ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷದ ರಜತ ಮಹೋತ್ಸವದ ಅಂಗವಾಗಿ ರಾಜ್ಯದ ಐದು ವಲಯಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕಿತ್ತೂರು ಕರ್ನಾಟಕ ವಿಭಾಗದ ಏಳು ಜಿಲ್ಲೆಗಳ ಬೃಹತ್ ಸಮಾವೇಶವನ್ನು ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಜಿಲ್ಲೆಯಿಂದ 1.5 ಲಕ್ಷ ಜನರು, ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಸರ್ಕಾರವಾಗಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗುತ್ತಿದ್ದಾರೆ. ಅನೇಕ ತಿಂಗಳಗಳಿಂದ ಗುತ್ತಿಗೆದಾರರ ಬಿಲ್ ನೀಡದೇ ಸತಾಯಿಸುತ್ತಿದ್ದಾರೆ. ಇದರಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಆರೋಪಿಸಿದರು. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವುದರ ಜೊತೆಗೆ ಜೆಡಿಎಸ್ ಪಕ್ಷ ಕೈಗೊಂಡ ಜನಪರ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವದೇ ಸಮಾವೇಶದ ಉದ್ದೇಶವಾಗಿದೆ ಎಂದರು.ಈ ವೇಳೆ ಚಿಕ್ಕೋಡಿ ಜಿಲ್ಲಾಧ್ಯಕ್ಷ ಕಲ್ಲಪ್ಪ ಮಗೆಣ್ಣವರ, ಅಥಣಿ ತಾಲೂಕ ಅಧ್ಯಕ್ಷ ದುಂಡಪ್ಪ ನಿಂಗನೂರ, ಮುಖಂಡರಾದ ರಾಜು ಡೌರಿ, ಜಗದೀಶ ಹಿರೇಮಠ , ಮುರಿಗೆಪ್ಪ ತಾಕತರಾವ, ಮಲ್ಲು ಕನಶೆಟ್ಟಿ, ಜಕ್ಕಪ್ಪ ಧರಿಗೌಡರ, ಲಕ್ಕಪ್ಪ ಮುಡಿಸಿ, ಗೋಪಾಲ ಮಂಗಸುಳಿ, ಶಿವಲಿಂಗ ದವಳೇಶ್ವರ, ಕಲ್ಲಪ್ಪ ಕೊರಬು, ಶಬ್ಬೀರಗೌಡ ಪಾಟೀಲ, ಇಮತಾಜ ಹಿಪ್ಪರಗಿ ಇದ್ದರು.