ಪತ್ರಕರ್ತರು ಹಾಗೂ ಬರಹಗಾರರಿಗೆ ಅತ್ಯದ್ಭುತವಾದ ದಿವ್ಯಶಕ್ತಿಯಿದೆ-ಮಾಲತೇಶ

KannadaprabhaNewsNetwork |  
Published : Sep 30, 2025, 12:01 AM IST
ಫೋಟೊ ಶೀರ್ಷಿಕೆ: 28ಆರ್‌ಎನ್‌ಆರ್3ರಾಣಿಬೆನ್ನೂರು ನಗರದ ಪ್ರವಾಸಿ ಮಂದಿರದಲ್ಲಿ ರೈತ, ಕನ್ನಡಪರ ಹಾಗೂ ಮಹಿಳಾ ಸಂಘಟನೆಗಳ ವತಿಯಿಂದ ಕರ್ನಾಟಕ ಸರ್ಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಮಾಲತೇಶ ಅಂಗೂರ ಅವರಿಗೆ ಸನ್ಮಾನ ಮಾಡಲಾಯಿತು.  | Kannada Prabha

ಸಾರಾಂಶ

ಸಮಾಜದಲ್ಲಿರುವ ದುರ್ಬಲರು, ನಿರ್ಗತಿಕರು, ಅಸಹಾಯಕರು ಸೇರಿದಂತೆ ಶ್ರೀಸಾಮಾನ್ಯರ ಅಹವಾಲುಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿ ಕೊಡುವ ಗುರುತರವಾದ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಕರ್ನಾಟಕ ಸರ್ಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಮಾಲತೇಶ ಅಂಗೂರ ಹೇಳಿದರು.

ರಾಣಿಬೆನ್ನೂರು: ಸಮಾಜದಲ್ಲಿರುವ ದುರ್ಬಲರು, ನಿರ್ಗತಿಕರು, ಅಸಹಾಯಕರು ಸೇರಿದಂತೆ ಶ್ರೀಸಾಮಾನ್ಯರ ಅಹವಾಲುಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿ ಕೊಡುವ ಗುರುತರವಾದ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಕರ್ನಾಟಕ ಸರ್ಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಮಾಲತೇಶ ಅಂಗೂರ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ವಿವಿಧ ರೈತ, ಕನ್ನಡಪರ ಹಾಗೂ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಅಭಿನಂದನಾ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪತ್ರಕರ್ತರಿಗೆ ಹಾಗೂ ಬರಹಗಾರರಿಗೆ ಅತ್ಯದ್ಭುತವಾದ ದಿವ್ಯಶಕ್ತಿಯಿದೆ. ಅಂತಹ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಪತ್ರಕರ್ತರಾದವರು ಮಾಡಬೇಕು. ಇದರಿಂದ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ. ಸರ್ಕಾರವು ನೀಡುವ ಪ್ರಶಸ್ತಿಗಿಂತ ಆತ್ಮಪೂರ್ವಕವಾಗಿ ಹೃದಯಪೂರ್ವಕವಾಗಿ ಜನಸಾಮಾನ್ಯರು, ಸಂಘಟನೆಗಳು ನೀಡುವ ಪ್ರಶಸ್ತಿ ಅಭಿನಂದನೆ, ಸನ್ಮಾನಗಳು ಬಹು ದೊಡ್ಡದಾಗಿ ಜನಮಾನಸದಲ್ಲಿ ಉಳಿಯಲಿವೆ ಎಂದರು.ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಮಾಲತೇಶ ಅಂಗೂರವರು ಕಳೆದ ನಾಲ್ಕು ದಶಕಗಳಿಂದ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೃತ್ತಿ ಬದುಕಿನಲ್ಲಿ ಅನೇಕ ಏಳು ಬೀಳುಗಳನ್ನು ಕಾಣುತ್ತಾ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಗಳಲ್ಲಿಯೂ ಸಹ ಅವರ ಛಾಯಾಚಿತ್ರ ಪ್ರದರ್ಶನಗಳು, ಸಾಹಿತ್ಯಕ ಕೃತಿಗಳು ಪರಿಚಿತವಾಗಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ರಾಜು ಶಿರೂರ, ಮಹೇಶ ಕೆಂಚರೆಡ್ಡಿ, ನಿತ್ಯಾನಂದ ಕುಂದಾಪುರ, ಶಿವಪುತ್ರಪ್ಪ ಮಲ್ಲಾಡದ, ರಮೇಶ ಪೂಜಾರ, ಪ್ರಭಾಕರ ಶಿಗ್ಲಿ, ಚಂದ್ರಣ್ಣ ಬೇಡರ, ಹರಿಹರಗೌಡ ಪಾಟೀಲ, ಕೊಟ್ರೇಶಪ್ಪ ಎಮ್ಮಿ, ಕರಬಸಪ್ಪ ಕೂಲೇರ, ಶಿವಕುಮಾರ ಜಾಧವ, ಎಂ.ಚಿರಂಜೀವಿ, ಶಿವಕುಮಾರ ಓಲೇಕಾರ, ಮುಕ್ತೇಶ ಕೂರಗುಂದಮಠ, ಆನಂದ್ ಹುಲಬನ್ನಿ, ಕೆ.ಎಸ್. ನಾಗರಾಜ, ಮುತ್ತಪ್ಪ ಕಂಬಳಿ, ಮಂಜುನಾಥ ಕೋಲಕಾರ, ಶೋಭಾ ಮುದೇನೂರ ಮತ್ತಿತರರಿದ್ದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ