ಚಿತ್ರದುರ್ಗ ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಗಮನ ಸೆಳೆದಿದ್ದ ಚಿತ್ರದುರ್ಗದ ಪ್ರತಿಷ್ಠಿತ ಎಸ್ಆರ್ ಎಸ್ ಪಿಯು ಕಾಲೇಜು ನೀಟ್ ಪರೀಕ್ಷೆಯಲ್ಲಿಯೂ ತನ್ನ ನಾಗಾಲೋಟ ಮುಂದುವರಿಸಿದೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ರ್‍ಯಾಂಕ್‌ ಪಡೆದು ಕಾಲೇಜು ದಾಖಲೆ

ಕನ್ನಡಪ್ರಭವಾರ್ತೆ, ಚಿತ್ರದುರ್ಗ ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಗಮನ ಸೆಳೆದಿದ್ದ ಚಿತ್ರದುರ್ಗದ ಪ್ರತಿಷ್ಠಿತ ಎಸ್ಆರ್ ಎಸ್ ಪಿಯು ಕಾಲೇಜು ನೀಟ್ ಪರೀಕ್ಷೆಯಲ್ಲಿಯೂ ತನ್ನ ನಾಗಾಲೋಟ ಮುಂದುವರಿಸಿದೆ. 2026ರ ನೀಟ್‌ ಫಲಿತಾಂಶ ಪ್ರಕಟಗೊಂಡಿದ್ದು ದೇಶದ ಒಟ್ಟು ಇಪ್ಪತ್ತೆರಡು ಲಕ್ಷದ ಎಪ್ಪತೊಂಬತ್ತು ಸಾವಿರ ವಿದ್ಯಾರ್ಥಿಗಳಲ್ಲಿ ಚಿತ್ರದುರ್ಗ ನಗರದ ಎಸ್ಆರ್ ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ 75ನೇ ರ್ಯಾಂಕ್‌ ಪಡೆದುಕೊಳ್ಳುವುದರ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಸುದರ್ಶನ್‌ ಕೆ.ಎಂ 720 ಕ್ಕೆ 680 ಅಂಕಗಳನ್ನು ಪಡೆದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇತಿಹಾಸ ನಿರ್ಮಿಸಿದ್ದಾನೆ. ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಬಳ್ಳಾರಿ, ತುಮಕೂರು ಮುಂತಾದ ಜಿಲ್ಲೆಗಳ ಫಲಿತಾಂಶಕ್ಕಿಂತ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಅತ್ಯುತ್ತಮ ರ್‍ಯಾಂಕ್‌ ದಾಖಲಿಸಿ ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ನಂತರ ಸ್ಥಾನದಲ್ಲಿ ಕಾಲೇಜಿನ ವಿದ್ಯಾರ್ಥಿನಿ ಮೇಘನ ವೈ.ಎಂ 609, ಗಂಗೋತ್ರಿ ಕೆ 562, ಅಂಕಿತಾ ಪಿ.ಎನ್‌ 557, ಆಕಾಶ್‌ ಹೆಚ್.ಆರ್‌ 545, ನಮಿತಾ ರಾಜ್‌ 535, ನೇತ್ರ ಡಿ. 531, ಸಂದೇಶ್‌ ಆರ್‌, 523 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ ಇನ್ನುಳಿದ 63 ವಿದ್ಯಾರ್ಥಿಗಳು 515 ಕ್ಕಿಂತ ಅಧಿಕ ಅಂಕಗಳೊಂದಿಗೆ ಹಾಗೂ ಶೇ 93 ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಎಂಬಿಬಿಎಸ್‌ ಸೀಟುಗಳನ್ನು ಪಡೆದುಕೊಳ್ಳಲು ಅರ್ಹತೆ ಗಳಿಸಿದ್ದಾರೆ. ಇವರೆಲ್ಲರೂ ರೆಗ್ಯೂಲರ್‌ ಬ್ಯಾಚಿನ ವಿದ್ಯಾರ್ಥಿಗಳಾಗಿದ್ದು ಏಮ್ಸ್ ಹಾಗೂ ಇತರೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ವಿಶೇಷವಾಗಿದೆ.ರಾಷ್ಟ್ರ ಮಟ್ಟದ ರ್ಯಾಂಕ್‌ ಪಡೆದು ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ---------------------ಪೋಟೋಗಳು ಕ್ರಮವಾಗಿ ಬಳಸಿಕೊಳ್ಳಿ.ಸುದರ್ಶನ್ ಕೆಎಂ, ಮೇಘನ ವೈಎಂ, ಗಂಗೋತ್ರಿ ಕೆ, ಅಂಕಿತಾ ಪಿ.ಎನ್‌, ಆಕಾಶ್‌ ಹೆಚ್.ಆರ್‌, ನಮಿತಾ ರಾಜ್‌ , ನೇತ್ರ ಡಿ , ಸಂದೇಶ್‌ ಆರ್‌

------------