ಕುಣಿಗಲ್‌ಗೆ ಹೇಮಾವತಿ ನೀರಿನ ಹೋರಾಟಕ್ಕೆ ಜೆಡಿಎಸ್‌ ಸಿದ್ಧ

KannadaprabhaNewsNetwork |  
Published : Nov 10, 2026, 12:15 AM IST
ಪೋಟೋ ಇದೆ : 9 ಕೆಜಿಎಲ್ 1 : ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ  ಪತ್ರಿಕಾಗೋಷ್ಠಿ | Kannada Prabha

ಸಾರಾಂಶ

ತಾಲೂಕಿನ ಹೇಮಾವತಿ ಯೋಜನೆ ನೀರಿನ ಪಾಲನ್ನು ಸಂಪೂರ್ಣವಾಗಿ ಪಡೆಯಲು ಜೆಡಿಎಸ್ ಹೋರಾಟಕ್ಕೆ ತಯಾರಿದೆ. ಇದಕ್ಕಾಗಿ ಸಂಪೂರ್ಣವಾಗಿ ಜಿಲ್ಲೆಯ ಎಲ್ಲಾ ಮುಖಂಡರ ಭೇಟಿ ಮಾಡುವ ಕಾರ್ಯ ಪ್ರಾರಂಭಿಸುತ್ತಿದ್ದೇವೆ ಎಂದು ಜೆಡಿಎಸ್ ಮುಖಂಡ ಬಿ.ಎನ್. ಜಗದೀಶ್ ತಿಳಿಸಿದ್ದಾರೆ

ಕನ್ನಡಪ್ರಭ ವಾರ್ತೆ ಕುಣಿಗಲ್

ತಾಲೂಕಿನ ಹೇಮಾವತಿ ಯೋಜನೆ ನೀರಿನ ಪಾಲನ್ನು ಸಂಪೂರ್ಣವಾಗಿ ಪಡೆಯಲು ಜೆಡಿಎಸ್ ಹೋರಾಟಕ್ಕೆ ತಯಾರಿದೆ. ಇದಕ್ಕಾಗಿ ಸಂಪೂರ್ಣವಾಗಿ ಜಿಲ್ಲೆಯ ಎಲ್ಲಾ ಮುಖಂಡರ ಭೇಟಿ ಮಾಡುವ ಕಾರ್ಯ ಪ್ರಾರಂಭಿಸುತ್ತಿದ್ದೇವೆ ಎಂದು ಜೆಡಿಎಸ್ ಮುಖಂಡ ಬಿ.ಎನ್. ಜಗದೀಶ್ ತಿಳಿಸಿದ್ದಾರೆ

ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಗ್ರಾಮಗಳಿಗೆ ತೆರಳಿದಾಗ ನೀರಾವರಿಗೆ ಹಾಗೂ ನೀರನ್ನು ತರುವ ವಿಚಾರದಲ್ಲಿ ಕೆಲವು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತೊಂದರೆ ನೀಡುತ್ತಿದ್ದಾರೆ ಎಂಬ ಸುಳ್ಳು ಆರೋಪಗಳನ್ನು ಮಾಡುತ್ತಿ ದ್ದಾರೆ. ಈ ಆರೋಪ ಆಧಾರರಹಿತ. ಇವರು ಕೇವಲ ರಾಜಕೀಯಕ್ಕೆ ಹೇಮಾವತಿ ನೀರಿನ ಹಾಗೂ ಶ್ರೀರಂಗ ಏತ ನೀರಾವರಿ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನೀರಿನ ವಿಚಾರದಲ್ಲಿ ಇಂತಹ ಕೀಳು ರಾಜಕೀಯ ಬಿಡಲಿ ಎಂದು ಸಲಹೆ ನೀಡಿದರು.

ಕುಣಿಗಲ್ ತಾಲೂಕಿಗೆ ಬರಬೇಕಾದ ನೀರಿನ ಲಭ್ಯತೆ ಕಾಯ್ದಿರಿಸದೆ ಕಾಂಗ್ರೆಸ್ ನವರು ಮಾಗಡಿಗೆ ನೀರು ತೆಗೆದುಕೊಂಡು ಹೋಗುವ ವಿಚಾರದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಕುಣಿಗಲ್ ಪಾಲಿನ ಹೇಮಾವತಿ ನೀರನ್ನು ತೆಗೆದುಕೊಂಡು ಬರುವ ವಿಚಾರವಾಗಿ ಪ್ರತಿಯೊಬ್ಬರು ಹೋರಾಟಕ್ಕೆ ಸಿದ್ಧರಿದ್ದಾರೆ. ಈ ಸಂಬಂಧ ವಿರೋಧ ವ್ಯಕ್ತಪಡಿಸುವ ಶಾಸಕರ ಮನೆ ಮುಂದೆ ಧರಣಿಗೆ ಸಿದ್ಧ ಎಂದು ಹೇಳಿದರು.

ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ಹಾಗೂ ಕುಣಿಗಲ್ ಪಾಲಿನ ನೀರನ್ನು ಮಾಗಡಿಗೆ ಕೊಡುವ ಕೆಲಸವನ್ನು ತಮ್ಮ ರಾಜಕೀಯ ಹಿತಾಸಕ್ತಿ ವೃದ್ಧಿಗಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನೀರಿನ ವಿಚಾರವಾಗಿ ಆರೋಪ ಮಾಡುವುದನ್ನು ನಿಲ್ಲಿಸಲಿ. ನಾವೂ ಕೂಡ ಹೋರಾಟಕ್ಕೆ ಬರುತ್ತೇವೆ ಎಂದು ಹೇಳಿದ ಅವರು, ಶಾಸಕರಿಗೆ ಮುಖ್ಯಮಂತ್ರಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.

ಮುಖಂಡ ಕುಲುಮೆ ಪಾಳ್ಯದ ಶಿವಣ್ಣ ಮಾತನಾಡಿ, ನೀರಿನ ವಿಚಾರವಾಗಿ ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಕೂಡ ಅದು ನಡೆಯುತ್ತದೆ. ಮುಂದಿನ ಬಾರಿ ನಮ್ಮ ಪಕ್ಷದ ಮುಖಂಡರಾದ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದು ನಾವು ನೀರು ಪಡೆಯುವುದು ನಿಶ್ಚಿತ ಎಂದು ಹೇಳಿದರು. ಹೊಸದಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಗುತ್ತಿಗೆದಾರ ಕೆಂಪೀರೇಗೌಡ ಮಾತನಾಡಿ, ರಾತ್ರಿ ವೇಳೆಯಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದಾಗ ಜನರು ನಿಮ್ಮನ್ನು ಗುರುತಿಸುತ್ತಾರೆಂದು ಸಲಹೆ ನೀಡಿದರು. ಮುಖಂಡ ಪ್ರಕಾಶ್, ರಂಗಸ್ವಾಮಿ, ಮಂಜುನಾಥ್, ದೀಪು, ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ