ಜ್ಞಾನ ಭಾರತಂ ಮಿಷನ್ ಯೋಜನೆ ಮುಂದಿನ ಪೀಳಿಗೆಗೆ ಸಹಕಾರಿ: ಡಾ.ಕುಮಾರ

KannadaprabhaNewsNetwork |  
Published : May 21, 2026, 01:45 AM IST
20ಕೆಎಂಎನ್ ಡಿ26 | Kannada Prabha

ಸಾರಾಂಶ

ಜ್ಞಾನ ಭಾರತಂ ಮಿಷನ್ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ದೇಶದ ಪ್ರಾಚೀನ ಹಸ್ತಪ್ರತಿಗಳನ್ನು (ಹಳೆಯ ಹಸ್ತಪ್ರತಿಗಳು/ಗ್ರಂಥಗಳು) ಸಂರಕ್ಷಿಸಲು, ಡಿಜಿಟಲೀಕರಣಗೊಳಿಸಲು ಮತ್ತು ಜಾಗತಿಕವಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಆರಂಭಿಸಲಾಗಿದೆ.

ಮಂಡ್ಯ:

ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಜಾರಿಯಿಂದ ಸಾವಿರರು ಶತಮಾನದ ವರ್ಷಗಳ ಹಿಂದೆ ಇದ್ದ ಹಳೆಯ ಸಂಪ್ರದಾಯಿಕ ಹಸ್ತ ಪ್ರತಿ ಹಾಗೂ ತಾಳೆ ಪತ್ರಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ನೆರವಾಗಲಿದೆ ಎಂದು ಡೀಸಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಭಾರತ ಸರ್ಕಾರದ ಕೇಂದ್ರ ಸಂಸ್ಕೃತಿ ಮಂತ್ರಾಲಯದ ಜ್ಞಾನ ಭಾರತಂ ಮಿಷನ್ ಅಡಿ ರಾಷ್ಟ್ರೀಯ ಹಸ್ತ ಪ್ರತಿ ಸಮೀಕ್ಷೆ ಜಿಲ್ಲಾ ಮಟ್ಟದ ಕಾರ್ಯ ಚಟುವಟಿಕೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಸಂಬಂಧ ಸಭೆಯಲ್ಲಿ ಮಾತನಾಡಿದರು.

ಜ್ಞಾನ ಭಾರತಂ ಮಿಷನ್ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ದೇಶದ ಪ್ರಾಚೀನ ಹಸ್ತಪ್ರತಿಗಳನ್ನು (ಹಳೆಯ ಹಸ್ತಪ್ರತಿಗಳು/ಗ್ರಂಥಗಳು) ಸಂರಕ್ಷಿಸಲು, ಡಿಜಿಟಲೀಕರಣಗೊಳಿಸಲು ಮತ್ತು ಜಾಗತಿಕವಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಆರಂಭಿಸಲಾಗಿದೆ ಎಂದರು.

ಯೋಜನೆ ಪ್ರಮುಖ ಉದ್ದೇಶ ಪ್ರಾಚೀನ ಭಾರತೀಯ ಜ್ಞಾನ, ವಿಜ್ಞಾನ, ಕಲೆ ಮತ್ತು ತತ್ತ್ವಶಾಸ್ತ್ರದ ಬರವಣಿಗೆಗಳನ್ನು ನಾಶವಾಗದಂತೆ ರಕ್ಷಿಸುವುದು ಮತ್ತು ಯುವ ಪೀಳಿಗೆಗೆ ತಲುಪಿಸುವುದಾಗಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಹಳೆಯ ಕೈಬರಹಗಳನ್ನು ಓದಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಲಾಗುತ್ತಿದೆ ಎಂದರು.

ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ ಹಸ್ತಪ್ರತಿ ಹಾಗೂ ತಾಳೆ ಪತ್ರಗಳ ದಾಖಲೆಗಳ ಸಂರಕ್ಷಣೆ ಜೊತೆಗೆ ಜ್ಞಾನದ ಸಂರಕ್ಷಣೆ ಮಾಡಬಹುದಾಗಿದೆ. ದೇವಾಲಯಗಳು, ಮಠಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಖಾಸಗಿ ಗ್ರಂಥಾಲಯಗಳಲ್ಲಿ ಹಸ್ತಪ್ರತಿಗಳನ್ನು ಗುರುತಿಸಿ ದಾಖಲಿಸಬೇಕು ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಹಸ್ತ ಪ್ರತಿ ಸಂರಕ್ಷಕರಲ್ಲಿ ವಿಷನ್ ಉದ್ದೇಶಗಳ ಕುರಿತು ಸ್ಥಳೀಯ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಾಘವೇಂದ್ರ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.ಆನೆ ಜಯಮಾರ್ಥಂಡ ಹಾಗೂ ಚೆನ್ನೈ ಮೂಲದ ತುಳಸಿಗೆ ರೋಟರಿ ಸಂಸ್ಥೆಯಿಂದ ಸಂತಾಪ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಆನೆಗಳ ಕಾದಾಟದಲ್ಲಿ ಮರಣ ಹೊಂದಿದ ಜಯಮಾರ್ಥಂಡ ಹಾಗೂ ಚೆನ್ನೈ ಮೂಲದ ತುಳಸಿ ಎಂಬ ಮಹಿಳೆ ಸಾವಿಗೆ ರೋಟರಿ ಸಂಸ್ಥೆಯಿಂದ ಸಂತಾಪ ಸೂಚಿಸಲಾಯಿತು.

ಪಟ್ಟಣದ ಪುರಸಭೆ ವೃತದಿಂದ ಕುವೆಂಪು ವೃತ್ತದವರೆಗೂ ರೋಟರಿ ಸಂಸ್ಥೆ ಸದಸ್ಯರು ಹಾಗೂ ಗ್ರಾಮಸ್ಥರು ದೀಪಗಳನ್ನು ಹಿಡಿದು ಸಾಗುವ ಮೂಲಕ ಕೊಡಗು ಜಿಲ್ಲೆ, ಕುಶಾಲನಗರದ ದುಬಾರೆಯಲ್ಲಿ ನಡೆದ ಆನೆಗಳ ಘರ್ಷಣೆ ಕಾದಾಟದಲ್ಲಿ ಮರಣ ಹೊಂದಿದ ಚೆನ್ನೈ ಮೂಲದ ತುಳಸಿ ಹಾಗೂ ಜಯಮಾರ್ಥಂಡ ಆನೆ ಸಾವಿಗೆ ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.ಬಳಿಕ ವೈದ್ಯ, ಗಾಂಧಿವಾದಿ ಡಾ.ಸುಜಯ್ ಕುಮಾರ್ ಮಾತನಾಡಿ, ಪ್ರಕೃತಿಗಿಂತ ಮಿಗಿಲಾದದ್ದು ಮತ್ತೊಂದಿಲ್ಲ. ಮಾನವ ಕೇವಲ ತನ್ನ ಪ್ರಗತಿಗಾಗಿ ಎಲ್ಲೆ ಮೀರಿ ವರ್ತಿಸಿದಾಗ ಪ್ರಕೃತಿಯಿಂದ ಉಂಟಾಗುವ ವಿಕೋಪಗಳಿಗೆ ಮಾನವನೇ ಗುರಿಯಾಗಬೇಕಾಗುತ್ತದೆ. ಅದಕ್ಕೆ ಇಂದಿನ ಘಟನೆಯೇ ನಿದರ್ಶನ. ಹಾಗಾಗಿ ಪ್ರಕೃತಿ ನಿಯಮಗಳಿಗೆ ಬದ್ಧರಾಗಿ ಮಾನವ ಇತಿಮಿತಿಗಳ ನಡುವೆ ಜೀವನ ನಡೆಸಬೇಕೆಂದರು.

ರೋಟರಿ ಅಧ್ಯಕ್ಷ ಡಾ.ರಾಘವೇಂದ್ರ ಮಾತನಾಡಿ, ಅನಿರೀಕ್ಷಿತ ಘಟನೆಯಿಂದ ಆನೆ ಮತ್ತು ಮಹಿಳೆ ಸಾವನ್ನಪ್ಪಿರುವುದು ತುಂಬ ಬೇಸರ ತರಿಸಿದೆ. ಜೊತೆಗೆ ಜಯ ಮಾರ್ಥಂಡ ನಾಡಹಬ್ಬ ಮೈಸೂರು ದಸರಾದಲ್ಲಿ ಮೂರು ಬಾರಿ ಭಾಗವಹಿಸಿದ್ದು. ಇಂದು ನಾವು ಕಳೆದುಕೊಂಡಿದ್ದೇವೆ ಎಂದರು.ಸಾರ್ವಜನಿಕರು ಸಹ ಯಾವುದೇ ಸ್ಥಳಕ್ಕೆ ಭೇಟಿ ನೀಡಿದಾಗ ಬಹಳ ಎಚ್ಚರಿಕೆ ವಹಿಸುವುದು ಸೂಕ್ತ. ನಮ್ಮ ಒಂದು ಸಣ್ಣ ನಿರ್ಲಕ್ಷದಿಂದ ಸಾವು ಸಂಭವಿಸಬಹುದು. ಇದರಿಂದ ಆ ಕುಟುಂಬವೇ ಬೀದಿಗೆ ಬೀಳಲಿದೆ ಎಂದು ಹೇಳಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ಈ ವೇಳೆ ಪಟ್ಟಣ ಟೌನ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಜಾನ್ ಬಾಯ್, ರೋಟರಿ ಸತೀಶ್, ಎನ್. ಸರಸ್ವತಿ, ಶಾರದಾ ವಿಲಾಸ್ ಕಾನೂನು ಕಾಲೇಜು ಎನ್‌ಎಸ್‌ಎಸ್ ಅಧಿಕಾರಿ ಸವಿತಾ, ಅರುಣ್, ಜ್ಞಾನಾನಂದ, ರಮೇಶ್, ಶೇಷಾದ್ರಿಪುರಂ ಇಂಜಿನಿಯರ್ ಕಾಲೇಜು ಎನ್‌ಎಸ್‌ಎಸ್ ಸ್ವಯಂ ಸೇವಕರಾದ ಹೃದಯ, ಕರ್ಣ, ನಿಶಾ, ಎಸ್‌ಟಿಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶ್ರೇಯಸ್, ಚಿರಾಗ್, ವಿಹಾನ್, ಆಧ್ಯಾನ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ: ಪಿ.ರವಿಕುಮಾರ್
ದಾಳಿಗೆ ಹೆದರಿ ಕಡತಗಳನ್ನು ಬಚ್ಚಿಟ್ಟ ಬೇಲೂರು ಗ್ರಾಪಂ ಅಧಿಕಾರಿಗಳು