- ಜಗಳೂರಲ್ಲಿ ಸಂಯುಕ್ತ ಜನತಾದಳ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಹೇಳಿಕೆ
ಕನ್ನಡಪ್ರಭ ವಾರ್ತೆ ಜಗಳೂರು
ರಾಜ್ಯದಲ್ಲಿ ತನ್ನದೇ ಆದ ವರ್ಚಸ್ಸು ಉಳಿಸಿಕೊಂಡಿರುವ ಜೆಡಿಯು ೨೦೨೬ರಲ್ಲಿ ನಡೆಯಲಿರುವ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಡಾ. ಕೆ.ನಾಗರಾಜ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಎಲ್ಲರ ಮನಗೆದ್ದು ಎಂಎಲ್ಸಿ ಮಾಡಲು ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಂಘಟನೆ ಆರಂಭಿಸಿದ್ದೇವೆ ಎಂದು ಮಾಜಿ ಸಿಎಂ ಜೆ.ಎಚ್. ಪಟೇಲ್ ಪುತ್ರ ಹಾಗೂ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಹೇಳಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ ಆಡಳಿತ ರಾಜ್ಯದಲ್ಲಿ ಭರವಸೆಯ ಸೆಲೆಯಾಗಿತ್ತು. ಹೀಗಾಗಿ ರಾಜ್ಯಾದ್ಯಂತ ಜೆಡಿಯು ಬಲವರ್ದನೆಗೆ ಟೊಂಕಟ್ಟಿ ಸಂಘಟಿಸಲು ಮುಂದಾಗಿದ್ದೇವೆ. ನಿರಾಸೆ ರಾಜಕಾರಣದಲ್ಲಿ ಭರವಸೆಯ ಸೆಲೆ ಹುಡುಕಾಟ ಅಗತ್ಯವಾಗಿದೆ ಎಂದರು.
ಆಗ್ನೇಯ ಪದವೀಧರರ ಕ್ಷೇತ್ರದ ಜೆ.ಡಿ.ಯು. ಅಭ್ಯರ್ಥಿ ಡಾ. ಕೆ.ನಾಗರಾಜ್ ಮಾತನಾಡಿ, ಈ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಪಧವೀಧರ, ಶಿಕ್ಷಕರ ಸಮಸ್ಯೆಗಳ ತಿಳಿದಿದ್ದೇನೆ. ಪರಿಷತ್ ಸದಸ್ಯನಾದರೆ ಎಲ್ಲ ಇಲಾಖೆಗಳ ಖಾಲಿ ಹುದ್ದೆಗಳಿಗೆ ನೇಮಕಾತಿ, ಎನ್‌ಪಿಎಸ್, ಒಪಿಎಸ್ ಪದ್ಧತಿ ಜಾರಿ, ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಸೇವಾಭದ್ರತೆ, ಜ್ಯೋತಿ ಸಂಜೀವಿ ಸೇರಿದಂತೆ ಗ್ರಾಮೀಣ ಪದವೀಧರರಿಗೆ ಸ್ವಉದ್ಯೋಗಕ್ಕೆ ಆದ್ಯತೆ ಬಗ್ಗೆ ಪರಿಷತ್‌ನಲ್ಲಿ ಚರ್ಚೆ ಮಾಡಿ ಜಾರಿಗೆ ಶ್ರಮಿಸುತ್ತೇನೆ ಎಂದರು.
ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗನಾಥ್, ಚಂದ್ರಶೇಖರ್, ರಾಜ್ಯ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಜೆಡಿಯು ಅಧ್ಯಕ್ಷ ಜಯಣ್ಣ, ಜಿಲ್ಲಾ ಸಂಚಾಲಕ ನೀಲಗಿರಿಯಪ್ಪ, ಮುಖಂಡರಾದ ಶಿವಯೋಗಿ, ಚಂಪಾವತಿ, ಪ್ರದೀಪ್, ಅಂಬರೀಷ್, ಮನೋಜ್ ಸೇರಿದಂತೆ ಅನೇಕರು ಇದ್ದರು.- - -
-01ಜೆಎಲ್ಆರ್ 2:ಜಗಳೂರು ಪಟ್ಟಣದಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಮತ್ತು ಡಾ. ಕೆ.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.