ಎಚ್ಐವಿ ಮುಕ್ತ ಭಾರತಕ್ಕೆ ಕೈಜೋಡಿಸಿ: ಡಾ. ವೈಶಾಲಿ

KannadaprabhaNewsNetwork |  
Published : Jul 30, 2026, 02:45 AM IST
ಕ್ಯೂ ಆರ್ ಕೋಡ್ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಯುವ ಜನತೆಯಲ್ಲಿ ಅದರಲ್ಲಿಯೂ ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್ಐವಿ ಹರಡುವಿಕೆ ಹೆಚ್ಚುತ್ತಿರುವ ಬಗ್ಗೆ ವರದಿಯಾಗುತ್ತಿದೆ.

ಮೊಬೈಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ -೨೦೨೬ಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ಯುವ ಜನತೆಯಲ್ಲಿ ಅದರಲ್ಲಿಯೂ ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್ಐವಿ ಹರಡುವಿಕೆ ಹೆಚ್ಚುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಆದ್ದರಿಂದ ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಅಪಾಯದ ಮೌಲ್ಯಮಾಪನ ಮಾಡಿಕೊಂಡು ತಾವು ಎಚ್ಐವಿಯಿಂದ ಸುರಕ್ಷಿತವಾಗಿರುವ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ವೈಶಾಲಿ ನಾಯ್ಕ ಹೇಳಿದರು.

ತಮ್ಮ ಕಚೇರಿಯಲ್ಲಿ "ನಿಮ್ಮ ಎಚ್ಐವಿ ಸ್ಥಿತಿಯನ್ನು ತಿಳಿದುಕೊಳ್ಳಿ ಕ್ಯೂ ಆರ್ ಕೋಡ್ ಪೋಸ್ಟರ್ " ಬಿಡುಗಡೆಗೊಳಿಸಿ ಮೊಬೈಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ -೨೦೨೬ಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಸುಮಾರು ೫೪ ಸಾವಿರ ಜನರಿಗೆ ತಮಗೆ ಎಚ್ಐವಿ ಸೊಂಕು ಇರುವುದೇ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಯುವ ಜನತೆಯನ್ನು ಎಚ್ಐವಿಯಿಂದ ಸುರಕ್ಷಿತವಾಗಿಡಲು ಸ್ವಯಂ ಪ್ರೇರಿತರಾಗಿ ಕ್ಯೂ ಆರ್ ಕೋಡ್ ಸ್ಯಾನ್ ಮಾಡಿ ಅದರಲ್ಲಿರುವ ಸರಳ ಪ್ರೇಶ್ನೆಗಳಿಗೆ ಉತ್ತರಿಸುವ ಮೂಲಕ ತಮಗೆ ಇರುವ ಎಚ್ಐವಿ ಅಪಾಯದ ಕುರಿತು ಅವಲೋಕನ ಮಾಡಿಕೊಳ್ಳಬಹುದಾಗಿದೆ. ಎಚ್ಐವಿ/ಏಡ್ಸ್ ಕುರಿತ ಸಂಶಯಗಳಗೆ ಕ್ಯೂ ಆರ್ ಕೊಡ್ ನಲ್ಲಿ ಉತ್ತರ ಪಡೆಯಬಹುದಾಗಿದೆ. ತಾಲೂಕಿನ ಎಲ್ಲ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಈ ಕ್ಯೂ ಆರ್ ಕೋಡ್ ಪೋಸ್ಟರ್‌ ಅಳವಡಿಸಲಾಗುವುದು. ತಾಲೂಕಿನ ಪ್ರತಿಯೊಬ್ಬ ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಈ ಅಭಿಯಾನದಲ್ಲಿ ಭಾಗವಹಿಸಿ ಎಚ್ಐವಿ ಮುಕ್ತ ಭಾರತ ಗುರಿ ಮುಟ್ಟಲು ಕೈಜೋಡಿಸಬೇಕು ಎಂದರು.

ಪ್ರಥಮ ಹಂತದಲ್ಲಿ ತಾಲೂಕಿನ ಎಲ್ಲ ಪದವಿ, ಪದವಿಪೂರ್ವ ಕಾಲೇಜು ಮತ್ತು ಐಟಿಐ ಕಾಲೇಜುಗಳಲ್ಲಿ ಮೊಬೈಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ-೨೦೨೬ ಕ್ಯೂ ಆರ್ ಕೋಡ್ ಪೋಸ್ಟರ್ ಹಚ್ಚಲಾಗುತ್ತದೆ. ಎಲ್ಲ ಯುವ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಮೊಬೈಲ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಎಚ್ಐವಿ ಕುರಿತು ಮೌಲ್ಯಮಾಪನಕ್ಕೆ ಒಳಗಾಗಿ ಎಚ್ಐವಿ ಸ್ಥಿತಿಯನ್ನು ತಿಳಿದುಕೊಳ್ಳಲು ಕೋರಲಾಗಿದೆ. ಆರೋಗ್ಯ ಇಲಾಖೆಯ ಈ ಕುರಿತಂತೆ ಎಲ್ಲಡೆ ಮಾಹಿತಿ ನೀಡುವ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಆಸ್ಪತ್ರೆಯಲ್ಲಿರುವ ಐಸಿಟಿಸಿ ವಿಭಾಗವನ್ನು ಸಂಪರ್ಕಿಸಬಹುದು ಎಂದರು.

ಈ ಸಂದರ್ಭ ಆರೋಗ್ಯ ನೀರಿಕ್ಷಣಾಧಿಕಾರಿ ಚಿದಾನಂದ, ಆಪ್ತಸಮಾಲೋಚಕ ವಿನಾಯಕ ಪಟಗಾರ, ಪ್ರಯೋಗಶಾಲಾ ತಂತ್ರಜ್ಞ ಉಮೇಶ ಕೆ. ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಸಿಹಿತ್ಲು ಭಜನಾ ಮಂದಿರ ಸಮೀಪ ಕಡಲ್ಕೊರೆತ ಆರ್ಭಟ ತೀವ್ರ
ಪಕ್ಷ ಬಲಪಡಿಸಲು ‘ಸಂಘಟನ್ ಸೃಜನ್’ ಅಭಿಯಾನ: ಜಯಂತ್