ತಳ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಜೋಶಿ ಕೊಡುಗೆ ಅಪಾರ

KannadaprabhaNewsNetwork |  
Published : Sep 25, 2025, 01:01 AM IST
ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ಹಡಪದ ಅಪ್ಪಣ್ಣ ಸಮುದಾಯದ ಸಭಾಭವನದ ಎದುರು ತಗಡಿನ ಶೆಡ್‌ ಕಾಮಗಾರಿಗೆ ಬಿಜೆಪಿ ಮಂಡಳದ ಅಧ್ಯಕ್ಷ ವಿಶ್ವನಾಥ ಹರವಿ ನೆರವೇರಿಸಿದರು. | Kannada Prabha

ಸಾರಾಂಶ

ಸಮುದಾಯಗಳು ಸಂಘಟನೆಯಾದಾಗ ಇಂತಹ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ. ಜತೆಗೆ ಸರ್ಕಾರದಿಂದ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಶಿಗ್ಗಾಂವಿ: ಸಮುದಾಯಗಳು ಸಂಘಟನೆಯಾಗುವ ಜತೆಗೆ ಸರ್ಕಾರಗಳಿಂದ ಬರುವ ಸೌಲಭ್ಯಗಳನ್ನು ಮತ್ತು ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ಮಂಡಳದ ಅಧ್ಯಕ್ಷ ವಿಶ್ವನಾಥ ಹರವಿ ಹೇಳಿದರು.

ತಾಲೂಕಿನ ಕುನ್ನೂರು ಗ್ರಾಮದಲ್ಲಿ ಹಡಪದ ಅಪ್ಪಣ್ಣ ಸಮುದಾಯದ ಸಭಾಭವನದ ಎದುರು ಸಂಸದ ಪ್ರಹ್ಲಾದ ಜೋಶಿ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಕೊಡಮಾಡಿದ ₹೫ ಲಕ್ಷ ಅನುದಾನದಲ್ಲಿ ಹಡಪದ ಸಮುದಾಯದ ಸಭಾಭವನದ ಎದುರು ಮುಂದುವರಿದ ತಗಡಿನ ಶೆಡ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೇಂದ್ರ ಸಚಿವರು, ಸಂಸದರಾದ ಪ್ರಹ್ಲಾದ ಜೋಶಿ ಅವರು ತಳಸಮುದಾಯಗಳ ಶ್ರೇಯೋಭಿವೃದ್ಧಿಗೆ ಬಹಳಷ್ಟು ಶ್ರಮಿಸುತ್ತಿದ್ದಾರೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಮೊದಲು ₹೧೦ ಲಕ್ಷಗಳನ್ನು ಸಭಾಭವನ ನಿರ್ಮಾಣಕ್ಕೆ ನೀಡಿದ್ದರು. ಸಭಾಭವನ ನಿರ್ಮಾಣವಾಗಿದ್ದು ಸಂಸದ ಪ್ರಹ್ಲಾದ್ ಜೋಶಿ ಅವರು ₹೫ ಲಕ್ಷಗಳನ್ನು ಹಡಪದ ಅಪ್ಪಣ್ಣನವರ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಈಗ ಆ ಕಾಮಗಾರಿಯ ಮುಂದುವರಿದ ಭಾಗವಾದ ತಗಡಿನ ಶಡ್ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ ಮತ್ತೆ ₹೫ ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದ್ದು ಸಣ್ಣ ಸಣ್ಣ ಸಮುದಾಯಗಳಿಗೆ ಜೋಶಿ ಅವರು ಅನುದಾನವನ್ನು ನೀಡುತ್ತಾ ಬಂದಿದ್ದಾರೆ. ಸಮುದಾಯಗಳು ಸಂಘಟನೆಯಾದಾಗ ಇಂತಹ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ. ಜತೆಗೆ ಸರ್ಕಾರದಿಂದ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಸೋಮಯ್ಯನವರ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಹಡಪದ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ, ಮುಖಂಡರಾದ ಗಂಗಪ್ಪ ಹುಲ್ಲೂರ, ಸುರೇಶಗೌಡ ಪಾಟೀಲ, ಮಲ್ಲೇಶಪ್ಪ ದೊಡ್ಡಮನಿ, ಬಸವರಾಜ ಬೂದಿಹಾಳ, ವಾಸಪ್ಪ ಬಡಿಗೇರ, ಶೇಖಪ್ಪ ಮಮದಾಪೂರ, ಮಾಬುಸಾಬ್ ಜಿಗಳೂರ, ಯಲ್ಲಪ್ಪ ನವಲೂರ, ಬಸನಗೌಡ ಪಾಟೀಲ, ಕೊಟೆಪ್ಪ ಛಲವಾದಿ, ಬಸಪ್ಪ ಬಾರ್ಕಿ, ರವಿ ಹೊರಟ್ಟಿ, ನೂರಸಾಬ್ ಒಂಟಿ, ಮೌನೇಶ ಬಡಿಗೇರ, ರಾಮಣ್ಣ ಕರಡಿ ಸೇರಿದಂತೆ ಹಲವರಿದ್ದರು.

PREV

Recommended Stories

2026ನೇ ವರ್ಷದ 20 ಸಾರ್ವತ್ರಿಕ ರಜೆಗಳ ಪಟ್ಟಿ ಪ್ರಕಟಿಸಿದ ಸರ್ಕಾರ
ಮಧುಮೇಹ ಎಂದರೆ ಏನು? ಯಾರಿಗೆ ಬರಬಹುದು ? ಲಕ್ಷಣ ಹಾಗೂ ಚಿಕಿತ್ಸೆ ಹೇಗೆ ?