ಹೊಸಪೇಟೆ: ವಿಜಯನಗರ ಜಿಲ್ಲೆಯ ವಿವಿಧೆಡೆ ಕ್ರೈಸ್ತರು ಸಂಭ್ರಮದಿಂದ ಕ್ರಿಸ್‌ಮಸ್ ಹಬ್ಬವನ್ನು ಸೋಮವಾರ ಆಚರಿಸಿದರು. ಸೋಮವಾರ ಬೆಳಗಿನ ಜಾವ ಎರಡು ಗಂಟೆ ಹೊತ್ತಿಗೆ ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಹಬ್ಬವನ್ನು ಆಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಎಚ್ಎನ್ಎಫ್ ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ದಾರ್ಶನಿಕರಾದ ಏಸುಕ್ರಿಸ್ತರ ತತ್ವ ಆದರ್ಶಗಳನ್ನು ಎಲ್ಲರೂ ಪಾಲಿಸೋಣ. ಎಲ್ಲ ಧರ್ಮಗ್ರಂಥಗಳಾದ ಕುರಾನ್, ಬೈಬಲ್, ಭಗವದ್ಗೀತೆ, ವೇದಗಳಲ್ಲಿಯೂ ಸೌಹಾರ್ದತೆಯ ಜೀವನವನ್ನು ಬೋಧಿಸಿರುತ್ತಾರೆ. ದೇವನೊಬ್ಬ ನಾಮ ಹಲವು ಎಂಬಂತೆ ಸಕಲ ಜೀವರಾಶಿಗಳಿಗೂ ಸೃಷ್ಟಿಕರ್ತನೊಬ್ಬನೇ ಆಗಿರುತ್ತಾನೆ. ಆದರೆ ಭೂಮಿಯ ಮೇಲೆ ಧರ್ಮದ ಉದ್ಧಾರಕ್ಕಾಗಿ ಸಮಯಕ್ಕೆ ತಕ್ಕಂತೆ ದಾರ್ಶನಿಕರು, ಪ್ರವಾದಿಗಳು ಬಂದು ಧಾರ್ಮಿಕವಾಗಿ ಬೋಧನೆಗಳನ್ನು ತಿಳಿಸಿರುತ್ತಾರೆ. ಅವರೆಲ್ಲರ ಧ್ಯೇಯ, ಉದ್ದೇಶಗಳು ಸಮಾಜದಲ್ಲಿ ಪ್ರೀತಿ, ಪ್ರೇಮ ಶಾಂತಿಯ ಸ್ಥಾಪನೆಯೇ ಆಗಿರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಎಲ್ಲ ರಕ್ತದಾನಿಗಳಿಗೂ ಪ್ರಮಾಣಪತ್ರಗಳನ್ನು ವಿತರಿಸಿದರು.
ನಿವೃತ್ತ ಉಪನ್ಯಾಸಕ ಚಂದ್ರಶೇಖರ್ ಶಾಸ್ತ್ರಿ ಮಾತನಾಡಿ, ಆರೋಗ್ಯದ ಕುರಿತು ಯಾವುದೇ ಭಯ ಬೇಡ, ಕಾರಣ ಸಾಕ್ಷಿ ನಾನೇ ಆಗಿರುತ್ತೇನೆ. ಇಲ್ಲಿಯವರೆಗೆ 107 ಬಾರಿ ರಕ್ತದಾನವನ್ನು ಮಾಡಿದ್ದೇನೆ ಎಂದರು. ಚರ್ಚ್ ಫಾದರ್ ಸ್ಯಾಮ್ಸನ್ ಮಾತನಾಡಿದರು. ನಗರಸಭೆ ಸದಸ್ಯ ಎಚ್.ಕೆ. ಮಂಜುನಾಥ್ ಹಾಗೂ ಚರ್ಚ್‌ನ ಪದಾಧಿಕಾರಿಗಳು ಇದ್ದರು.ಮಹಿಳಾ ಕಾಂಗ್ರೆಸ್‌ನಿಂದ ಆಚರಣೆ:
ವಿವಿಧೆಡೆ ಆಚರಣೆ: