ಗಜಸೇನೆ ಜಿಲ್ಲಾ ಗೌರವಾಧ್ಯಕ್ಷರಾಗಿ ಜೆ ಕೆ ಹೊಸೂರು ಬಸವರಾಜು

KannadaprabhaNewsNetwork |  
Published : Jun 12, 2024, 12:34 AM IST
10ಕೆಜಿಎಲ್ 17ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಕರವೇ ಗಜಸೇವೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರರವರ  ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ  ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜೆ ಕೆ ಹೊಸೂರು ಬಸವರಾಜು, ಮಹದೇವಣ್ಣ, ಸಿದ್ದಪ್ಪ ಇನ್ನಿತರಿದ್ದರು. | Kannada Prabha

ಸಾರಾಂಶ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರವೇ ಗಜಸೇವೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರರವರ ಮಾರ್ಗದರ್ಶನದಲ್ಲಿ ಪೂರ್ವಬಾವಿ ಸಭೆ ಕರೆದು, ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಸಂಘಟನೆಯ ಜಿಲ್ಲಾ ನೂತನ ಪದಾಧಿಕಾರಿಗಳನ್ನು ಕರವೇ ಗಜಸೇನೆ ಜಿಲ್ಲಾಧ್ಯಕ್ಷ ಪಾಳ್ಯ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ನೇಮಕ ಮಾಡಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರವೇ ಗಜಸೇವೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರರವರ ಮಾರ್ಗದರ್ಶನದಲ್ಲಿ ಪೂರ್ವಬಾವಿ ಸಭೆ ಕರೆದು, ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಜಿಲ್ಲಾ ಗೌರವಧ್ಯಕ್ಷರಾಗಿ ಜಿ.ಕೆ ಹೊಸೂರು ಬಸವರಾಜು, ಜಿಲ್ಲಾ ಉಪಾಧ್ಯಕ್ಷ ಪಾಳ್ಯ ಸಿದ್ದರಾಜನಾಯಕ, ಉತ್ತಂಬಳ್ಳಿ ಸಿದ್ದಪ್ಪ, ಸಿಂಗನಲ್ಲೂರು ಪುಟ್ಟರಾಜು, ಕಾರ್ಯಧ್ಯಕ್ಷರಾಗಿ ತೆಳ್ಳನೂರು ಪುರುಷೋತ್ತಮ್, ಜಿಲ್ಲಾ ಕಾನೂನು ಸಲಹೆಗಾರರಾಗಿ ಪಾಳ್ಯ ಮಧುಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಾಳ್ಯ ಸಿದ್ದರಾಜು, ಕಾರ್ಯದರ್ಶಿಯಾಗಿ ಪಾಳ್ಯ ಚಂದ್ರು, ಖಜಾಂಚಿಯಾಗಿ ಹರಳೆ ಮಹದೇವಪ್ಪ, ಲೆಕ್ಕ ಪರಿಶೋಧಕರಾಗಿ ಪಾಳ್ಯ ಮಧುಶೇಖರ ನಾಯಕ, ಜಿಲ್ಲಾ ಸಂಚಾಲಕರಾಗಿ ಕೆಂಪನಪಾಳ್ಯ ಮಹದೇವಣ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಮೋಳೆ ಕೇಬಲ್ ರಾಜು, ಸಿಂಗನಲ್ಲೂರು ನಾಗೇಂ ತಾಲೂಕು ಸಂಘಟನಾಕಾರರಾಗಿ ಮೋಳೆ ಮಂಜು ಅವರನ್ನು ನೇಮಕ ಮಾಡಲಾಯಿತು.

ಈ ವೇಳೆ ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಹೋರಾಟ, ರೈತ ಪರ ಹಾಗೂ ನಾಡು ನುಡಿ, ಜಲ ಹೋರಾಟ, ಶೋಷಿತರ ಪರ

ಹೋರಾಟ ನಮ್ಮ ಸಂಘಟನೆ ಉದ್ದೇಶವಾಗಿದೆ. ಈ ಹಿನ್ನೆಲೆ ಪೂರ್ವಭಾವಿ ಸಭೆ ನಡೆಸಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಶೀಘ್ರದಲ್ಲೇ ರಾಜ್ಯಾಧ್ಯಾಕ್ಷರ ತಾಯ್ನಾಡು ರಾಘವೇಂದ್ರರವರ ಅಧ್ಯಕ್ಷತೆಯಲ್ಲಿ ಚಾಮರಾಜನಗರದಲ್ಲಿ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಗಳದಲ್ಲಿ ಗಂಡನ ಕೊಲೆ ಮಾಡಿಅನಾರೋಗ್ಯದ ಕಥೆ ಕಟ್ಟಿದ ಪತ್ನಿ
ದಲಿತರ ಒಳಿತಿಗೆ ವಾಜಪೇಯಿಹೆಚ್ಚಿನ ಒತ್ತು: ಜಗದೀಶ್ ಶೆಟ್ಟರ್