ರಾಮನಗರ: ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿರುವ ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಅದೊಂದು ಜಾತಿ ವ್ಯಾಧಿ ಪಕ್ಷವಾಗಿ ರೂಪುಗೊಂಡಿದೆ. ಹೀಗಾಗಿಯೇ ಶ್ರೀ ರೇವಣಸಿದ್ದೇಶ್ವರಸ್ವಾಮಿ ರಥೋತ್ಸವ ವೇಳೆ ಸಂಭವಿಸಿದ ಆಕಸ್ಮಿಕ ಘಟನೆಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಹೊಣೆಗಾರರನ್ನಾಗಿ ಮಾಡಿ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ರಾಜಕಾರಣ ಮಾಡಲು ಹೊರಟಿದೆ ಎಂದು ಜೆಡಿಎಸ್ ಮುಖಂಡರ ವಿರುದ್ಧ ಹುಲಿಕೆರೆ-ಗುನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ ವಾಗ್ದಾಳಿ ನಡೆಸಿದರು.
ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಹಿಂದೂ ಪಂಚಾಂಗ ಪ್ರಕಾರ ಮಧ್ಯಾಹ್ನ 12.45ರಿಂದ 1.30ರವರೆಗೆ ರಥೋತ್ಸವಕ್ಕೆ ಮುಹೂರ್ತ ನಿಗದಿಯಾಗಿತ್ತು. ಈ ವಿಚಾರ ತಿಳಿದಿದ್ದ ಶಾಸಕರು ತಾವು ಬರುವುದು ತಡವಾಗಬಹುದು. ನಿಗದಿತ ಸಮಯಕ್ಕೆ ರಥೋತ್ಸವ ನೆರವೇರಿಸುವಂತೆ ಹೇಳಿದ್ದರು. 10 ನಿಮಿಷ ತಡವಾದರು ಸರಿ ಶಾಸಕರು ಬರಲೆಂದು ಸ್ಥಳೀಯರು ಒತ್ತಾಯಿಸಿದ್ದರು. 10ರಿಂದ 15 ನಿಮಿಷ ತಡವಾಗಿ ಆಗಮಿಸಿದ ಶಾಸಕರು ಆ ದಿನವೇ ತಡವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು. ಆದರೆ, ನಿರುದ್ಯೋಗಿಗಳಾಗಿರುವ ಜೆಡಿಎಸ್ ಮುಖಂಡರು ಇದನ್ನೇ ದೊಡ್ಡ ಅಪರಾಧ ಎನ್ನುವಂತೆ ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕ ಇಕ್ಬಾಲ್ ಹುಸೇನ್ ಶೂ ಧರಿಸಿಕೊಂಡೇ ಶುಭ ಮುಹೂರ್ತ ಮೀರಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದ್ದೆ ವಿಘ್ನಗಳು ಸಂಭವಿಸಲು ಕಾರಣವೆಂದು ಜೆಡಿಎಸ್ ನವರು ಆರೋಪಿಸಿದ್ದಾರೆ. ಶಾಸಕರು ಶೂ ಕಳಚಿ ರಥ ಎಳೆದಿರುವುದಕ್ಕೆ ಜನರೇ ಸಾಕ್ಷಿಯಾಗಿದ್ದಾರೆ. ಇನ್ನು ಜೆಡಿಎಸ್ ಶಾಸಕರಿದ್ದ ಅವಧಿಯಲ್ಲಿ 2003-04ರಲ್ಲಿ ರಥಕ್ಕೆ ಸಿಲುಕುತ್ತಿದ್ದ ಇಬ್ಬರನ್ನು ಪಾರು ಮಾಡಲಾಗಿತ್ತು. ಆದರೂ 2 ಬೈಕ್, 1 ಕಾರು ಜಖಂಗೊಂಡಿತ್ತು. 2009-10ರಲ್ಲಿ ರಥದ ಈರ್ಚಿ ಮುರಿಯಿತು. 2012-13ರಲ್ಲಿ ಚಿಕ್ಕೋನಯ್ಯನ ಕಾಲಿನ ಪಾದ ಕತ್ತರಿಸಿತು. 2018ರಲ್ಲಿ ಅರ್ಚಕರು ಕೊಂಡಕ್ಕೆ ಬಿದ್ದು ಗಾಯಗೊಂಡರು. ಈ ಅವಘಡಗಳಿಗೆಲ್ಲ ಜೆಡಿಎಸ್ ಶಾಸಕರಲ್ಲದೆ ಮತ್ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು.ಶ್ರೀ ರೇವಣಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ನೀರಿಲ್ಲದ ಕಾರಣ ಭಕ್ತರಿಗೆ ತೊಂದರೆಯಾಗುತ್ತಿತ್ತು. ಈ ವಿಚಾರ ತಿಳಿದ ಶಾಸಕರು ಒಂದೇ ದಿನದಲ್ಲಿ ಬೋರ್‌ವೆಲ್ ಕೊರೆಸಿ ನೀರಿನ ವ್ಯವಸ್ಥೆ ಕಲ್ಪಿಸಿದರು. ಶಾಸಕರ ನಿಧಿಯಿಂದ 4.50 ಕೋಟಿ ವೆಚ್ಚದಲ್ಲಿ ಲಿಫ್ಟ್ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಇದು ಶಾಸಕ ಇಕ್ಬಾಲ್ ಹುಸೇನ್ ಈ ಕ್ಷೇತ್ರದ ಮೇಲೆ ಹೊಂದಿರುವ ಭಕ್ತಿ ತೋರಿಸುತ್ತದೆ ಎಂದರು.
ದೇಗುಲಗಳಿಗೆ ಧನ ಸಹಾಯ ಮಾಡಿದವರು ಹಿಂದೂ ವಿರೋಧಿಯೇ:
ಶ್ರೀ ರೇವಣ ಸಿದ್ದೇಶ್ವರಸ್ವಾಮಿ ಮಠಕ್ಕೆ ಲಕ್ಷಾಂತರ ರುಪಾಯಿಗಳ ಗ್ರಾನೈಟ್ ಕೊಟ್ಟಿದ್ದಾರೆ. ಜಾತಿ ಧರ್ಮ ನೋಡದೆ ಕಷ್ಟ ಹೇಳಿಕೊಂಡು ಬಂದವರಿಗೆ ಕೈಲಾದ ಸಹಾಯ ಮಾಡಿದ್ದಾರೆ. ಜೆಡಿಎಸ್ ಶಾಸಕರಾಗಿದ್ದವರು ಎಷ್ಟು ದೇವಾಲಯಗಳಿಗೆ ಧನ ಸಹಾಯ ಮಾಡಿದ್ದಾರೆಂದು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಆಚರಿಸಿ ಇತಿಹಾಸ ಸೃಷ್ಟಿಸಿದರು. ಅಲ್ಲದೆ, ಕ್ಷೇತ್ರದಲ್ಲಿನ ಗ್ರಾಮಗಳ ದೇವ ದೇವತೆಗಳ ಅದ್ಧೂರಿ ಮೆರವಣಿಗೆ ನಡೆಸಿ ಭಕ್ತಿ ಪ್ರದರ್ಶಿಸಿದರು. ಇಷ್ಟೆಲ್ಲ ಮಾಡಿದ ಶಾಸಕ ಇಕ್ಬಾಲ್ ಹುಸೇನ್ ಹಿಂದೂ ವಿರೋಧಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕೋಟ್ .................
- ಮಹದೇವಯ್ಯ, ಸದಸ್ಯರು, ಹುಲಿಕೆರೆ ಗುನ್ನೂರು ಗ್ರಾಪಂ
ಹುಲಿಕೆರೆ - ಗುನ್ನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.