ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಕೈಜೋಡಿಸಿ

KannadaprabhaNewsNetwork |  
Published : Nov 16, 2025, 02:45 AM IST
ಸ್ವದಸಹಬಗತತಜನಯರಜಮ | Kannada Prabha

ಸಾರಾಂಶ

ರಾಜ್ಯದಲ್ಲಿ ಗುಣಾತ್ಮಕ ಕಲಿಕಾ ಶಿಕ್ಷಣಕ್ಕಾಗಿ ಸರ್ಕಾರವು ವಿದ್ಯಾರ್ಥಿಗಳಿಗೆ ಹಲವಾರು ಯೋಜನೆ ಹಾಕಿಕೊಂಡಿದೆ.

ಹನುಮಸಾಗರ: ಉಪನ್ಯಾಸಕರೊಂದಿಗೆ ಪಾಲಕರು ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಕೈಜೋಡಿಸಬೇಕೆಂದು ಎಂದು ಪ್ರಾಚಾರ್ಯ ಭೀಮಪ್ಪ ಗೊಲ್ಲರ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿ ಬಗ್ಗೆ ಪಾಲಕರ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಗುಣಾತ್ಮಕ ಕಲಿಕಾ ಶಿಕ್ಷಣಕ್ಕಾಗಿ ಸರ್ಕಾರವು ವಿದ್ಯಾರ್ಥಿಗಳಿಗೆ ಹಲವಾರು ಯೋಜನೆ ಹಾಕಿಕೊಂಡಿದೆ. ಪಾಲಕರು ವಿದ್ಯಾರ್ಥಿಗಳನ್ನು ನಿತ್ಯ ಕಾಲೇಜಿಗೆ ಕಳುಹಿಸಬೇಕು.ಇದರ ಜತೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಯುವಕ, ಯುವತಿಯರು ಆಗಿದ್ದರಿಂದ ಪಾಲಕರು ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನಿಸುತ್ತಿರಬೇಕು. ಇದು ಭವಿಷ್ಯ ರೂಪಿಸುವ ವಯಸ್ಸಾಗಿರುತ್ತದೆ. ಇಂತಹ ವಯೋಮಾನದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಹಾಳಾಗಬಾರದು ಎಂದರು.

ಉಪನ್ಯಾಸಕ ಲಕಪತಿ ರಾಠೋಡ, ಶರಣಬಸಪ್ಪ ಹಾದಿಮನಿ, ಶರಣಪ್ಪ ಗೋಡೆಕಾರ, ಭರಮಲಿಂಗಪ್ಪ ದೇವರಮನೆ, ಗೀತಾ ಬಂಡಿಹಾಳ, ಎಸ್‌ಡಿಎ ವನಜಾಕ್ಷಿ ಪಾಟೀಲ್, ಸುಮಂಗಲ ಚನ್ನದಾಸರ ಹಾಗೂ ಪಾಲಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ