ಉಡುಪಿ: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಗಣೇಶ ಸರಳಾಯ ಮತ್ತು ವಿಖ್ಯಾತ್ ಭಟ್ ನೇತೃತ್ವದಲ್ಲಿ ಸಹಸ್ರನಾಮಾರ್ಚನೆ, ಕಲ್ಪೋಕ್ತ ಪೂಜೆ, ಶ್ರೀರಂಗ ಪೂಜೆ, ದೀಪಾರಾಧನೆ ಹಾಗೂ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನೆರವೇರಿದವು. ಕ್ಷೇತ್ರದಲ್ಲಿ ನವರಾತ್ರಿಯ ಐದನೇ ದಿನ ಭಕ್ತರಾದ ಮಣಿಕಂಠ ಮತ್ತು ಮನೆಯವರು ಹಾಗೂ ವಿನಯ ಶೆಟ್ಟಿ ಮತ್ತು ಮನೆಯವರ ಸೇವಾರ್ಥವಾಗಿ ಜೋಡಿ ಚಂಡಿಕಾಯಾಗ ನೆರವೇರಿತು.
ಕುಸುಮಾ ನಾಗರಾಜ್ ಮತ್ತು ಮನೆಯವರು ಹಾಗೂ ಪದ್ಮಿನಿ ರಾಜೇಶ್ ಮತ್ತು ಮನೆಯವರಿಂದ ಜೋಡಿ ದುರ್ಗಾ ನಮಸ್ಕಾರ ನಡೆಯಿತು. ಮಧ್ಯಾಹ್ನದ ಮಹಾಪೂಜೆಯ ಅನಂತರ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ನೃತ್ಯ ಸೇವೆಯನ್ನು ಮೇಘಾ ಮತ್ತು ತಂಡ, ಸೃಷ್ಟಿ ಅರುಣ್, ಸಾಯಂತಿಕಾ, ಪ್ರಕೃತಿ ಸಮರ್ಪಿಸಿದರು.ನವಶಕ್ತಿ ಭಜನ ಮಂಡಳಿ, ಆಂಜನೇಯ ಭಜನ ಮಂಡಳಿಯಿಂದ ಭಜನೆ ಸಂಕೀರ್ತನೆ, ನವಶಕ್ತಿ ವೇದಿಕೆಯಲ್ಲಿ ಮಯೂರ ನೃತ್ಯ ತಂಡದವರಿಂದ ನೃತ್ಯ ವೈವಿಧ್ಯ ಜರಗಿತು. ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿ ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ಸ್ಕಂದ ಮಾತೆಯಾಗಿ ಅಲಂಕರಿಸಿದ್ದರು. ಅರ್ಚಕ ಅನೀಶ್ ಆಚಾರ್ಯ ಮಹಾಪೂಜೆ ನೆರವೇರಿಸಿದರು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ತಿಳಿಸಿದ್ದಾರೆ.ನಾಗೇಶ್ ಕಾಮತ್‌ಗೆ ಸನ್ಮಾನ
ನವರಾತ್ರಿ ಮಹೋತ್ಸವ ಸಂದರ್ಭ ನವಶಕ್ತಿ ವೇದಿಕೆಯಲ್ಲಿ ಕ್ಷೇತ್ರ ಮತ್ತು ಕಲಾನಿಧಿ ಉಡುಪಿ ವತಿಯಿಂದ ಕುಂದಾಪುರ ರೂಪಕಲಾ ಮೂರು ಮುತ್ತು ನಾಟಕ ತಂಡದ ನಟ ನಾಗೇಶ್ ಕಾಮತ್ ಕಟಪಾಡಿ ಅವರನ್ನು ‘ರಂಗಭೂಮಿ ಕಲಾ ತಿಲಕ’ ಎನ್ನುವ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.