ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ನೆಲಮಾಕನಹಳ್ಳಿ ಗ್ರಾಪಂ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸಹಯೋಗದೊಂದಿಗೆ ನಡೆದ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ತಡೆಗಟ್ಟುವ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ಪೋಷಕರು ಮುಂದಾಗದೆ ಬಾಲ್ಯದಲ್ಲಿಯೇ ವಿವಾಹ ಮಾಡುತ್ತಿರುವುದು ವಿಷಾದನೀಯ. ಮೂಢನಂಬಿಕೆಯಿಂದಾಗಿ ಹೆಣ್ಣು ಭ್ರೂಣಹತ್ಯೆ ಮಾಡುವುದು ಅಪರಾಧ. ಇಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.ಮಹಿಳೆಯರು ತಮ್ಮ ಕುಟುಂಬಗಳಲ್ಲಿ ಪೌಷ್ಟಿಕ ಆಹಾರವನ್ನು ಪುರುಷರಷ್ಟೇ ಸಮಾನವಾಗಿ ಸೇವಿಸಬೇಕು. ಸಂಪ್ರದಾಯಗಳಿಗೆ ಒಳಗಾಗಿ ಕೊನೆಯಲ್ಲಿ ಊಟ ಮಾಡುವುದು, ಉಳಿದಿದ್ದನ್ನು ಮಾತ್ರ ತಿಂದು ಅಪೌಷ್ಟಿಕತೆಗೆ ನರಳಿ ಅನಾರೋಗ್ಯಕ್ಕೆ ಒಳಗಾಗಬಾರದು ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಬಾಲ ಗರ್ಭಿಣಿಯರು ಹೆಚ್ಚಾಗಿ ಹಲವು ಆರೋಗ್ಯ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಬಾಲ್ಯದಲ್ಲೇ ವಿವಾಹ ಮಾಡಿ ಭಾರದಿಂದ ಮುಕ್ತರಾದೆವೆಂದು ಪೋಷಕರು ಭಾವಿಸದೇ ಮಕ್ಕಳ ಭವಿಷ್ಯದ ಕಡೆಗೆ ಮುಖ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಆಡಳಿತಾಧಿಕಾರಿ ಕೆ.ಬಿ.ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಡಾ.ಅಶ್ವಥ್, ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ಅಧಿಕಾರಿ ನಂಜಮಣಿ, ಟಿಎಪಿಸಿಎಂಎಸ್ ಸೊಸೈಟಿ ಅಧ್ಯಕ್ಷ ಲಿಂಗರಾಜು, ನೆಲಮಾಕನಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರ, ರಾಜಸ್ವ ನಿರೀಕ್ಷಕ ಚೇತನ್, ಗ್ರಾಮ ಲೆಕ್ಕಿಗ ಚೈತ್ರ, ಪಿಡಿಒ ಖಾನ್ ಮಹಮ್ಮದ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸುಶೀಲ, ತಾಲೂಕು ಅಧ್ಯಕ್ಷೆ ಜಯಶೀಲ, ಕಾರ್ಯದರ್ಶಿ ಪ್ರೇಮ, ಮಹಾದೇವಮ್ಮ, ಪದ್ಮ, ಅಟೆಂಡರ್ ಮಹಾದೇವು ಹಾಗೂ ಇತರರು ಉಪಸ್ಥಿತರಿದ್ದರು.