ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಿ

KannadaprabhaNewsNetwork |  
Published : Nov 14, 2026, 02:30 AM IST
ಹರಪನಹಳ್ಳಿ ನಗರದ ಮೇಗಳ ಉಪ್ಪಾರಗೇರಿಯಲ್ಲಿ ಯಲ್ಲಾಪುರದ ವರೆಗಿನ ರಸ್ತೆ ಅಭಿವೃದ್ದಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿದರು.  | Kannada Prabha

ಸಾರಾಂಶ

ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಕೊಡಬೇಡಿ ಒತ್ತುವರಿ ಇದ್ದರೆ ತೆರವುಗೊಳಿಸಿ ಕೊಂಡು ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿ ಎಂದು ಅವರು ಜನರಿಗೆ ಕೋರಿದರು.

ಹರಪನಹಳ್ಳಿ: ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳಿ ಹಾಗೂ ಜನರೂ ಸಹ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಗುತ್ತಿಗೆದಾರರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಿದರು.

ಅವರು ತಾಲೂಕಿನ ಮತ್ತಿಹಳ್ಳಿ ಹಾಗೂ ನಗರದ ವಿವಿಧೆಡೆ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಗುರುವಾರ ಮಾತನಾಡಿದರು.

ಎನ್. ಶೀರನಹಳ್ಳಿ ಯಿಂದ ಹಿರೇಕೊಳಚಿವರೆಗೆ ರಾಜ್ಯ ಹೆದ್ದಾರಿ 5.30 ಕಿಮೀ ರಸ್ತೆ ಅಭಿವೃದ್ಧಿ ಹಾಗೂ ಮತ್ತಿಹಳ್ಳಿ ಬಳಿ ಹಗರಿಹಳ್ಳ‍ಕ್ಕೆ ಹೊಸದಾಗಿ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ₹9 ಕೋಟಿ ವೆಚ್ಚದಲ್ಲಿ ಹರಪನಹಳ್ಳಿ ನಗರದ ಹೊಳಲು ರಸ್ತೆಯ ರಾಜ್ಯ ಹೆದ್ದಾರಿ ಮೇಗಳ ಉಪ್ಪಾರಗೇರಿಯಿಂದ ಯಲ್ಲಾಪುರ ದವರೆಗೆ ₹ 2 ಕೋಟಿ ವೆಚ್ಚದಲ್ಲಿ ಹಾಗೂ ಐ.ಬಿ. ವೃತ್ತದಿಂದ ಹಡಗಲಿ ರಸ್ತೆಗೆ ಸೇರುವ ಸುಣಗಾರ ಗೇರಿ ರಸ್ತೆ ಅಭಿವೃದ್ದಿ ಪಿಎಲ್‌ ಡಿ ಬ್ಯಾಂಕ್‌ ಹಿಂಭಾಗ ಹಾಗೂ ತರಳ ಬಾಳು ಕಲ್ಯಾಣ ಮಂಟಪ ದ ಬಳಿ ರಸ್ತೆ ಅಭಿವೃದ್ದಿ, ಕಂಚಿಕೇರಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಯು ₹5 ಕೋಟಿ ವೆಚ್ಚದಲ್ಲಿ ಒಟ್ಟಾರೆ ₹16 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿ ಕಾರ್ಯ ಜರುಗುತ್ತವೆ ಎಂದು ಹೇಳಿದರು.

ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಕೊಡಬೇಡಿ ಒತ್ತುವರಿ ಇದ್ದರೆ ತೆರವುಗೊಳಿಸಿ ಕೊಂಡು ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿ ಎಂದು ಅವರು ಜನರಿಗೆ ಕೋರಿದರು. ನೀವು ನನಗೆ ನೀಡಿದ ಅವಕಾಶ ಶಾಸಕಿಯಾಗಿ ಸದುಪಯೋಗ ಪಡಿಸಿಕೊಂಡಿದ್ದೇನೆ ಎಂದು ಹೇಳಿದರು.

ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕುಬೇರಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕಾಧ್ಯಕ್ಷ ಉದಯಶಂಕರ, ಮುಖಂಡ ವಸಂತಪ್ಪ, ಟಿ. ವೆಂಕಟೇಶ, ಡಿ. ಅಬ್ದುಲ್‌ ರಹಿಮಾನ್, ಲಾಟಿ ದಾದಾಪೀರ, ದೇವೇಂದ್ರಗೌಡ, ಟಿ.ಎಚ್.ಎಂ. ಮಂಜುನಾಥ, ಎಲ್. ಮಂಜನಾಯ್ಕ, ನಗರಸಭಾ ಪೌರಾಯುಕ್ತೆ ರೇಣುಕಾ ಎಸ್. ದೇಸಾಯಿ, ಶಮಿವುಲ್ಲಾ, ಗುಡಿ ನಾಗರಾಜ, ಅಂಜಪ್ಪ, ಸುಮಾ, ಕವಿತಾ ಸುರೇಶ, ಎಇಇ ರಾಘವೇಂದ್ರ, ಇಸ್ಮಾಯಿಲ್‌ ಎಲಿಗಾರ, ಸಕ್ರಪ್ಪ, ಪರಸಪ್ಪ, ಟಿಎಪಿಸಿಎಂಎಸ್‌ ಅಧ್ಯಕ್ಷ ತೆಲಿಗಿ ಉಮಾಕಾಂತ, ಮೈದೂರು ರಾಮಣ್ಣ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ