ಬಳ್ಳಾರಿ: ಗಮಕಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಡೈರಿಗಳು, ಕ್ಯಾಸೆಟ್‌ಗಳು, ಹಸ್ತಪ್ರತಿಗಳು, ಇತರೆ ಸಾಹಿತ್ಯಿಕ ಬರಹಗಳನ್ನು ಸಮಗ್ರವಾಗಿ ಡಿಜಿಟಲೀಕರಣಗೊಳಿಸುವ ಕಾರ್ಯವಾಗಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಶಿಸಿದರು.
ದೊಡ್ಡನಗೌಡರು ಕನ್ನಡ ಸಾಹಿತ್ಯ, ಗಮಕ ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆ ಅಪಾರವಾಗಿದೆ. ಅವರ ಅಮೂಲ್ಯ ದಾಖಲೆಗಳನ್ನು ಸಂರಕ್ಷಿಸಿ ಡಿಜಿಟಲ್ ರೂಪದಲ್ಲಿ ಉಳಿಸುವ ಮೂಲಕ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು. ಈ ಮಹತ್ವದ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಲು ತಾವು ಸದಾ ಸಿದ್ಧರಾಗಿರುವುದಾಗಿ ಶ್ರೀರಾಮುಲು ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ಭಾರತದ ನೈಜ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳು ಇಂದಿಗೂ ಗ್ರಾಮೀಣ ಬದುಕಿನಲ್ಲಿ ಜೀವಂತವಾಗಿವೆ. ಹಳ್ಳಿಗಳಲ್ಲಿ ಸಂಸ್ಕೃತಿ, ಪರಂಪರೆ ಹಾಗೂ ಜೀವನ ಮೌಲ್ಯಗಳು ಉಳಿದು ಬೆಳೆದರೆ ಮಾತ್ರ ಭಾರತದ ಸಾಂಸ್ಕೃತಿಕ ವೈಭವವೂ ಅಷ್ಟೇ ಸದೃಢವಾಗಿ ಮುಂದುವರಿಯಲಿದೆ. ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸಂಸ್ಕೃತಿ ಮರೆಯಾಗದಂತೆ ಪ್ರತಿಯೊಬ್ಬರೂ ಕಾಳಜಿ ವಹಿಸುವ ಅಗತ್ಯವಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಉರವಕೊಂಡ ಗವಿಮಠ ಸಂಸ್ಥಾನದ ಜಗದ್ಗುರು ಡಾ.ಕರಿಬಸವರಾಜೇಂದ್ರ ಮಹಾಸ್ವಾಮಿಗಳು, ಉರವಕೊಂಡ ಮಠ ಸಂಸ್ಥಾನದ 6ನೇ ಜಗದ್ಗುರು ಶ್ರೀ ಚನ್ನಬಸವರಾಜೇಂದ್ರ
ಕಲೆ, ಸಾಹಿತ್ಯ, ಗಮಕ, ಸಂಸ್ಕೃತಿಯಿಂದ ಮಾತ್ರ ಭಾರತೀಯ ಸಂಸ್ಕೃತಿ ಉಳಿಯಲು ಸಾಧ್ಯವಾಗಿದ್ದು ಅಪರೂಪ ಎನ್ನುವಂತೆ ಬಳ್ಳಾರಿ ಜಿಲ್ಲೆಗೆ ಸಿಕ್ಕಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶೀಘ್ರವೇ ಜರುಗುವಂತಾಗಲಿ ಎಂದು