ಕನ್ನಡಪ್ರಭ ವಾರ್ತೆ ಶಹಾಪುರ
ನಗರದ ಮಾತೃಛಾಯ ಶಾಲೆಯ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ನಡೆದ ತೀವ್ರ ಹೃದಯಘಾತದಿಂದ ನಿಧನ ಹೊಂದಿದ ಹಿರಿಯ ಪತ್ರಕರ್ತ ವೆಂಕಟೇಶ ಮಾನು ಹಾಗೂ ಇತ್ತೀಚೆಗೆ ನಿಧನರಾದ ಪತ್ರಕರ್ತ ಶಿವಶರಣ ಕಟ್ಟಿಮನಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಅವರು ಮಾತನಾಡಿದರು.
ಬಹುಮುಖ ಪ್ರತಿಭೆಯ ಗಟ್ಟಿ ಬರಹಗಾರರಾಗಿದ್ದ ವೆಂಕಟೇಶ ಮಾನು ಅವರ ನಿಧನದಿಂದ ಸಗರನಾಡಿನ ಸಾಹಿತ್ಯ, ಸಾಂಸ್ಕೃತಿಕ ಲೋಕ ಮತ್ತು ಪತ್ರಿಕಾ ರಂಗ ಬಡವಾಗಿದೆ. ಚಿಂತನಾಶೀಲ ಬರಹಗಳಿಂದ ನಾಡಿನ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಅವರೊಂದಿಗಿನ ಒಡನಾಟದ ಅನುಭವಗಳನ್ನು ಹಂಚಿಕೊಂಡರು.ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಮುದನೂರ ಮಾತನಾಡಿ, ಸೂಕ್ಷ್ಮ ಸಂವೇದನೆಯ ಹಿರಿಯ ಪತ್ರಕರ್ತ ವೆಂಕಟೇಶ ಮಾನು ಅವರು ನಾಡಿನ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದ ಅವರು ಪತ್ರಿಕಾ ಕ್ಷೇತ್ರಕ್ಕೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದರು.
ಸಂಶೋಧಕ ಡಿ.ಎನ್. ಅಕ್ಕಿ, ಪತ್ರಿಕಾ ಹಾಗೂ ಸಾಹಿತ್ಯ ಚೇತನ ವೆಂಕಟೇಶ ಮಾನು ಅವರ ಆತ್ಮಕ್ಕೆ ಚಿರಶಾಂತಿ ಕೋರುವೆ ಎಂದು ತಿಳಿಸಿದ್ದಾರೆ.
ಪತ್ರಕರ್ತರಾದ ಪ್ರಹ್ಲಾದ ತಿಳುಗೊಳ, ಈರಣ್ಣ ಮೌರ್ಯ, ವಿಶಾಲ ಸಿಂಧೆ, ಮಂಜುನಾಥ ಸಗರ, ಮಲ್ಲಿಕಾರ್ಜುನ, ಬಸವರಾಜ ಕರೆಗಾರ, ಮಾತೃಛಾಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ತಿಪ್ಪಣ್ಣ ಕ್ಯಾತನಾಳ, ಅಶೋಕ ಘನತೆ, ತಿಪ್ಪಣ ಇತರರಿದ್ದರು.