ಕಾಡಾನೆ ದಾಳಿ । ಬೈಕ್ ಪುಡಿ ಪುಡಿ
ಕೆಸದ ನಿಮಿತ್ತ ಹೊರ ಹೋಗಿ ಸ್ವಗ್ರಾಮಕ್ಕೆ ಬೈಕ್‌ನಲ್ಲಿ ತೆರಳುವಾಗ ಕಾಡಾನೆಯೊಂದು ದಿಢೀರನೇ ಎದುರಿಗೆ ಬಂದು ದಾಳಿ ಮಾಡಲು ಮುಂದಾದಾಗ ಪತ್ರಕರ್ತ ಪರಮೇಶ್ವರಪ್ಪ 10 ಅಡಿಗಳಷ್ಟು ದೂರದಲ್ಲಿದ್ದ ಪೊದೆಯೊಳಗೆ ನೆಗೆದು ತಮ್ಮ ಜೀವ ಉಳಿಸಿಕೊಂಡಿದ್ದು ಎದುರಿಗೆ ಸಿಕ್ಕ ಬೈಕ್‌ನ್ನು ಆನೆ ಎತ್ತಿ ನೆಲಕ್ಕೆ ಬಡಿದು ಪುಡಿಮಾಡಿರುವ ಘಟನೆ ನಡೆದಿದೆ.
ಲಿಂಗದಹಳ್ಳಿ ಹೋಬಳಿ ಪತ್ರಕರ್ತ ಎನ್.ಎಸ್. ಪರಮೇಶ್ವರಪ್ಪ ಶುಕ್ರವಾರದಂದು ಪತ್ರಿಕೆಗೆ ಸುದ್ಧಿ ಕಳುಹಿಸಿದ ನಂತರ ತಮ್ಮ ಸ್ವಗ್ರಾಮ ಜಯಪುರ ಗ್ರಾಮಕ್ಕೆ ವಾಪಸ್ಸು ಬೈಕ್‌ನಲ್ಲಿ ಬರುವಾಗ ನಂದಿಬಟ್ಟಲು ಗ್ರಾಮದ ರಸ್ತೆಯಲ್ಲಿದ್ದ ಭಾರಿ ಗಾತ್ರದ ಕಾಡಾನೆ ದಿಢೀರನೇ ಎದುರಿಗೆ ಬಂದಿದೆ. ಪರಮೇಶ್ವರಪ್ಪನವರ ಮೇಲೆ ದಾಳಿ ಮಾಡಲು ಕಾಡಾನೆ ದಾವಿಸಿದ್ದನ್ನು ಗಮನಿಸಿದ ಪರಮೇಶ್ವರಪ್ಪ 10 ಅಡಿಗಳಷ್ಟು ದೂರದಲ್ಲಿದ್ದ ಪೊದೆಗೆ ನೆಗೆದಿದ್ದಾರೆ. ಆದರೆ ಗೀಳಿಡುತ್ತಾ ಅಟ್ಟಿಸಿಕೊಂಡು ಬಂದ ಕಾಡಾನೆ ಎದುರಿಗೆ ಸಿಕ್ಕ ಬೈಕ್‌ನ್ನು ಧ್ವಂಸ ಮಾಡಿದೆ.ನಂತರವೂ ಸುತ್ತಲೂ ಗಮನಿಸಿದ ಆನೆ ಮುಳ್ಳಿನ ಪೊದೆಯೊಳಗೆ ಅವಿತು ಕುಳಿತಿದ್ದವರನ್ನು ಗಮನಿಸದೇ ಮುಂದಕ್ಕೆ ತೆರಳಿದೆ. ತನ್ನ ಪ್ರಾಣ ಹೋಯಿತೆಂಬ ಭಯದಲ್ಲಿ ಕುಳಿತಿದ್ದ ಪರಮೇಶ್ವರಪ್ಪ ಘಟನೆ ನಡೆದ ಐದಾರು ನಿಮಿಷಗಳ ನಂತರ ಸುಧಾರಿಸಿಕೊಂಡು, ಧೈರ್ಯ ಮಾಡಿ ಮುಳ್ಳಿನ ಪೊದೆಯಿಂದ ಹೊರ ಬಂದು ನೋಡಿದಾಗ ಆನೆ ದೂರದಲ್ಲಿ ನಡೆದು ಹೋಗುತ್ತಿದ್ದನ್ನು ನೋಡಿ ಸ್ವಲ್ಪ ಹೊತ್ತು ಸ್ಥಳದಲ್ಲಿದ್ದು ಆನಂತರ ಪೊದೆಯಿಂದ ಎದ್ದು ರಸ್ತೆಗೆ ಬಂದಿದ್ದಾರೆ.
ಪತ್ರಕರ್ತ ಪರಮೇಶ್ವರಪ್ಪನಮವ ವಿಕ್ಟರ್ ಬೈಕ್ ಕಾಡಾನೆ ದಾಳಿದೆ ನುಜ್ಜು ಗುಜ್ಜಾಗಿದ್ದು ಈ ಸಂಬಂಧ ಲಿಂಗದಹಳ್ಳಿ ಆರಕ್ಷಕ ಠಾಣೆಗೆ ದೂರು ನೀಡಲಾಗಿದೆ.
18ಕೆಟಿಆರ್.ಕೆ.4.
18ಕೆಟಿಆರ್.ಕೆ.5ಃ ಕಾಡಾನೆ ಧಾಳಿಯಿಂದ ವಿಕ್ಟರ್‌ನ್ನು ಬೈಕ್ .ನ ಮಾಸ್ಕ್ ಜಖಂ ಆಗಿದೆ.