ಜೆಡಿಎಸ್ ಅಭಿಮಾನಿ ಮಹದೇವು ಆತ್ಮಹತ್ಯೆ; ಕುಟುಂಬಕ್ಕೆ ನಿಖಿಲ್ ಸಾಂತ್ವನ

KannadaprabhaNewsNetwork |  
Published : Nov 25, 2025, 01:45 AM IST
24ಕೆಎಂಎನ್ ಡಿ17 | Kannada Prabha

ಸಾರಾಂಶ

ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತ, ಎಚ್ಡಿಕೆ ಅವರ ಅಪ್ಪಟ ಅಭಿಮಾನಿ ಮಹದೇವು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಮಗೆ ಅರ್ಥವಾಗುತ್ತಿಲ್ಲ. ಇದರಿಂದ ನನಗೆ, ಕುಮಾರಣ್ಣರ ಮನಸ್ಸಿಗೆ ನೋವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಮೀಪದ ದೇವೇಗೌಡನದೊಡ್ಡಿ ಗ್ರಾಮದ ಜೆಡಿಎಸ್ ಪಕ್ಷದ ಅಪ್ಪಟ ಅಭಿಮಾನಿ ಮಹದೇವು (30) ಕಳೆದ ಎರಡು ದಿನಗಳಿಂದ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೋಮವಾರ ಮೃತರ ನಿವಾಸಕ್ಕೆ ಆಗಮಿಸಿ ಮಹದೇವು ಭಾವಚಿತ್ರಕ್ಕೆ ನಮನ ಸಲ್ಲಿಸಿದ ನಂತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಿಎಂ ಆಗುವವರೆಗೂ ಹಾಗೂ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಶಾಸಕರಾಗುವ ತನಕ ಚಪ್ಪಲಿ ತೊಡಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಜೆಡಿಎಸ್ ಕಾರ್ಯಕರ್ತ ಮಹದೇವು ನೇಣು ಬಿಗಿದುಕೊಂಡಿದ್ದರು.

ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತ, ಎಚ್ಡಿಕೆ ಅವರ ಅಪ್ಪಟ ಅಭಿಮಾನಿ ಮಹದೇವು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಮಗೆ ಅರ್ಥವಾಗುತ್ತಿಲ್ಲ. ಇದರಿಂದ ನನಗೆ, ಕುಮಾರಣ್ಣರ ಮನಸ್ಸಿಗೆ ನೋವಾಗಿದೆ ಎಂದರು.

ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಿದೆ. ಹೋದ ಜೀವ ವಾಪಸ್‌ ತರಲು ಸಾಧ್ಯವಿಲ್ಲ. ದೇವರು ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಹದೇವು ಕುಟುಂಬದ ಜೀವನೋಪಾಯಕ್ಕೆ ನೆರವು ನೀಡುತ್ತೇವೆ ಎಂದರು.

ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಮುಖಂಡರಾದ ಕರಡಕೆರೆ ಹನುಮಂತೇಗೌಡ, ಗುರುದೇವರಹಳ್ಳಿ ಅರವಿಂದ್, ರಘು ವೆಂಕಟೇಗೌಡ, ಕಾರ್ಕಳ್ಳಿ ಜಗದೀಶ್, ಪೈಕಿ ಮಹೇಶ್, ಕರಡಕೆರೆ ಯೋಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಡೇರಿಗೆ ಕಲ್ಲುವೀರೇಗೌಡ ಅಧ್ಯಕ್ಷರಾಗಿ ಆಯ್ಕೆ

ಮೇಲುಕೋಟೆ: ಹೋಬಳಿಯ ನ್ಯಾಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಲ್ಲುವೀರೇಗೌಡ ಆಯ್ಕೆಯಾಗಿದ್ದಾರೆ. ಸಂಘದ ಹಿಂದಿನ ಅಧ್ಯಕ್ಷ ಎನ್.ಜೆ.ಬಾಲಸುಬ್ರಮಣ್ಯ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಲ್ಲುವೀರೇಗೌಡ ಬಿನ್‌ ಜವರೇಗೌಡ ನಾಮಪತ್ರ ಸಲ್ಲಿಸಿ ಬಹುಮತದೊಂದಿಗೆ ಉಳಿದ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡರು.

ಇಂದು ವಿದ್ಯತ್ ವ್ಯತ್ಯಯ

ಮಂಡ್ಯ: ತಾಲೂಕಿನ ಚಿಕ್ಕ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಟಿ.ಎಲ್.ಐ ಶಾಖೆ, ಮಂಡ್ಯ ರವರು ತುರ್ತು ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ನ.25 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1ಗಂಟೆವರೆಗೆ ನಗರ ಪ್ರದೇಶಗಳಾದ ಶಂಕರಪುರ, ಜೈನ ಸ್ಟ್ರೀಟ್, ಬೀಡಿ ಕಾಲೋನಿ, ಜಬರ್ ಸರ್ಕಲ್, ಹೊಳಲು ವೃತ್ತ, ವಿನಾಯಕನಂದ ಬಡಾವಣೆ ಹಾಗೂ ಗ್ರಾಮಾಂತರ ಪ್ರದೇಶಗಳಾದ ಗೋಪಾಲಪುರ, ಚಿಕ್ಕಮಂಡ್ಯ. ಸಾತನೂರು, ಕೊಮ್ಮೇರಹಳ್ಳಿ, ಹುಲಿವಾನ, ಕೆ.ಗೌಡಗೆರೆ. ಎಚ್. ಮಲ್ಲಿಗೆರೆ, ಎಸ್.ಐ.ಕೋಡಿಹಳ್ಳಿ, ಎಚ್. ಕೋಡಿಹಳ್ಳಿ, ಸಂಪಹಳ್ಳಿ, ಗೊರವಾಲೆ, ಬಿ. ಹೊಸಹಳ್ಳಿ, ಬೀರಗೌಡನಹಳ್ಳಿ ಹಾಗೂ ಈ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾವಿಸನಿನಿ, ಕಾ ಮತ್ತು ಪಾ ವಿಭಾಗ, ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?