ರಕ್ತ ಹೀನತೆ ಮುಕ್ತ ತಾಲೂಕಾಗಿಸಲು ಕೈಜೋಡಿಸಿ

KannadaprabhaNewsNetwork |  
Published : Oct 10, 2026, 01:30 AM IST
ಅಲೀಂ ಪಾಷ | Kannada Prabha

ಸಾರಾಂಶ

ಗುಂಡ್ಲುಪೇಟೆ: ರಕ್ತ ಹೀನತೆ ಮುಕ್ತ ತಾಲೂಕಾಗಿಸಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್.ಅಲೀಂ ಪಾಷ ಕರೆ ನೀಡಿದರು

ಗುಂಡ್ಲುಪೇಟೆ: ರಕ್ತ ಹೀನತೆ ಮುಕ್ತ ತಾಲೂಕಾಗಿಸಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್.ಅಲೀಂ ಪಾಷ ಕರೆ ನೀಡಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಮೈಸೂರು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು (ಆರ್‌ಎಲ್‌ಎಚ್‌ಪಿ) ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಭಾಗವಹಿಸುವಿಕೆ ಪ್ರೋತ್ಸಾಹಿಸಲು ''''ಆಟದ ಹಕ್ಕು-ಸಮಾನ ಹಕ್ಕು''''''''ಘೋಷವಾಕ್ಯದಡಿ ಬಾಲ್ಯ ವಿವಾಹ ನಿಷೇಧ ವಿರುದ್ಧ ಬೃಹತ್ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಪೌಷ್ಟಿಕ ಆಹಾರ ಸೇವನೆಯಿಂದ ಮಾತ್ರ ರಕ್ತಹೀನತೆ ತಡೆಯಬಹುದು ಎಂದು ಹೇಳಿದರು.

ಆರ್‌ಎಲ್‌ಎಚ್‌ಪಿ ಸಂಸ್ಥೆ ಕಾರ್ಯಚಟುವಟಿಕೆ ಶ್ಲಾಘಿಸಿದ ಅವರು ರಕ್ತಹೀನತೆ ನಿವಾರಣೆ, ಋತುಚಕ್ರದ ಸ್ವಚ್ಛತೆ, ಕೈ ತೊಳೆಯುವ ಆರು ಹಂತಗಳ ಮಹತ್ವಗಳ ಬಗ್ಗೆ ಸಲಹೆ, ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ರುದ್ರವ್ವ ಮಾತನಾಡಿ ಮಕ್ಕಳಿಗೆ ಬದುಕುವ ಹಕ್ಕು, ಅಭಿವೃದ್ಧಿಯ ಹಕ್ಕು, ರಕ್ಷಣೆಯ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳಿವೆ ಎಂದು ತಿಳಿಸಿದರು.

ಚೈಲ್ಡ್‌ ಲೈನ್ ಸಂಯೋಜಕ ಸಿದ್ದರಾಜು ಮಾತನಾಡಿ ವಿಶ್ವ ಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆ,ಶಿಕ್ಷಣದ ಹಕ್ಕು ಕಾಯ್ದೆ,ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಮಕ್ಕಳ ಸ್ನೇಹಿ ಕಾನೂನುಗಳ ಬಗ್ಗೆ ತಿಳಿಸಿದರು.

ಆರ್‌ಎಲ್‌ಎಚ್‌ಪಿ ನಿರ್ದೇಶಕಿ ಸರಸ್ವತಿ ಮಾತನಾಡಿ ಆಡುವ ಹಕ್ಕು ಮಕ್ಕಳ ಸಮಾನ ಹಕ್ಕುಗಳಲ್ಲಿ ಒಂದಾಗಿದೆ. ಕಳೆದ ೪೨ ವರ್ಷಗಳಿಂದ ಸಂಸ್ಥೆಯು ಬಾಲ್ಯವಿವಾಹ, ಬಾಲ ಕಾರ್ಮಿಕ ಮತ್ತು ಮಕ್ಕಳ ಶೋಷಣೆ ತಡೆಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು. ಸಂಸ್ಥೆ ಹತ್ತು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಐದು ವರ್ಷಗಳಿಂದ ಕಿಶೋರಿಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಲೋಚಕಿ ಮೇಘಶ್ರೀ ಮಾತನಾಡಿ, ಹೆಣ್ಣುಮಕ್ಕಳು ಬಾಲ್ಯವನ್ನು ಸಂತೋಷದಿಂದ ಅನುಭವಿಸಬೇಕು, ಆಟಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣಾ ಘಟಕದ ಫೀಲ್ಡ್ ವರ್ಕರ್ ಸಿದ್ದಶೆಟ್ಟಿ, ಗೆಳತಿಯರ ಪ್ರಪಂಚ ಕಿಶೋರಿ ಒಕ್ಕೂಟದ ಅಧ್ಯಕ್ಷೆ ಸುಮಿತ್ರಾ ಹಾಗೂ ನೂರಾರು ಮಕ್ಕಳು ಭಾಗವಹಿಸಿದ್ದರು.

------------

೯ಜಿಪಿಟಿ೨

ಗುಂಡ್ಲುಪೇಟೆಯಲ್ಲಿ ಬಾಲ್ಯ ವಿವಾಹ ನಿಷೇಧ ವಿರುದ್ಧ ಬೃಹತ್ ಜಾಥಾ ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್.ಅಲೀಂ ಪಾಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂರು ದಿನ ಅದ್ಧೂರಿ ಚಾಮರಾಜನಗರ ದಸರಾ
ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಯತ್ನ: ಆರೋಪ