ಶಿಕಾರಿಪುರ: ಸಾಮಾಜಿಕ ಜಾಲತಾಣದ ವಿಪರೀತ ಪ್ರಭಾವದಿಂದ ಪತ್ರಿಕಾ ಕ್ಷೇತ್ರ ಸಂಕೀರ್ಣ ಸ್ಥಿತಿಯಲ್ಲಿದ್ದು, ಸವಾಲಿನ ಸಂದಿಗ್ಧ ಸ್ಥಿತಿಯಲ್ಲಿ ಪರ್ತಕರ್ತರು ಸಮಾಜದ ಬಗ್ಗೆ ಪ್ರಾಮಾಣಿಕ ಕಳಕಳಿ ಹೊಂದಿದಲ್ಲಿ ಮಾತ್ರ ವೃತ್ತಿಗೆ ಗೌರವ ದೊರೆಯಲಿದೆ ಎಂದು ಪತ್ರಕರ್ತ ವೈ.ಗ. ಜಗದೀಶ್ ತಿಳಿಸಿದರು.
ಶಿಕಾರಿಪುರ: ಸಾಮಾಜಿಕ ಜಾಲತಾಣದ ವಿಪರೀತ ಪ್ರಭಾವದಿಂದ ಪತ್ರಿಕಾ ಕ್ಷೇತ್ರ ಸಂಕೀರ್ಣ ಸ್ಥಿತಿಯಲ್ಲಿದ್ದು, ಸವಾಲಿನ ಸಂದಿಗ್ಧ ಸ್ಥಿತಿಯಲ್ಲಿ ಪರ್ತಕರ್ತರು ಸಮಾಜದ ಬಗ್ಗೆ ಪ್ರಾಮಾಣಿಕ ಕಳಕಳಿ ಹೊಂದಿದಲ್ಲಿ ಮಾತ್ರ ವೃತ್ತಿಗೆ ಗೌರವ ದೊರೆಯಲಿದೆ ಎಂದು ಪತ್ರಕರ್ತ ವೈ.ಗ. ಜಗದೀಶ್ ತಿಳಿಸಿದರು.ಸೋಮವಾರ ಸಂಜೆ ಪಟ್ಟಣದ ಸುದ್ದಿಮನೆಯಲ್ಲಿ ರಾಜ್ಯ ಕಾರ್ಯನಿರತ ಪರ್ತಕರ್ತರ ಸಂಘ ತಾ.ಘಟಕ ಹಾಗೂ ಪ್ರೆಸ್ ಟ್ರಸ್ಟ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿನ ನ್ಯೂನತೆಯನ್ನು ತಿದ್ದಲು ಸುದ್ದಿ ಮಾಧ್ಯಮ ಪ್ರಬಲ ಅಸ್ತ್ರವಾಗಿದ್ದು, ಮಸಿ ಮೂಲಕ ಮಳೆ ಜೋಡಿಸಿ ಮುದ್ರಿಸಬೇಕಾದ ಪತ್ರಿಕೆ ಇಂದು ಮೊಬೈಲ್ ಮೂಲಕ ಕಳುಹಿಸುವ ಅತ್ಯಂತ ಸುಲಭ ಸ್ಥಿತಿಗೆ ತಲುಪಿದೆ ಎಂದ ಅವರು ಸಮಾಜದ ಬಗ್ಗೆ ಕಳಕಳಿ ಇಲ್ಲದ ಪರ್ತಕರ್ತರ ವೃತ್ತಿಗೆ ಜನಮನ್ನಣೆ ದೊರೆಯಲು ಸಾಧ್ಯವಿಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಡಿ.ವಿ ಗುಂಡಪ್ಪ ಮತ್ತಿತರ ಹೋರಾಟಗಾರರು ಪತ್ರಿಕೆಯನ್ನು ಪೂರಕವಾಗಿ ಬಳಸಿಕೊಂಡು ಪತ್ರಿಕಾ ಕ್ಷೇತ್ರದ ಮೌಲ್ಯ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.ಪರ್ತಕರ್ತರು ವೃತ್ತಿಯಲ್ಲಿ ಹೊಸ ಹೊಸ ಸವಾಲನ್ನು ಎದುರಿಸಬೇಕಾಗಿದ್ದು, ಸುದ್ದಿ ಜನಪರವಾಗಿದ್ದಲ್ಲಿ ಮಾತ್ರ ಜನತೆ ಒಪ್ಪಿಕೊಳ್ಳಲಿದ್ದಾರೆ. ತಪ್ಪಿದಲ್ಲಿ ನೀಟ್ ಹೋರಾಟವನ್ನು ಸಮಾಜಕ್ಕೆ ತಲುಪಿಸುವಲ್ಲಿ ಮಾಧ್ಯಮ ಕ್ಷೇತ್ರದ ನಿರ್ಲಕ್ಷ್ಯದಿಂದ ಸಾಮಾಜಿಕ ಜಾಲತಾಣದ ಮೂಲಕ ಹೋರಾಟ ತಾರ್ಕಿಕ ಅಂತ್ಯ ತಲುಪಿರುವುದು ಪತ್ರಿಕೋದ್ಯಮಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ತಿಳಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ರವಿಕುಮಾರ್ ಟೆಲೆಕ್ಸ್ ಮಾತನಾಡಿ, ಸಮಾಜದಲ್ಲಿನ ನೋವು ದುಃಖವನ್ನು ವೈಯಕ್ತಿಕ ಎಂದು ಭಾವಿಸುವವನು ಮಾತ್ರ ಪರ್ತಕರ್ತನಾಗಿದ್ದು ಪತ್ರಿಕೆ ಪತ್ರಕರ್ತ ಸದಾಕಾಲ ಪ್ರತಿಪಕ್ಷದವಾಗಿರುತ್ತಾರೆ.ಸರ್ಕಾರ ಮಾಧ್ಯಮ ಕ್ಷೇತ್ರ ಕಪಿಮುಷ್ಟಿಯಲ್ಲಿರಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದದಿಂದ ಕ್ರಾಂತಿಕಾರಕ ಬದಲಾವಣೆಯಾಗುತ್ತಿದೆ ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಜಿಲ್ಲಾ ಸಂಘದ ಉಪಾಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ ಮಾತನಾಡಿದರು. ತಾಲೂಕು ಘಟಕದ ಅಧ್ಯಕ್ಷ ನವೀನ್ ಕುಮಾರ್ ಅಧ್ಯಕ್ಷತೆ ವಹಿಸಿ ಗ್ರಾಮೀಣ ಪ್ರದೇಶದ ಪರ್ತಕರ್ತರ ದ್ವನಿ ಆಡಳಿತ ಯಂತ್ರಕ್ಕೆ ತಲುಪುವುದು ಹೆಚ್ಚು ಕ್ಲಿಷ್ಟಕರವಾಗಿದ್ದು ಈ ದಿಸೆಯಲ್ಲಿ ರಾಜ್ಯ ಮಟ್ಟದಲ್ಲಿ ಪತ್ರಿಕೆಗಳು ಕೇಂದ್ರ ಆಡಳಿತ ವ್ಯವಸ್ಥೆ ದಕ್ಷಿಣ ಭಾರತಕ್ಕೆ ತಲುಪಿಸುವ ನಿಟ್ಟಿನಲ್ಲಿ ಸಂಸತ್ ಭವನ, ಸರ್ವೋಚ್ಚ ನ್ಯಾಯಾಲಯದ ಪೀಠ ರಾಜ್ಯದಲ್ಲಿ ಸ್ಥಾಪನೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.ವೈ.ಗ ಜಗದೀಶ್ ರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ವೈದ್ಯನಾಥ್, ಪ್ರ.ಕಾ ಹಾಲಸ್ವಾಮಿ,ದೀಪಕ್ ಸಾಗರ್, ಗಾ.ರಾ ಶ್ರೀನಿವಾಸ್, ನಿರ್ದೇಶಕ ರಾಜಾರಾವ್ ಜಾಧವ್, ರಾಜು ಬಿ.ಎಲ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಕೋಟೇಶ್ವರ ತಾ.ಸಂಘದ ಸಂಸ್ಥಾಪಕ ಅಧ್ಯಕ್ಷ ವೇಣುಗೋಪಾಲ್ ಸಹಿತ ಸಂಘದ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.ಫೋಟೋ ಕಾಪ್ಟನ್--
ಶಿಕಾರಿಪುರದಲ್ಲಿ ಸೋಮವಾರ ಸಂಜೆ ನಡೆದ ಪತ್ರಿಕಾ ದಿನಾಚರಣೆಯನ್ನು ಪತ್ರಕರ್ತ ವೈ.ಗ. ಜಗದೀಶ್ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.