ಫೋಟೋ ಇಲ್ಲದ ಪತ್ರಿಕೋದ್ಯಮ ಕಲ್ಪನೆ ಅಸಾಧ್ಯ

KannadaprabhaNewsNetwork |  
Published : Aug 22, 2025, 12:00 AM IST
21ಎಚ್ಎಸ್ಎನ್18 :  | Kannada Prabha

ಸಾರಾಂಶ

ಮಾಧ್ಯಮ ಕ್ಷೇತ್ರದಲ್ಲಿ ಛಾಯಾಗ್ರಾಹಕರ ಕಾರ್ಯಕ್ಕೆ ತನ್ನದೇಯಾದ ಮೌಲ್ಯವಿದೆ. ಇಡೀ ಸುದ್ದಿಯ ಸಾರಾಂಶವನ್ನು ಒಂದು ದೃಶ್ಯ ಹಾಗೂ ಛಾಯಾಚಿತ್ರ ಹೇಳುತ್ತದೆ. ಹಲವಾರು ಪ್ರಕರಣಗಳಲ್ಲಿ ಇದು ಸಾಬೀತಾಗಿದೆ ಎಂದರು. ತಾಂತ್ರಿಕ ಕ್ಷೇತ್ರದಲ್ಲಿ ಆದಂತಹ ಬದಲಾವಣೆಗಳಿಂದಾಗಿ ಛಾಯಾಗ್ರಾಹಕರಿಗೆ ನಾನಾ ಸಮಸ್ಯೆ ಎದುರಾಗಿದೆ. ಇದರಿಂದ ಆರ್ಥಿಕ ಭದ್ರತೆ ಇಲ್ಲವಾಗಿದ್ದು ಈ ನಡುವೆಯೂ ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಛಾಯಾಗ್ರಹಕರು ವೃತ್ತಿಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಒಂದು ದೃಶ್ಯ ಹಾಗೂ ಛಾಯಾಚಿತ್ರ ಸಾವಿರ ಪದಗಳಿಗೆ ಸಮಾನ ಹಾಗೂ ಫೋಟೋ, ವೀಡಿಯೋ ಇಲ್ಲದೆ ಪತ್ರಿಕೋದ್ಯಮ ಅಪೂರ್ಣ. ಅವುಗಳಿಲ್ಲದ ಪತ್ರಿಕೋದ್ಯಮವನ್ನು ಊಹಿಸಲೂ ಅಸಾಧ್ಯ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಕರ್ತರ ಸಂಘದಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಮುದ್ರಣ ಹಾಗೂ ದೃಶ್ಯ ಮಾಧ್ಯಮದ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದ ಆಶ್ರಯದಲ್ಲಿ ಎರಡನೇ ಬಾರಿಗೆ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಛಾಯಾಗ್ರಹಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಛಾಯಾಗ್ರಹಕರಿಗೆ ಸನ್ಮಾನವನ್ನು ಮಾಡಲಾಗಿದೆ ಎಂದರು.ಮಾಧ್ಯಮ ಕ್ಷೇತ್ರದಲ್ಲಿ ಛಾಯಾಗ್ರಾಹಕರ ಕಾರ್ಯಕ್ಕೆ ತನ್ನದೇಯಾದ ಮೌಲ್ಯವಿದೆ. ಇಡೀ ಸುದ್ದಿಯ ಸಾರಾಂಶವನ್ನು ಒಂದು ದೃಶ್ಯ ಹಾಗೂ ಛಾಯಾಚಿತ್ರ ಹೇಳುತ್ತದೆ. ಹಲವಾರು ಪ್ರಕರಣಗಳಲ್ಲಿ ಇದು ಸಾಬೀತಾಗಿದೆ ಎಂದರು. ತಾಂತ್ರಿಕ ಕ್ಷೇತ್ರದಲ್ಲಿ ಆದಂತಹ ಬದಲಾವಣೆಗಳಿಂದಾಗಿ ಛಾಯಾಗ್ರಾಹಕರಿಗೆ ನಾನಾ ಸಮಸ್ಯೆ ಎದುರಾಗಿದೆ. ಇದರಿಂದ ಆರ್ಥಿಕ ಭದ್ರತೆ ಇಲ್ಲವಾಗಿದ್ದು ಈ ನಡುವೆಯೂ ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಛಾಯಾಗ್ರಹಕರು ವೃತ್ತಿಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಪ್ರಜಾವಾಣಿ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಅತಿಕ್ ಉರ್ ರೆಹಮಾನ್ ಅವರು ಮಾತನಾಡಿ, ಛಾಯಾಗ್ರಹಕ ವೃತ್ತಿಯಲ್ಲಿ ಹಲವು ದಶಕಗಳ ಕಾಲ ಕರ್ತವ್ಯ ನಿರ್ವಹಿಸಿದ್ದು ನಾನಾ ಏಳು- ಬೀಳುಗಳನ್ನು ಕಂಡಿದ್ದೇನೆ. ಡಿಜಿಟಲ್ ತಂತ್ರಜ್ಞಾನ ಬಂದ ನಂತರ ಛಾಯಾಗ್ರಹಕರು ಕಷ್ಟದ ದಿನಗಳನ್ನು ಕಳೆಯುವಂತಾಗಿದೆ. ಹಲವು ದಶಕದಿಂದ ಕನಿಷ್ಠ ಸಂಬಳದಲ್ಲಿ ಕರ್ತವ್ಯ ನಿರ್ವಹಿಸಿದ್ದು ಇಂದಿಗೂ ನೌಕರಿ ಭದ್ರತೆ ಇಲ್ಲವಾಗಿದೆ. ಸಂಘದಿಂದ ಎರಡನೇ ವರ್ಷ ವಿಶ್ವ ಛಾಯಾಗ್ರಹಕರ ದಿನ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ದಿ ಹಿಂದೂ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಪ್ರಕಾಶ್ ಮಾತನಾಡಿ, ಛಾಯಾಗ್ರಾಹಕರಾಗಿ ವೃತ್ತಿಗಿಂತ ಸೇವೆ ಎಂದು ಪರಿಗಣಿಸಿ ಕರ್ತವ್ಯ ನಿರ್ವಹಿಸಿದ್ದೇವೆ. ೬೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು ಛಾಯಾಗ್ರಹಕನಾಗಿ ಪಾದಾರ್ಪಣೆ ಮಾಡಿದೆ. ಮ್ಯಾನುಯಲ್ ಛಾಯಾಗ್ರಹಣದಿಂದ ಹಿಡಿದು ಇಂದಿನ ಡಿಜಿಟಲ್ ಛಾಯಾಗ್ರಹಣದವರೆಗೂ ಕೆಲಸ ಮಾಡಿದ್ದು, ವೃತ್ತಿಯು ತೃಪ್ತಿ ನೀಡಿದೆ. ಆದರೆ ಇಂದಿಗೂ ಸಹ ಗೌರವಯುತ ವೇತನ ಇಲ್ಲ, ಆದರೂ ಇಷ್ಟು ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇವೆ. ಆನೆ ಸೆರೆ ಕಾರ್ಯಾಚರಣೆ ವೇಳೆ ಸೇರಿದಂತೆ ಅನೇಕ ಕಠಿಣ ಸವಾಲುಗಳ ನಡುವೆ ವೃತ್ತಿಯನ್ನು ಮಾಡಿಕೊಂಡು ಬಂದಿದ್ದು, ಪರ್ಯಾಯವಾಗಿ ಇತರೆ ವೃತ್ತಿ ಮಾಡಿದರೆ ಅಷ್ಟೇ ಈ ಕ್ಷೇತ್ರದಲ್ಲಿ ಉಳಿಯಲು ಸಾಧ್ಯವಾದಂತ ಪ್ರರಿಸ್ಥಿತಿ ಇದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಿಡಿದವರೆಲ್ಲ ಕ್ಯಾಮರಾಮೆನ್‌ಗಳಾಗಿದ್ದಾರೆ. ಆದ್ದರಿಂದ ಈ ಕ್ಷೇತ್ರದಲ್ಲಿ ಹೆಚ್ಚಿನ ಆರ್ಥಿಕ ಲಾಭ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಅಮೋಘ ವಾಹಿನಿ ಮುಖ್ಯಸ್ಥರಾದ ಕೆ.ಪಿ.ಎಸ್. ಪ್ರಮೋದ್ ಮಾತನಾಡಿ, ಯಾವುದೇ ಪತ್ರಿಕೆ, ದೃಶ್ಯ ಮಾಧ್ಯಮ ಇರಬಹುದು ಫೋಟೊ ವಿಡಿಯೋ ಇಲ್ಲದೆ ಪ್ರಸಾರ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಸನಾಂಬೆ ದೇವಾಲಯ ತೆರೆದ ವೇಳೆ ಡಿವೈಎಸ್ಪಿ ನಮ್ಮ ಛಾಯಾಗ್ರಹಕ ಮೇಲೆ ಹಲ್ಲೆ ಮಾಡಿದ ವೇಳೆ ನಮ್ಮ ಪತ್ರಕರ್ತರ ಸಂಘದ ಎಲ್ಲರೂ ಒಗ್ಗಟ್ಟಾಗಿ ನಿಂತಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಡಿಡಿ-೧ ಮತ್ತು ಎಚ್.ಸಿ.ಎನ್. ಚಾನಲ್ ವರದಿಗಾರ ಜ್ಞಾನೇಶ್ ಮಾತನಾಡಿ, ಶೂಟ್ ಮಾಡುವ ವೇಳೆ ನಡೆದ ಅಹಿತಕರ ಘಟನೆ ಬಗ್ಗೆ ತಿಳಿಸಿದರು. ಈ ವೃತ್ತಿಯಲ್ಲಿ ಜೀವನ ತಿಳಿಸಿದೆ. ಒಂದು ಕೆಲಸದಲ್ಲಿ ಶ್ರದ್ಧೆ ಎಂಬುದು ಇದ್ದರೇ ಯಶಸ್ವಿಗಳಿಸಬಹುದು ಎಂದರು.

ವಿಜಯಕರ್ನಾಟಕ ವರದಿಗಾರ ಜಿ. ಪ್ರಕಾಶ್, ಭೀಮ ವಿಜಯ ಪತ್ರಿಕೆ ಸಂಪಾದಕ ನಾಗರಾಜ್ ಹೆತ್ತೂರ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಉದಯಕುಮಾರ್, ಅಮೋಘವಾಣಿ ಸಂಪಾದಕರಾದ ರಂಗಸ್ವಾಮಿ ಸಂಘದ ಮಾಜಿ ಅಧ್ಯಕ್ಷರಾದ ಬಾಳ್ಳುಗೋಪಾಲ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್‌. ಮಂಜುನಾಥ್ ಮಾತನಾಡಿ, ಪೋಟೊ ಎಂಬುದು ನೆನಪು ಮರುಕಳಿಸುತ್ತದೆ. ಮುಸುಕು ಹಾಕಿಕೊಂಡು ಹಿಂದೆ ಫೋಟೊ ತೆಗೆಯಬೇಕಾಗಿತ್ತು. ಅಂದಿನ ಯುಗದಿಂದ ಇಂದಿನ ಮೊಬೈಲ್ ಕ್ಯಾಮರಾ ಹಾಗೂ ಡ್ರೋನ್‌ವರೆಗೂ ಫೋಟೊಗ್ರಾಫರ್ ಬಂದಿದ್ದಾರೆ. ಪೋಟೋಗ್ರಫಿ ಮಾಧ್ಯಮಕ್ಕೆ ಮಾತ್ರ ಸೀಮಿತವಾಗಿಲ್ಲ. ಹೊಸ ಹೊಸ ಆವಿಷ್ಕಾರಗಳು ಅಡ್ವಾನ್ಸ್ ಆಗಿ ಹೋಗುತ್ತಿದೆ. ಫೋಟೊ ಗ್ರಫಿಯಲ್ಲಿ ಶ್ರಮವಿದೆ ಎಂದರು.

ಸಂಘದ ಉಪಾಧ್ಯಕ್ಷ ಹರೀಶ್ ಮಾತನಾಡಿ, ದೃಶ್ಯ ಮಾಧ್ಯಮದಲ್ಲಿ ವಿಡಿಯೋಕ್ಕೆ ತನ್ನದೆಯಾದ ಮಹತ್ವವಿದೆ. ವಿಡಿಯೋ ಆಧರಿಸಿಯೇ ಸುದ್ದಿ ಬರೆಯಬೇಕು. ಚಾಲೆಂಜ್ ಆಗಿ ಕೆಲಸವನ್ನು ಛಾಯಾಗ್ರಹಕರು ನಿರ್ವಹಿಸಬೇಕು ಎಂದು ಹೇಳಿದರು.

ಇದೇ ವೇದಿಕೆಯಲ್ಲಿ ಸುವರ್ಣ ಟಿವಿ ಛಾಯಾಗ್ರಾಹಕರಾದ ಶರತ್, ಟಿವಿ9 ಮಹೇಶ್, ಪಬ್ಲಿಕ್ ಟಿವಿ ನಾಗರಾಜ್, ನ್ಯೂಸ್ ಫಸ್ಟ್ ಪ್ರವೀಣ್, ಟಿವಿ5 ಕಿಶೋರ್, ವಿವಿಸಿ ಸುಧೀರ್ ಜೈನ್, ಅಮೋಘ ವಾಹಿನಿಯ ಚಂದನ್, ಎಚ್‌ಸಿಎನ್ ನವೀನ್, ಏಎನ್‌ಐ ಮಧು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಟಿ.ಮೋಹನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಪಿಎಸಿಬಿ ಸಂತೋಷ್, ಸಂಘದ ಮಾಜಿ ಅಧ್ಯಕ್ಷ ಎಸ್.ಆರ್. ಪ್ರಸನ್ನಕುಮಾರ್ ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಿರಿಯ ಕಿರಿಯ ಪತ್ರಕರ್ತರು ಹಾಜರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ