ಜೆಡಿಎಸ್, ಬಿಜೆಪಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

KannadaprabhaNewsNetwork |  
Published : Apr 17, 2024, 01:17 AM IST
ಚಿತ್ರ 16ಬಿಡಿಆರ್55 | Kannada Prabha

ಸಾರಾಂಶ

ಭಾಲ್ಕಿ ತಾಲೂಕಿನ ಸಾಯಗಾಂವ, ಮೆಹಕರ್ ಮತ್ತು ಅರಟಾಳ ಗ್ರಾಮಗಳ ನೂರಾರು ಬಿಜೆಪಿ ಮತ್ತು ಜೆಡಿಎಸ್. ಕಾರ್ಯಕರ್ತರು ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಭಾಲ್ಕಿ ತಾಲೂಕಿನ ಸಾಯಗಾಂವ, ಮೆಹಕರ್ ಮತ್ತು ಅರಟಾಳ ಗ್ರಾಮಗಳ ನೂರಾರು ಬಿಜೆಪಿ ಮತ್ತು ಜೆಡಿಎಸ್. ಕಾರ್ಯಕರ್ತರು ಭಾಲ್ಕಿ ಶಾಸಕ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.

ಈ ವೇಳೆ ಮಾತನಾಡಿದ ಸಚಿವ ಖಂಡ್ರೆ, ಸಂಸದ ಭಗವಂತ ಖೂಬಾ ದುರವರ್ತನೆ ಮತ್ತು ದರ್ಪದಿಂದ ಬೇಸತ್ತು, ನೂರಾರು ಮುಖಂಡರು ಭಾಲ್ಕಿಗೆ ಆಗಮಿಸಿ, ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದರು. ಎಲ್ಲರಿಗೂ ಸಚಿವ ಖಂಡ್ರೆ ಕಾಂಗ್ರೆಸ್ ಬಾವುಟ ಮತ್ತು ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು.ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆ ಇದ್ದು, ಬೀದರ್ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ವಿರೋಧಿ ಅಲೆ ಇದೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿ ಸಾಗರ್ ಖಂಡ್ರೆ ಗೆಲ್ಲಿಸಿ ಕ್ಷೇತ್ರದ ಜನರು ಹೊಸ ಇತಿಹಾಸ ಬರೆಯಲಿದ್ದಾರೆ ಎಂದರು.

ಬದಲಾವಣೆ ಜಗದ ನಿಯಮ, ಈ ಬಾರಿ ಬೀದರ್ ಬದಲಾವಣೆ ಬಯಸುತ್ತಿದ್ದು, ದರ್ಪ, ದುರಹಂಕಾರದಿಂದ ವರ್ತಿಸುತ್ತಿರುವ ಸಂಸದರನ್ನು ತಿರಸ್ಕರಿಸಿ, ಕಾಂಗ್ರೆಸ್ ಪಕ್ಷದ ಬಗ್ಗೆ ಜನರು ಒಲವು ತೋರುತ್ತಿದ್ದಾರೆ. ಇದಕ್ಕೆ 3 ಗ್ರಾಮಗಳ ನೂರಾರು ಜನರು ಪಕ್ಷ ಸೇರ್ಪಡೆಯಾಗಿರುವುದೇ ಜ್ವಲಂತ ಸಾಕ್ಷಿ ಎಂದರು.

ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಶಿವರಾಜ ತೊರಣೆ, ಮಾರುತಿರಾವ ಮಗರ, ಬನಸಿಲಾಲ ಬೊರೊಳೆ, ಪ್ರಕಾಶ ಮಾಶಟ್ಟೆ, ಶ್ರೀರಂಗ ಗಾಜರೆ, ಧನಾಜಿ ಕೊಟಮಾಳೆ, ಲಕ್ಷ್ಮಣ ದಾಬಕೆ, ದಿಲಿಪ ಜಾಧವ, ವಿಠಲ ಪಾಟೀಲ್, ಸತೀಷ ನಿಂಬಾಳಕರ, ಬಾಳಾಸಾಹೇಬ್ ಹೊಸಮುದ್ರೆ, ರಾಜಪ್ಪಾ ಗಂದಗೆ, ಶರದ ಗಂದಗೆ, ಧನರಾಜ ಪಾಟೀಲ್ ಹಲಸಿ, ದತ್ತಾ ಸಂಗಮೆ, ಪರಶುರಾಮ ಆಡೆ, ಧರಮರಾಜ ಮಗರ, ರಾಜು ಪಾಟೀಲ ಬಸವನವಾಡಿ, ವಿದ್ಯಾವಾನ ಮಂಗಣೆ, ಬಲಭೀಮ ಭಾಲ್ಕೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ