ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಬಂದೀಗೌಡ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರೊಂದಿಗೆ ಸೇರಿ ಪಾಂಡವಪುರದ ಟಿಎಪಿಸಿಎಂಎಸ್ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ದುದ್ದ ಹೋಬಳಿಯ ಮುಖಂಡ ಹಾಗೂ ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ನೇತೃತ್ವದಲ್ಲಿ ಇಂದು ಎಲ್ಲ ಮುಖಂಡರ ಸಭೆ ನಡೆಸಲಾಗಿದ್ದು, ‘ಜನರೊಂದಿಗೆ ಜನತಾದಳ’ ಅಭಿಯಾನ ಸಂಬಂಧ ವಿಮರ್ಶೆ ಮಾಡಿದ್ದೇವೆ ಎಂದು ಹೇಳಿದರು.ಆ.೩೧ರಂದು ಎಚ್.ಡಿ.ದೇವೇಗೌಡರ ಒಡನಾಡಿಯಾಗಿ, ಜಿ.ಬಿ.ಶಿವಕುಮಾರ್ ಅವರ ಜೊತೆಗೂಡಿ ಕೆಲಸ ಮಾಡಿದ ಗೊರವಾಲೆಯ ಪಟೇಲ್ ಸಿದ್ದೇಗೌಡ ಅವರ ಅಗಲಿಕೆ ಹಿನ್ನೆಲೆಯಲ್ಲಿ ಅವರ ಪುತ್ಥಳಿ ಅನಾವಣ ಕಾರ್ಯಕ್ರಮದಲ್ಲಿಯೂ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಅಭ್ಯರ್ಥಿಗಳೇ ಪ್ರತಿನಿಧಿಸಿದ್ದು, ಪಕ್ಷದ ರಾಷ್ಟ ಹಾಗೂ ರಾಜ್ಯ ಮಟ್ಟದ ನಾಯಕರು ಮೈತ್ರಿಯಾಗಿ ಮುಂದುವರೆಯುವುದೋ ಅಥವಾ ಪಕ್ಷವಾಗಿಯೇ ನಾಯಕತ್ವ ಮುಂದುವರೆಸುವುದೋ ನಿರ್ಧಾರ ಮಾಡಿ, ಸೂಚನೆ ನೀಡುತ್ತಾರೆ. ಅದನ್ನು ಪಾಲಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಧರ್ಮಸ್ಥಳದ ಬಗ್ಗೆ ದೈವಭಕ್ತಿ ಇದೆ. ಅನಾಮಿನಕ ಕಟ್ಟುಕಥೆಗೆ ಸರ್ಕಾರ ಪ್ರೋತ್ಸಾಹ ನೀಡಿತ್ತು, ಈಗ ಸರ್ಕಾರಕ್ಕೂ ಅರ್ಥವಾಗಿದೆ ಇದರ ಹಿಂದಿರುವ ವ್ಯಕ್ತಿಗಳ ಮುಖವಾಡ ಕಳಚುವಂತಹ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮುಖಂಡರಾದ ಬಾಲರಾಜು, ಶಂಕರೇಗೌಡ, ಪದ್ಮಾವತಿ, ಶಿವಶಂಕರ್, ಶಿವಳ್ಳಿ ಸುರೇಶ್, ಮಾದೇಗೌಡ ಇತರರಿದ್ದರು.