ಸಂಡೂರು: ತಾಲೂಕಿನ ತೋರಣಗಲ್ಲಿನ ಓಪಿಜೆ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಂದಾಲ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಕೆಲಸ ಪಡೆದುಕೊಳ್ಳಲು ಅನುಕೂಲವಾಗಲೆಂದು ಜರ್ಮನ್ ಮತ್ತು ಇಂಗ್ಲಿಷ್ ಭಾಷಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಜೆಎಸ್‌ಡಬ್ಲೂ ಫೌಂಡೇಶನ್‌ನ ದಕ್ಷಿಣ ಭಾರತ ವಲಯ ಮುಖ್ಯಸ್ಥರಾದ ಪೆದ್ದಣ್ಣ ಬೀಡಲಾ ಅವರು ಮಾತನಾಡಿ, ಜರ್ಮನ್ ಭಾಷೆ ಕಲಿಸಲು ಚಾರ್ಕೋಸ್ ಸಂಸ್ಥೆ ಹಾಗೂ ಇಂಗ್ಲಿಷ್ ಕಲಿಸಲು ಇನೋವೇಷನ್ಸ್ ಅನ್ಲಿಮಿಟೆಡ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಭಾರತೀಯ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಭೆಯನ್ನು ವಿಶ್ವಮಟ್ಟಕ್ಕೆ ತಲುಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ತರಬೇತಿಯಿಂದ ನರ್ಸಿಂಗ್ ವಿದ್ಯಾರ್ಥಿಗಳು ಭಾರತದಲ್ಲಿಯೇ ಅಲ್ಲದೆ, ಯೂರೋಪ್ ಸೇರಿದಂತೆ ಜಾಗತಿಕ ಆರೋಗ್ಯ ಸಂಸ್ಥೆಗಳಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲೂ ಫೌಂಡೇಶನ್‌ನ ಮಹೇಶ್ ಶೆಟ್ಟಿ, ಸನ್ನಿ ಈಯಪ್ಪನ್, ಅನುಷ್ಠಾನ ಸಂಸ್ಥೆಗಳಿAದ ಡಾ. ಮಂಜುನಾಥ, ರಾಗಿಣಿ, ಜಿಂದಾಲ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ರಾಜೇಶ್ವರಿ, ಶಿವರಾಜ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.