ಬೂತ್ ಮಟ್ಟದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಕ್ರಮ

KannadaprabhaNewsNetwork |  
Published : Jun 23, 2025, 11:49 PM IST
ಬೂತ್ ಮಟ್ಟದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಕ್ರಮ : ಕೆ.ಟಿ. ಶಾಂತಕುಮಾರ್ | Kannada Prabha

ಸಾರಾಂಶ

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೂಚನೆಯಂತೆ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡಲು ಮುಂದಾಗಿದ್ದು ರಾಜ್ಯದ್ಯಂತ 50ಲಕ್ಷ ಸದಸ್ಯತ್ವ ನೋಂದಣಿ ಮಾಡಲು ತೀರ್ಮಾನಿಸಿದ್ದೇವೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೂಚನೆಯಂತೆ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡಲು ಮುಂದಾಗಿದ್ದು ರಾಜ್ಯದ್ಯಂತ 50ಲಕ್ಷ ಸದಸ್ಯತ್ವ ನೋಂದಣಿ ಮಾಡಲು ತೀರ್ಮಾನಿಸಿದ್ದೇವೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮತ್ತು ಮಿಸ್ಡ್‌ ಕಾಲ್ ಮೂಲಕ ಪಕ್ಷದ ಕಾರ್ಯಕರ್ತರ ನೋಂದಣಿಗೆ ಚಾಲನೆ ನೀಡಿದ್ದೇವೆ. ಆ.20ರಂದು ತಿಪಟೂರಿಗೆ ನಿಖಿಲ್ ಕುಮಾರಸ್ವಾಮಿ ಆಗಮಿಸುವ ನಿರೀಕ್ಷೆ ಇದ್ದು ಅಂದು ಬೃಹತ್ ಸಭೆಯನ್ನು ಏರ್ಪಡಿಸಿ ಪಕ್ಷ ಸಂಘಟನೆಗೆ ಬಲ ನೀಡಲಿದ್ದೇವೆ. ತಾಲೂಕು ಘಟಕದ ನೂತನ ಅಧ್ಯಕ್ಷರ ಆಯ್ಕೆಗೆ ಚಾಲನೆ ನೀಡಿದ್ದು ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯಲು ಸಭೆ ನಡೆಸುತ್ತಿದ್ದೇವೆ ಎಂದರು. ಕಳೆದ ವರ್ಷ ಕೊಬ್ಬರಿ ಬೆಲೆ 7-8ಸಾವಿರ ಇದ್ದಾಗ ಹೋರಾಟ ಹಮ್ಮಿಕೊಂಡಿದ್ದನ್ನು ಸ್ಮರಿಸಿದ ಶಾಂತಕುಮಾರ್ ಈಗ ಕೊಬ್ಬರಿಗೆ ಬಂಪರ್ ಬೆಲೆ ಬಂದಿದ್ದು ಕ್ವಿಂಟಾಲ್ ಕೊಬ್ಬರಿಗೆ ೨೪ಸಾವಿರ ಮುಟ್ಟಿದೆ. ಆದರೆ ತೆಂಗಿನ ಮರದಲ್ಲಿ ಇಳುವರಿ ಕಡಿಮೆಯಾಗಿದ್ದು ಸರ್ಕಾರ ತೋಟಗಾರಿಕೆ ಇಲಾಖೆ ಮೂಲಕ ಒಂದು ತಾಂತ್ರಿಕ ಸಮಿತಿ ನೇಮಿಸಿ ಇಳುವರಿ ಕಡಿಮೆಗೆ ಕಾರಣ ಕಂಡುಹಿಡಿದು ಇಳುವರಿ ಹೆಚ್ಚು ಮಾಡಲು ವ್ಶೆಜ್ಞಾನಿಕ ವಿಧಾನವನ್ನು ಪರಿಚಯಿಸಿದರೆ ರೈತ ಸಮುದಾಯಕ್ಕೆ ಅನುಕೂಲವಾಗುತ್ತದೆ. ಇದಕ್ಕೆ ಕೃಷಿ ವಿಜ್ಞಾನ ಕೇಂದ್ರದ ಸಹಾಯವನ್ನೂ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದರು. ಪೊಲೀಸರು ರೈತರ ಟ್ರಾಕ್ಟರ್ ಹಾಗೂ ಇತರೆ ವಾಹನಗಳನ್ನು ತಡೆದು ದಂಡ ಹಾಕುತ್ತಿರುವುದು ತಿಳಿದುಬಂದಿದೆ. ಅನ್ನದಾತ ರೈತರ ಉಳುಮೆಗೆ ಉಪಯೋಗಿಸುವ ಟ್ರಾಕ್ಟರ್‌ಗೆ ದಂಡ ಹಾಕದಂತೆ ಶಾಸಕರು ಡಿವೈಎಸ್‌ಪಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಶಿವಸ್ವಾಮಿ, ಮುಖಂಡರಾದ ಕಂಚಾಘಟ್ಟ ರಾಜು, ಗೊರಗೊಂಡನಹಳ್ಳಿ ಸುದರ್ಶನ್, ರಾಜಶೇಖರ್, ಕುಮಾರಸ್ವಾಮಿ, ನಟರಾಜು, ಬಸವರಾಜು ಮಠದಮನೆ, ಧನಂಜಯ್ ಪೆದ್ದಿಹಳ್ಳಿ ರಮೇಶ್, ರಾಜಶೇಖರ್, ಇಮ್ರಾನ್, ನವೀನ, ಅಪಾರ ಕಾರ್ಯಕರ್ತರಿದ್ದರು ಚುನಾವಣೆ ಸೋಲುವ ಭಯದಿಂದ ರಾಜ್ಯ ಸರಕಾರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಹೆದರುತ್ತಿದೆ. ಗ್ಯಾರಂಟಿ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ ಹಾಗೂ ಅಭಿವೃದ್ಧಿ ಯೋಜನೆಗಳ ನಿಂತುಹೋಗಿದ್ದು ಜನ ಸರ್ಕಾರದ ವಿರುದ್ದ ಬೇಸತ್ತುಹೋಗಿದ್ದಾರೆ.

- ಕೆ.ಟಿ.ಶಾಂತಕುಮಾರ್, ಜೆಡಿಎಸ್ ಮುಖಂಡರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ