ವಿಶೇಷ ವರದಿಕನ್ನಡಪ್ರಭ ವಾರ್ತೆ ಜಮಖಂಡಿತಾನಷ್ಟೇ ಅಲ್ಲ, ತನ್ನೊಂದಿಗೆ ಎಲ್ಲರೂ ಬೆಳೆಯಬೇಕು ಎಂದು ಬಯಸುವವನೇ ನಿಜ ನಾಯಕ ಎಂಬ ಮಾತಿದೆ. ಅದರಂತೆ ತಾನೊಬ್ಬನೇ ಉದ್ಯಮಿಯಾದರೆ ಏನು ಎಲ್ಲರೂ ಉದ್ಯಮಿಯಾಗಿ ಉದ್ಯೋಗ ನೀಡಬೇಕು ಎಂಬ ಹೊಸಬರವನ್ನು ಉದ್ಯಮ ಕ್ಷೇತ್ರಕ್ಕೆ ತಂದವರು ಮಾಜಿ ಸಚಿವ, ಉದ್ಯಮಿ ಮುರುಗೇಶ ನಿರಾಣಿಯವರು.
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಜಮಖಂಡಿತಾನಷ್ಟೇ ಅಲ್ಲ, ತನ್ನೊಂದಿಗೆ ಎಲ್ಲರೂ ಬೆಳೆಯಬೇಕು ಎಂದು ಬಯಸುವವನೇ ನಿಜ ನಾಯಕ ಎಂಬ ಮಾತಿದೆ. ಅದರಂತೆ ತಾನೊಬ್ಬನೇ ಉದ್ಯಮಿಯಾದರೆ ಏನು ಎಲ್ಲರೂ ಉದ್ಯಮಿಯಾಗಿ ಉದ್ಯೋಗ ನೀಡಬೇಕು ಎಂಬ ಹೊಸಬರವನ್ನು ಉದ್ಯಮ ಕ್ಷೇತ್ರಕ್ಕೆ ತಂದವರು ಮಾಜಿ ಸಚಿವ, ಉದ್ಯಮಿ ಮುರುಗೇಶ ನಿರಾಣಿಯವರು. ಶ್ರೀ ಕೃಷ್ಣ ಜನ್ಮಾಷ್ಟಮಿ ಸೆ.4ರಂದು ಅವರ 61ನೇ ಹುಟ್ಟುಹಬ್ಬ. ಅಸಂಖ್ಯ ಜನರಿಗೆ ಉದ್ಯೋಗ ನೀಡಿ, ಅವರ ಬದುಕಿಗೆ ಬೆಳಕಾಗಿದ್ದಾರೆ ನಿರಾಣಿಯವರು.
ಜನ್ಮದಿನದಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ. ಅದರಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮುರುಗೇಶ ನಿರಾಣಿಯವರ 61ನೇ ಹುಟ್ಟುಹಬ್ಬದ ನಿಮಿತ್ತವಾಗಿ ಸೆ.4ರಂದು 3ನೇ ಬಾರಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯ ಕೃಷ್ಣಾ ನದಿ ತೀರದಲ್ಲಿ ಕೃಷ್ಣಾ ಆರತಿ ವೈಭವದಿಂದ ಜರುಗುತ್ತಿದೆ. ಅನೇಕ ಗಣ್ಯರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಏಷಿಯಾದ ಬಹುದೊಡ್ಡ ಉದ್ಯಮಿ:
ಸಕ್ಕರೆ ಉದ್ಯಮದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ ಮುರುಗೇಶ ನಿರಾಣಿಯವರು. 500 ಟಿಸಿಡಿ ಸಕ್ಕರೆ ಕಾರ್ಖಾನೆಯಿಂದ ಆರಂಭವಾದ ಸಕ್ಕರೆ ಯಾನ ಇಂದು ಪ್ರತಿದಿನ ಲಕ್ಷ ಟಿಸಿಡಿ ಕಬ್ಬು ನುರಿಸುವ ಸಾಮರ್ಥ್ಯಕ್ಕೆ ಬಂದು ನಿಂತಿದೆ. ಪ್ರತಿನಿತ್ಯ 30 ಲಕ್ಷ ಲೀ ಇಥೆನಾಲ್ ಉತ್ಪಾದನೆ ಮೂಲಕ ಏಷಿಯಾದ ಬಹುದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ. ಸಕ್ಕರೆ ಇಥೆನಾಲ್ ಜೊತೆಗೆ ಸಹವಿದ್ಯುತ್, ಸಿಬಿಜಿ, ಸಿಒ2, ಜೈವಿಕ ಗೊಬ್ಬರ, ಸಿಮೆಂಟ್, ಬ್ಯಾಂಕಿಂಗ್, ಶಿಕ್ಷಣ, ಸೂಪರ್ ಮಾರ್ಕೆಟ್, ಅಗ್ರಿಮಾರ್ಟ್ ಹೀಗೆ ಹಲವು ಕ್ಷೇತ್ರಗಳಲ್ಲಿ ಯಶಸ್ಸಿನ ಪಥದಲ್ಲಿದ್ದಾರೆ.1.5 ಲಕ್ಷ ರೈತ ಕುಟುಂಬಗಳು ನಿರಾಣಿ ಉದ್ಯಮದ ಜೊತೆಗೆ ನಿಂತಿದ್ದಾರೆ. ಅಲ್ಲದೆ, 75 ಸಾವಿರ ಜನರಿಗೆ ಉದ್ಯೋಗ ನೀಡಿ ಅವರ ಬದುಕಿಗೆ ದಾರಿದೀಪವಾಗಿದ್ದಾರೆ.ಕೈಗಾರಿಕಾ ಸಚಿವರಾಗಿ ನಾನಾ ಕೆಲಸಗಳು:
ಕೇವಲ ಉದ್ಯಮಿಯಾಗಿ ಅಷ್ಟೇ ಅಲ್ಲ, ಜನಪ್ರತಿನಿಧಿಯಾಗಿಯೂ ಅವರು ಅಚ್ಚಳಿಯದೇ ಕಾರ್ಯಗಳನ್ನು ಮಾಡಿದ್ದಾರೆ. ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಅವರು, ಅನೇಕ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು. 2008-13 ಹಾಗೂ 2019-2023 ಎರಡು ಅವಧಿಗೆ ಕೈಗಾರಿಕಾ ಸಚಿವರಾಗಿದ್ದರು. ಈ ವೇಳೆ ಮೂರು ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಗಳನ್ನು ಮಾಡಿ ರಾಜ್ಯಕ್ಕೆ ಸಾಕಷ್ಟು ಬಂಡವಾಳ ಬರುವಂತೆ ನೋಡಿಕೊಂಡರು. ಜತೆಗೆ ಸಿಂಗಲ್ ವಿಂಡೋ ಸಿಸ್ಟ್ಂ, ಸುವರ್ಣ ಕರ್ನಾಟಕ ಕಾರಿಡಾರ್, ಕೆಐಎಡಿಬಿಗೆ ಕಾಯಕಲ್ಪ, ಅಂತರಿಕ್ಷ ಹಾಗೂ ವೈಮಾನಿಕ ವಿಜ್ಞಾನ ಉಪಕರಣ ತಯಾರಿಕಾ ಘಟಕ, ಕೈಗಾರಿಕಾ ಟೌನ್‌ಶಿಪ್ ಹೀಗೆ ಹತ್ತು ಹಲವು ಉದ್ಯಮಸ್ನೇಹಿ ನೀತಿಗಳನ್ನು ತಂದರು. ಈ ಮೂಲಕ ಲಕ್ಷಾಂತರ ಜನರಿಗೆ ಹೊಸ ಉದ್ಯೋಗ ಸೃಷ್ಟಿಗೆ ಮುನ್ನುಡಿ ಬರೆದರು.ಬೀಳಗಿ ಕ್ಷೇತ್ರ ಅಭಿವೃದ್ಧಿಯ ಪ್ರವರ್ತಕ:
ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಹೆಚ್ಚು ಬಾಧಿತಗೊಂಡ ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರ ಒಂದೆಡೆ ನಿರಾಶ್ರಿತವಾಗಿದ್ದರೆ, ಮತ್ತೊಂದೆಡೆ ಬಾದಾಮಿ ತಾಲೂಕಿನ ಗ್ರಾಮಗಳು ನೀರಾವರಿ ಸೌಕರ್ಯ ಇಲ್ಲದೇ ಬರಡಾಗಿದ್ದವು. ಮೂರು ಬಾರಿ ಶಾಸಕರಾಗಿ ಕ್ಷೇತ್ರವನ್ನು ಕಣ್ಣರಳಿಸಿ ನೋಡುವಂತೆ ಮಾಡಿದರು. ಶಾಲೆಯಿಲ್ಲದ ಕುಗ್ರಾಮಗಳಲ್ಲಿ ಶಾಲೆ ತೆರೆದರು, ಅವಶ್ಯ ಇರುವೆಡೆ ತಮ್ಮ ಕುಟುಂಬದ ಹಿರಿಯರ ಹೆಸರಿನಲ್ಲಿ ಭೂದಾನ ಮಾಡಿ ಶಾಲೆ ಕಟ್ಟಿದರು. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕೆಳ ಕ್ರಮಾಂಕದಲ್ಲಿದ್ದ ಬೀಳಗಿ ತಾಲೂಕನ್ನು ನಂ.1 ಸ್ಥಾನಕ್ಕೆ ತಂದರು.ಕರಿಮಸೂತಿ ಏತ ನೀರಾವರಿ ಯೋಜನೆಗಾಗಿ ಸಾವಳಗಿಯಿಂದ ಆಲಮಟ್ಟಿಯವರೆಗೆ ಪಾದಯಾತ್ರೆ ಮೂಲಕ ರಾಜಕಾರಣದಲ್ಲಿ ಪ್ರವರ್ದಮಾನಕ್ಕೆ ಬಂದಿದ್ದ ನಿರಾಣಿಯವರು ರಾಜ್ಯದಲ್ಲಿಯೇ ಮೊದಲ ಬಾರಿಗೆ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಹೆರಕಲ್, ಸೊನ್ನ, ತೆಗ್ಗಿ-ಸಿದ್ದಾಪೂರ, ಸಾವಳಗಿ-ತುಂಗಳ, ಅನವಾಲ, ಕಾಡರಕೊಪ್ಪ, ಕೆರೂರ ಹೀಗೆ ಹತ್ತು-ಹಲವು ನೀರಾವರಿ ಯೋಜನೆಗಳನ್ನು ಜಾರಿಗೆ ತಂದರು. ಬೀಳಗಿ ತಾಲೂಕಿನ 1,27,626 ಎಕರೆ ಭೂಪ್ರದೇಶಕ್ಕೆ ನೀರು ನೀಡಿ ಬರದ ನಾಡಿಗೆ ಭಗೀರಥರಾದರು. 2018-13ರ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ ₹3,761 ಕೋಟಿ ಅನುದಾನದಲ್ಲಿ ₹2,020 ಕೋಟಿ ನೀರಾವರಿ ಯೋಜನೆಗಳಿಗೆ ಸೇರಿತ್ತು.
61ನೇ ಜನ್ಮದಿನದ ನಿಮಿತ್ಯ ಕೃಷ್ಣಾ ಆರತಿ:
ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮುರುಗೇಶ ನಿರಾಣಿಯವರ 61ನೇ ಹುಟ್ಟುಹಬ್ಬದ ನಿಮಿತ್ಯವಾಗಿ ಸೆ.4ರಂದು 3ನೇ ಬಾರಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯ ಕೃಷ್ಣಾ ನದಿ ತೀರದಲ್ಲಿ 3ನೇ ಬಾರಿಗೆ ಕೃಷ್ಣಾ ಆರತಿ ವೈಭವದಿಂದ ಜರುಗುತ್ತಿದೆ. ಕೃಷ್ಣಾ ಆರತಿಯಲ್ಲಿ ಶ್ರೀಶೈಲದ ಧರ್ಮರಥ ಆಗಮಿಸಲಿದ್ದು, ಅಲ್ಲಿಯ ದೇವಸ್ಥಾನ ಪ್ರಧಾನ ಅರ್ಚಕರಿಂದ ಭ್ರಮರಾಂಬ ಮಲ್ಲಿಕಾರ್ಜುನ ಕಲ್ಯಾಣೋತ್ಸವ ನಡೆಯಲಿದೆ. ಈ ಬಾರಿಯ ಕೃಷ್ಣಾ ಆರತಿಯನ್ನು ಪರಿಸರ ಸಂರಕ್ಷಣೆ ಹಾಗೂ ಸಂವರ್ಧನೆಯ ಧ್ಯೇಯವಾಗಿ ಅಳವಡಿಸಿಕೊಂಡು 5 ಸರಳ ಸೂತ್ರಗಳ ಮೂಲಕ ಪ್ರಕೃತಿ ಉಳಿವಿಗಾಗಿ ಸಂಕಲ್ಪ ಮಾಡಲಾಗುತ್ತಿದೆ.ಲಂಡನ್ನಿನ ಥೇಮ್ಸ್ ನದಿ ತೀರದಲ್ಲಿ ಗಂಗಾ ಆರತಿ ನಡೆಯುತ್ತದೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿಯಂದೇ ಶ್ರೀಶೈಲದ ಪಾತಳಗಂಗೆಯಲ್ಲಿ ಕೃಷ್ಣೆಗೆ ಭವ್ಯ ಆರತಿ ನೆರವೇರುತ್ತಿರುವುದು ಖುಷಿ ವಿಚಾರ. ಕೃಷ್ಣ ನಮ್ಮ ಬದುಕಿನ ಭಾವಗಂಗೆ. ಆಕೆಯಿಲ್ಲದ ನಮ್ಮ ಬದುಕು ಶಿವನಿಲ್ಲದ ಕೈಲಾಸದಂತೆ. ಕೃಷ್ಣಾ ಜಲಾನಯನ ಪ್ರದೇಶದ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು. ಕೃಷ್ಣಾ ಆರತಿ-ಕೃಷ್ಣಾ ಉತ್ಸವವು ಪರಂಪರೆಯಾಗಿ ಆಚರಣೆಯಾಗಬೇಕು. ಉತ್ತರ ಕರ್ನಾಟಕದ ನಾಡಹಬ್ಬವಾಗಿ ಬೆಳೆಯಬೇಕು.- ಸಂಗಮೇಶ ಆರ್. ನಿರಾಣಿ, ಕಾರ್ಯನಿರ್ವಾಹಕ ನಿರ್ದೇಶಕರು, ಎಂ.ಆರ್.ಎನ್. (ನಿರಾಣಿ) ಉದ್ಯಮ ಪರಿವಾರ
