- ಶಿಕಾರಿಪುರದ ಶಿವರಾಜ್ ಆರೋಪಿ: ಸ್ಯಾಮ್ ವರ್ಗೀಸ್ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ಠಾಣೆಯಲ್ಲಿ ಈ ಕುರಿತು ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು. ಪಟ್ಟಣದ ಸರ್ವರ್ ಕೇರಿಯ ನಿವಾಸಿ ಮೋಹನ್ ಎಂಬವರ ಮನೆಯವರೆಲ್ಲರೂ ಬೆಂಗಳೂರಿಗೆ ಹೋಗಿದ್ದರು. ಆ ಸಮಯದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಶಿಕಾರಿಪುರ ತಾಲೂಕಿನ ಚುರ್ಚುಗುಂಡಿ ಗ್ರಾಮದ ಶಿವರಾಜ್ ಹೆಂಚು ತೆಗೆದು ಮನೆಯೊಳಗೆ ಇಳಿದಿದ್ದಾನೆ. ಮೋಹನ್ ಅವರ ಸೊಸೆ ಸಾಗರೀಕಗೆ ಸೇರಿದ ತಾಳಿಸರ, ಬ್ರೇಸ್‌ಲೈಟ್, ಮುತ್ತುಗಳ್ಳುಳ್ಳ ಬಂಗಾರದ ಚೈನ್, ಆರು ಜೊತೆ ಕಿವಿಯೋಲೆ ಹಾಗೂ ಉಂಗುರ ಸೇರಿ ಒಟ್ಟು 109 ಗ್ರಾಂ ತೂಕದ ಬಂಗಾರ ಹಾಗೂ 25 ಗ್ರಾಂನ ಕಾಲ್‌ಚೈನ್ ಕದ್ದಿದ್ದನು.
ಸಾಗರೀಕ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್ ಪ್ರಕರಣದಲ್ಲಿ ವಿಶೇಷ ಗಮನಹರಿಸಿ, ತನಿಖಾ ತಂಡ ರಚನೆ ಮಾಡಿದ್ದರು. ತಂಡವು ಘಟನೆ ನಡೆದ 24 ತಾಸಿನೊಳಗೆ ಆರೋಪಿಯನ್ನು ಬಲೆಗೆ ಕೆಡವಿದೆ.ಪ್ರಶಂಸೆ:
ಕಾರ್ಯಾಚರಣೆ ತಂಡದಲ್ಲಿ ಬೆರಳು ಮುದ್ರೆ ಘಟಕದ ಸಿಪಿಐ ಇಸ್ಮಾಯಿಲ್, ಎಎಸ್‌ಐ ಹರೀಶ್, ಸಿಬ್ಬಂದಿ ಜಗದೀಶ್, ರವಿ, ರಾಜಶೇಖರ್, ಸುರೇಶ್ ನಾಯ್ಕ್, ಅಕ್ತರ್, ಮಹೇಂದ್ರ ನಂಜಪ್ಪನವರ, ವೀರೇಶ್, ನಾಗರಾಜ್ ಇತರರು ಇದ್ದರು.
ಹೊನ್ನಾಳಿ ಪಟ್ಟಣದಲ್ಲಿ ಮೋಹನ್ ಎನ್‌ಕ್ಲೇವ್ ಮಾಲೀಕರ ಮನೆಯಲ್ಲಿ ಒಡವೆಗಳನ್ನು ಕದ್ದ ಕಳ್ಳನನ್ನು ಒಂದೇ ದಿನದೊಳಗೆ ಹೊನ್ನಾಳಿ ಪೊಲೀಸರು ಬಂಧಿಸಿ, ಮಾಲು ವಶಕ್ಕೆ ಪಡೆದರು.