮಾಹಿತಿ ಹಂಚಿಕೊಂಡಿದ್ದೇನೆ. ಎರಡೂ ಅವಧಿಯಲ್ಲಿ ಪ್ರಾಮಾಣಿಕಗಿ ಕೆಲಸ ಮಾಡಿದ್ದೇನೆ. ಈ ಬಾರಿಯೂ ಅಧ್ಯಕ್ಷರು ನನ್ನ ಕೈ ಹಿಡಿಯುವ ನಂಬಿಕೆಯಿದೆ ಎಂದರು.

ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಾಲೂಕು ಕಾರ್ಯಾಧ್ಯಕ್ಷ ಮುನಿರಾಜು, ಕೋಡಗುರ್ಕಿ ಮಂಜುನಾಥ್, ಜಿಪಂ ಮಾಜಿ ಸದಸ್ಯ ಕೋರಮಂಗಲ ವೀರಪ್ಪ, ಮಾಜಿ ಬಮೂಲ್ ನಿರ್ದೇಶಕ ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಕಲ್ಯಾಣ್ ಕುಮಾರ್ ಬಾಬು, ವೆಂಕಟಗಿರಿ ಕೋಟೆ ರವಿ ಕುಮಾರ್, ಎಸ್.ಎಲ್.ಎನ್ ಮುನಿರಾಜು, ಹನುಮಪ್ಪ, ಜಗದೀಶ್, ನಂಜೇಗೌಡ, ಆನಂದ್, ರವಿಕುಮಾರ್, ಬಿಜ್ಜವಾರ ಆನಂದ್‌ ಇತರರಿದ್ದರು.

(ಫೋಟೋ ಕ್ಯಾಪ್ಷನ್‌)

ವಿಜಯಪುರ ಹೋಬಳಿ ಭಟ್ರೇನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಇರಿಗೇನಹಳ್ಳಿ ಶ್ರೀನಿವಾಸ್‌, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಇತರೊಂದಿಗೆ ಪೂಜೆ ಸಲ್ಲಿಸಿದರು.