ಕನ್ನಡಪ್ರಭ ವಾರ್ತೆ ಮಂಡ್ಯ
ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಉತ್ತರಿಸಿರುವ ಅವರು, ಒಟ್ಟು ೧೮೦೪ ಕಿ.ಮೀ.ನಾಲೆ ಉದ್ದವಿದ್ದು, ಇದರಲ್ಲಿ ೧೦೩೩.೩೪ ಕಿ.ಮೀ. ದೂರದವರೆಗಿನ ನಾಲಾ ಆಧುನೀಕರಣಕ್ಕೆ ಅನುಮೋದನೆ ನೀಡಲಾಗಿತ್ತು. ಇದುವರೆಗೆ ೮೬೭.೫೭ ಕಿ.ಮೀ. ದೂರದವರೆಗೆ ನಾಲೆ ಆಧುನೀಕರಣ ಪೂರ್ಣಗೊಂಡಿದ್ದು, ಇನ್ನು ೧೬೫.೭೭ ಕಿ.ಮೀ. ಉದ್ದದ ಕಾಮಗಾರಿ ಬಾಕಿ ಉಳಿದಿದೆ ಎಂದು ಉತ್ತರ ನೀಡಿದ್ದಾರೆ.
ವಿಶ್ವೇಶ್ವರಯ್ಯ ಮುಖ್ಯ ನಾಲೆ ೪೬.೨೫ ಕಿ.ಮೀ. ಉದ್ದವಿದ್ದು, ಇದರಲ್ಲಿ ೪೦ ಕಿ.ಮೀ. ಉದ್ದದ ನಾಲೆ ಆಧುನೀಕರಣಕ್ಕೆ ೩೦೦ ಕೋಟಿ ರು. ಅಂದಾಜುವೆಚ್ಚವಾಗಿದ್ದು, ೩೨ ಕಿ.ಮೀ. ಉದ್ದದ ನಾಲೆ ಆಧುನೀಕರಣಕ್ಕೆ ೩೦೯ ಕೋಟಿ ರು. ವೆಚ್ಚವಾಗಿದೆ. ಇನ್ನೂ ೮ ಕಿ.ಮೀ. ಉದ್ದದ ನಾಲೆ ಆಧುನೀಕರಣ ಕಾಮಗಾರಿ ಬಾಕಿ ಇದೆ ಎಂದು ಹೇಳಿದ್ದಾರೆ.ಎಸ್‌ಬಿಸಿ ಮತ್ತು ಕೆಎಸ್‌ಬಿ ಮುಖ್ಯ ಹಾಗೂ ವಿತರಣಾ ನಾಲೆಗಳ ದೂರ ೧೪೦.೧೯ ಕಿ.ಮೀ. ಉದ್ದವಿದ್ದು, ಅದರಲ್ಲಿ ೧೦೪..೧೩೯ ಕಿ.ಮೀ. ದೂರದ ನಾಲಾ ಆಧುನೀಕರಣಕ್ಕೆ ೯೬ ಕೋಟಿ ರು. ಖರ್ಚು ಮಾಡಲಾಗಿದೆ. ೧೪.೭೦ ಕಿ.ಮೀ. ಉದ್ದದ ಮದ್ದೂರು ಶಾಖಾ ನಾಲೆ, ೧೦.೪೦ ಕಿ.ಮೀ. ಹಾಗೂ ೬.೮೫ ಕಿ.ಮೀ. ಉದ್ದದ ನಾಲೆ ಆಧುನೀಕರಣಕ್ಕೆ ೭೦.೮೫ ಕೋಟಿ ರು. ಖರ್ಚಾಗಿದೆ. ೩೯.೧೫ ಕಿ.ಮೀ. ಉದ್ದದ ಕಾವೇರಿ ಶಾಖಾ ನಾಲೆ ಆಧುನೀಕರಣದಲ್ಲಿ ೨೯ ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಂಡಿದೆ. ಅದೇ ರೀತಿ ೭೧.೬೨ ಕಿ.ಮೀ. ಉದ್ದದ ವಿತರಣಾ ನಾಲೆ ಪೈಕಿ ೨೧.೬೩ ಕಿ.ಮೀ. ಉದ್ದದ ಕಾಮಗಾರಿಗೆ ೭೪.೬೯ ಕೋಟಿ ರು. ಖರ್ಚಾಗಿರುವುದಾಗಿ ವಿವರಿಸಿದ್ದಾರೆ.
ಅಣೆಕಟ್ಟು ವ್ಯಾಪ್ತಿಯ ೬೯.೧೯ ಕಿ.ಮೀ. ಉದ್ದದ ವಿರಿಜಾ, ೨೬ ಕಿ.ಮೀ. ಉದ್ದದ ಹೆಚ್‌ಹೆಚ್‌ಎಲ್‌ಸಿ ನಾಲೆ ಆಧುನೀಕರಣಕ್ಕೆ ೧೦೯.೪೫ ಕೋಟಿ ರು. ಖರ್ಚಾಗಿದೆ. ೮.೨೦ ಕಿ.ಮೀ. ಉದ್ದದ ಬಂಗಾರದೊಡ್ಡಿ ನಾಲೆ ಆಧುನೀಕರಣಕ್ಕೆ ೧೬.೩೪ ಕೋಟಿ ರು. ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ.
ನಾಲಾ ಆಧುನೀಕರಣ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮತ್ತು ಗುಣಮಟ್ಟದಲ್ಲಿ ನಿರ್ವಹಿಸಲು ಇಲಾಖಾ ವ್ಯಾಪ್ತಿಯ ಗುಣನಿಯಂತ್ರಣ ಕೋಶ ಸಕ್ಷಮ ಕಚೇರಿ ವತಿಯಿಂದ ಸ್ಥಳ ತಪಾಸಣೆ ನಡೆಸಿ ಕಾಮಗಾರಿಯ ಸಾಮಗ್ರಿಗಳ ಗುಣಮಟ್ಟಗಳನಬ್ನು ದೃಢಪಡಿಸಿಕೊಂಡು ಕಾಮಗಾರಿಗಳನ್ನು ಗುಣಾತ್ಮಕವಾಗಿ ನಿರ್ವಹಿಸಿರುವುದಾಗಿ ತಿಳಿಸಿದ್ದಾರೆ.