ಉಳ್ಳಾಲ: ಪದವಿ ಪಡೆದ ಪ್ರತಿಯೊಬ್ಬರೂ ಉದ್ಯೋಗ ಹುಡುಕುವವರಾಗುವ ಬದಲು, ತಮ್ಮ ಅರ್ಹತೆ, ಸಾಮರ್ಥ್ಯದಿಂದ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಿ ರೂಪುಗೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಗುರಿ ಹೊಂದಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ್ ಎಸ್ ಅವರು ಹೇಳಿದರು.
ಪಿಎ ಎಜ್ಯುಕೇಶನಲ್ ಟ್ರಸ್ಟ್ ನ ಹಣಕಾಸು ಅಧಿಕಾರಿ ಅಹ್ಮದ್ ಕುಟ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡೀನ್ ಡಾ.ಸಯ್ಯದ್ ಅಮೀನ್ ಅಹ್ಮದ್ ಅವರು ಶೈಕ್ಷಣಿಕ ಸಾಧಕರ ಪಟ್ಟಿ ವಾಚಿಸಿದರು. ಪ್ರಾಂಶುಪಾಲ ಡಾ.ರಮೀಸ್ ಎಂ.ಕೆ. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ವಿಧಿ ಬೋಧಿಸಿದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಇಸ್ಮಾಯಿಲ್ ಶಾಫಿ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಡಾ.ಶರ್ಮಿಳಾ ಕುಮಾರಿ ಎಂ.ಅವರು ವಂದಿಸಿದರು. ಪ್ರೊ.ಫಾತಿಮತ್ ರೈಹಾನ್ ಹಾಗೂ ವಿಯೋಲ ಇಶ್ಮಿತ ಲೋಬೋ ನಿರೂಪಿಸಿದರು.