ಭಟ್ಕಳ: ಬಹುಮುಖ ಪ್ರತಿಭೆಯ ಜಾಲಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ಶ್ರೀಧರ ಶೇಟ್ ಶಿರಾಲಿ ಅವರನ್ನು ೨೦೨೫ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರು ಶಿಕ್ಷಕರಾಗಿ, ಕವಿ, ಲೇಖಕ, ಅಂಕಣಕಾರ, ಚಿತ್ರ ಕಲಾವಿದ, ವಾಗ್ಮಿ, ವ್ಯಂಗ್ಯಚಿತ್ರಕಾರರಾಗಿ ಅಲ್ಲದೇ ಕಾರ್ಯಕ್ರಮ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಡಿಎಸ್‌ಇಆರ್‌ಟಿಯಿಂದ ''''''''ಚೈತನ್ಯ ತರಣಿ'''''''' ಬೋಧನೋಪಕರಣಗಳ ತರಬೇತಿಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಬೀದರ್, ಬಳ್ಳಾರಿ, ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲೆಗಳ ಶಿಕ್ಷಕರಿಗೆ ಟಿ.ಎಲ್.ಎಂ. ತರಬೇತಿ ನೀಡಿದ್ದಾರೆ.
ಶಿಕ್ಷಣದಲ್ಲಿ ರಂಗಕಲೆ, ಚಿಣ್ಣರ ಮೇಳ, ಕಲಿಕಾ ಚೇತರಿಕೆ ಮತ್ತು ಕ್ರಿಯಾ ಸಂಶೋಧನೆ ತರಬೇತಿಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಇಂಗ್ಲಿಷ್ ವಿಷಯದ ಮತ್ತು ವಿಶ್ವಾಸ ಕಿರಣ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ, ಬ್ಲಾಕ್ ರಿಸೋರ್ಸ್ ಟೀಂನ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಶಿಕ್ಷಣ ಇಲಾಖೆಯ ಸಹಪಠ್ಯ ಚಟುವಟಿಕೆ ಸ್ಪರ್ಧೆ ಆಶುಭಾಷಣ ಸ್ಪರ್ಧೆಯಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದಿರುವ ಅವರನ್ನು ಭಟ್ಕಳದ ಅರ್ಬನ್ ಬ್ಯಾಂಕ್ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಯನ್ನು ನೀಡಿ ಗೌರವಿಸಿದ್ದನ್ನು ಸ್ಮರಿಸಬಹುದು. ಸಾಹಿತ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಇವರು ತಾಲೂಕಿನ ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶ್ರೀಧರ ಶೇಟ್ ಶಿರಾಲಿ