ಜೀವ ವೈವಿಧ್ಯತೆ ಕಾಪಾಡಲು ಕೈ ಜೋಡಿಸಿ : ಖಂಡ್ರೆ

KannadaprabhaNewsNetwork |  
Published : Dec 01, 2025, 02:00 AM IST
Eshwar Khandre

ಸಾರಾಂಶ

 ಅರಣ್ಯೀಕರ ಹೆಚ್ಚಳಕ್ಕೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಜೀವ ವೈವಿಧ್ಯತೆಯನ್ನು ಕಾಪಾಡಲು ಯುವ ಜನಾಂಗವನ್ನು ಪ್ರೇರೇಪಿಸಿ ಜಾಗೃತಿ ಮೂಡಿಸುವ ಪ್ರಯತ್ನದತ್ತ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣನ್ಯೂಸ್‌ನ ದಾಪುಗಾಲು ಶ್ಲಾಘನೀಯ ಎಂದು  ಖಂಡ್ರೆ ತಿಳಿಸಿದರು.

 ಬೀದರ್‌ :  ರಾಜ್ಯದಾದ್ಯಂತ ಅರಣ್ಯೀಕರ ಹೆಚ್ಚಳಕ್ಕೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಜೀವ ವೈವಿಧ್ಯತೆಯನ್ನು ಕಾಪಾಡಲು ಯುವ ಜನಾಂಗವನ್ನು ಪ್ರೇರೇಪಿಸಿ ಜಾಗೃತಿ ಮೂಡಿಸುವ ಪ್ರಯತ್ನದತ್ತ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣನ್ಯೂಸ್‌ನ ದಾಪುಗಾಲು ಶ್ಲಾಘನೀಯ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ತಿಳಿಸಿದರು.

ಅರಣ್ಯ ಇಲಾಖೆ, ಚಿತ್ರಕಲಾ ಪರಿಷತ್‌ ಸಹಯೋಗದಲ್ಲಿ ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣನ್ಯೂಸ್‌ ವತಿಯಿಂದ ಭಾನುವಾರ ನಗರದ ರಾಘವೇಂದ್ರ ಮಠದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಿಸಿ ಸಚಿವರು ಮಾತನಾಡಿದರು. ಇಂದು ನಾವು ಪರಿಸರ ಹಾಗೂ ಪ್ರಕೃತಿ ಉಳಿಯುವಿಗಾಗಿ ಪಣ ತೊಡಬೇಕಾಗಿದೆ. ಈಗಾಗಲೇ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು ಪರಿಸರ ಕುರಿತು ನಿಮ್ಮ ಕಳಕಳಿ ತೋರಿಸಿದ್ದೀರಿ. ಕನ್ನಡಪ್ರಭ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಪರಿಸರ ಹಾಗೂ ಅರಣ್ಯ ಸಂರಕ್ಷಣೆ ಕುರಿತು ಭಾಷಣ ಹಾಗೂ ನಿಬಂಧ ಸ್ಪರ್ಧೆಗಳನ್ನು ಆಯೋಜಿಸಲಿದ್ದಾರೆ, ಮಕ್ಕಳು ಸೋಲು ಗೆಲುವಿನ ಲೆಕ್ಕ ಹಾಕದೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿರುತ್ತದೆ ಎಂದರು.

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಶಿ ವಿಠ್ಠಲ ಪ್ರಥಮ, ಶ್ರೀಮಯಿ ಶ್ರೀಕಾಂತ ದ್ವಿತೀಯ ಹಾಗೂ ಮಹಾದೇವ ಬಾಬುರಾವ್‌ ತೃತೀಯ ಸ್ಥಾನ ಪಡೆದರು. ಈ ಮೂವರಿಗೆ ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್‌ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರ ಪರವಾಗಿ ಸೈಕಲ್‌ಗಳನ್ನು ಪುರಸ್ಕಾರವಾಗಿ ನೀಡಲಾಯಿತು.

ಇದಲ್ಲದೇ ಸಮಾಧಾನಕರ ಎರಡು ಪ್ರಶಸ್ತಿಗಳನ್ನು ಅಮೂಲ್ಯರೆಡ್ಡಿ ರಾಜರೆಡ್ಡಿ ಹಾಗೂ ರತ್ನಜ್ಯೋತಿ ರವೀಂದ್ರಕುಮಾರ ಅವರಿಗೆ ಪ್ರದಾನ ಮಾಡಲಾಯಿತು. ಚತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಪ್ರೌಢ ಶಾಲೆಯ 8, 9 ಮತ್ತು 10ನೇ ತರಗತಿಯ ಸುಮಾರು 600 ಮಕ್ಕಳು ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಹಿರಿಯ ಚಿತ್ರಕಲಾವಿದರಾದ ಬಿ.ಕೆ ಬಡಿಗೇರ, ಚಂದ್ರಶೇಖರ ತೂಗಾ ಹಾಗೂ ಜ್ಯೋತಿ ಭಂಡೆ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಕೇವಲ ಶೇ.21ರಷ್ಟು ಮಾತ್ರ ಅರಣ್ಯ

ರಾಜ್ಯದ ಭೌಗೌಳಿಕ ಪ್ರಕಾರ ಶೇ.33ರಷ್ಟು ಅರಣ್ಯ ಬೇಕು ಆದರೆ ನಮ್ಮ ರಾಜ್ಯದಲ್ಲಿ ಕೇವಲ ಶೇ.21ರಷ್ಟು ಮಾತ್ರ ಅರಣ್ಯ ಪ್ರದೇಶ ಇದೆ. ಹೀಗಾಗಿ ರಾಜ್ಯದಲ್ಲಿ ಅರಣ್ಯ ಬೆಳೆಸಬೇಕಾಗಿದೆ. ಮಕಕ್ಕಳು ತಮ್ಮ ತಮ್ಮ ಮನೆ ಹಾಗೂ ಜಮಿನುಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಬೆಳೆಸಬೇಕು ಎಂದು ಕರೆ ನೀಡಿದ ಅವರು, ವನ್ಯ ಜೀವಿಗಳು ಪರಿಸರ ಹಾಗೂ ಪ್ರಕೃತಿ ಸಮತೋಲನವಾಗಿಡುತ್ತವೆ. ಕೆಲವು ಕಡೆಗಳಲ್ಲಿ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ನಡೆಯುತ್ತಿದೆ. ಇದಕ್ಕೆ ಅರಣ್ಯ ಕ್ಷೇತ್ರ ಕಡಿಮೆ ಇರುವುದೇ ಕಾರಣವಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ