ಎಚ್‌.ಡಿ. ದೇವೇಗೌಡರ 93ನೇ ಹುಟ್ಟುಹಬ್ಬ ಆಚರಣೆ

KannadaprabhaNewsNetwork | Published : May 19, 2025 2:07 AM
ಪಂಜಾಬಿನಲ್ಲಿ ಭತ್ತದ ತಳಿಗೆ ದೇವೇಗೌಡರ ಹೆಸರಿಟ್ಟಿದ್ದಾರೆ. ಗ್ರಾಪಂ, ತಾಪಂ, ಜಿಪಂನಲ್ಲಿ ಮೀಸಲಾತಿ ತಂದುಕೊಟ್ಟವರು, ಕಾವೇರಿ ನೀರಿನ ವಿಚಾರದಲ್ಲಿ ಹೆಚ್ಚು ತಿಳಿದುಕೊಂಡವರು ರಾಜ್ಯಸಭೆಯಲ್ಲಿ ದನಿ ಎತ್ತಿದವರು.
Follow Us

ಕನ್ನಡಪ್ರಭ ವಾರ್ತೆ ಮೈಸೂರು

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ 93ನೇ ಹುಟ್ಟುಹಬ್ಬವನ್ನು ಭಾನುವಾರ ನಗರದ ಜೆಡಿಎಸ್‌ ಕಚೇರಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ ಕೇಕ್‌ ಕತ್ತರಿಸುವ ಮೂಲಕ ಆಚರಿಸಿದರು.

ನಂತರ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈ ರಾಜ್ಯ, ಈ ದೇಶ ಕಂಡಂತಹ ಮೊದಲ ಕನ್ನಡದ ರೈತನ ಮಗ, ಅಪ್ಪಟ ದೇಶಾಭಿಮಾನಿ, ಜೆಡಿಎಸ್‌ ಪಕ್ಷವನ್ನು ಕಟ್ಟಿ ನೂರಾರು ರಾಜಕಾರಣಿಗಳನ್ನು ಸೃಷ್ಟಿ ಮಾಡಿದ ಮಹಾನಾಯಕ. ಇಂದು ಜೆಡಿಎಸ್‌ ನಲ್ಲಿ ಬೆಳೆದ ನಾಯಕರೆಲ್ಲಾ ಕಾಂಗ್ರೆಸ್‌, ಬಿಜೆಪಿಯಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಜಮ್ಮು ಕಾಶ್ಮೀರಕ್ಕೆ ತೆರೆದ ವಾಹನದಲ್ಲಿ ತೆರಳಿದ ಮೊದಲ ಪ್ರಧಾನಿ.

ಪಂಜಾಬಿನಲ್ಲಿ ಭತ್ತದ ತಳಿಗೆ ದೇವೇಗೌಡರ ಹೆಸರಿಟ್ಟಿದ್ದಾರೆ. ಗ್ರಾಪಂ, ತಾಪಂ, ಜಿಪಂನಲ್ಲಿ ಮೀಸಲಾತಿ ತಂದುಕೊಟ್ಟವರು, ಕಾವೇರಿ ನೀರಿನ ವಿಚಾರದಲ್ಲಿ ಹೆಚ್ಚು ತಿಳಿದುಕೊಂಡವರು ರಾಜ್ಯಸಭೆಯಲ್ಲಿ ದನಿ ಎತ್ತಿದವರು. ಪಹಲ್‌ಗಾಂ ಹತ್ಯಾಕಾಂಡದ ವಿಚಾರದಲ್ಲಿ ದೇಶದ ಬೆಂಬಲಕ್ಕೆ ನಿಂತವರು, ಇಂತಹ ಮಹಾನ್‌ನಾಯಕರ ಹುಟ್ಟುಹಬ್ಬವನ್ನು ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ನಗರದಲ್ಲಿ ಆಚರಿಸಲಾಗುತ್ತಿದೆ. ವಿವಿಧ ಪಕ್ಷದ ಮುಖಂಡರು ಅವರಿಗೆ ಶುಭ ಹಾರೈಸುತ್ತಿದ್ದಾರೆ. ನಾಡಿನ ಜನರ ಆಶೀರ್ವಾದ, ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ಇನ್ನೂ ನೂರು ವರ್ಷ ಬಾಳಲಿ, ಯುವ ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಲಿ ಎಂದರು.

ಜೆಡಿಎಸ್‌ನಗರ ಅಧ್ಯಕ್ಷ ಕೆ.ಟಿ. ಚಲುವೇಗೌಡ, ನಗರ ಹಿರಿಯ ಉಪಾಧ್ಯಕ್ಷ ಫಾಲ್ಕನ್‌ ಬೋರೇಗೌಡ, ನಗರ ಕಾರ್ಯಾಧ್ಯಕ್ಷ ಪ್ರಕಾಶ್‌ ಪ್ರಿಯದರ್ಶನ್‌, ಮಾಜಿ ಮೇಯರ್‌ ಲಿಂಗಪ್ಪ, ಲ್ಯಾಕ್‌ ಆ್ಯಂಡ್‌ ಪೆಂಟ್ಸ್‌ ಮಾಜಿ ಅಧ್ಯಕ್ಷ ಕೃಷ್ಣ, ಎಸ್‌.ಬಿ.ಎಂ. ಮಂಜು, ರಮೇಶ್‌, ದಿನೇಶ್‌, ಮಂಜುನಾಥ್‌, ರಾಜಶೇಖರ್‌, ಪ್ರೇಮಾ ಶಂಕರೇಗೌಡ, ಲಕ್ಷ್ಮಮ್ಮ ಇದ್ದರು.