ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಭಾನುವಾರ ಚುನಾವಣೆ ನಡೆಯಿತು. ಪದಾಧಿಕಾರಿಗಳ 9 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಯಿತು. ಆದರೆ, ಕಾರ್ಯಕಾರಿಣಿಯ 15 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಒಟ್ಟು 15 ಸ್ಥಾನಗಳಿಗೆ 25 ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಳಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ಮತದಾನ ನಡೆಯಿತು. ನಂತರ ಮತ ಎಣಿಕೆ ಮಾಡಲಾಯಿತು.ಅಂತಿಮವಾಗಿ ಅಜೀಜ್ ಅಹ್ಮದ್ ಬಳಗಾನೂರ ( ಪಡೆದ ಮತಗಳು- 191), ಈರಪ್ಪ ನಾಯ್ಕರ (215), ಈರಪ್ಪ ಕಣಕಿಕೊಪ್ಪ (204) ಕಲ್ಲಪ್ಪ ಮಿರ್ಜಿ (199), ಕಾಶಪ್ಪ ಕರದಿನ್ (208), ದೀಪಕ ತಲವಾಯಿ (193), ಬಸವರಾಜ ಯರಿಬೈಲ (197) ಬಸವರಾಜ ಹಿರೇಮಠ (220), ಮಂಜುನಾಥ ಅಂಗಡಿ (215), ಮಹೇಶ ನರೇಗಲ್ (173), ರವೀಶ ಪವಾರ (222), ರೂಪಾ ಕೊಡದ (215), ರಂಗನಾಥ ಕಮತರ (195), ವಿಜಯಕುಮಾರ ಹೂಗಾರ (215), ಹೇಮರಡ್ಡಿ ಸೈದಾಪುರ (220) ಆಯ್ಕೆಯಾದರು.
ಚುನಾವಣಾಧಿಕಾರಿಗಳಾದ ಮನೋಜ ಪಾಟೀಲ ಮತ್ತು ಸಿ.ಪಿ. ಮಾಯಾಚಾರಿ ಫಲಿತಾಂಶ ಘೋಷಣೆ ಮಾಡಿದರು.ಅವಿರೋಧ ಆಯ್ಕೆ: ಈ ನಡುವೆ ಸಂಘದ 9 ಜನ ಪದಾಧಿಕಾರಿಗಳದ್ದು ಅವಿರೋಧವಾಗಿ ಆಯ್ಕೆಯಾಗಿತ್ತು. ಬಂಡು ಕುಲಕರ್ಣಿ (ಅಧ್ಯಕ್ಷ), ಬಸವರಾಜ ವಿಜಾಪುರ, ಶಿವಾನಂದ ಗೊಂಬಿ, ಪ್ರಕಾಶ ಚಳ್ಳಗೇರಿ (ಉಪಾಧ್ಯಕ್ಷರು), ಗುರು ಭಾಂಡಗೆ (ಪ್ರಧಾನ ಕಾರ್ಯದರ್ಶಿ), ಶಿವಶಂಕರ ಕಂಠಿ, ಜೆ. ಅಬ್ಬಾಸ್ ಮುಲ್ಲಾ, ಪ್ರಸನ್ನಕುಮಾರ ಹಿರೇಮಠ (ಕಾರ್ಯದರ್ಶಿಗಳು), ತನುಜಾ ನಾಯಕ (ಖಜಾಂಚಿ) ಮತ್ತು ಬಸವರಾಜ ಕಟ್ಟಿಮನಿ (ರಾಜ್ಯ ಕಾರ್ಯಕಾರಿಣಿ ಸದಸ್ಯ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಮತ ಎಣಿಕೆ ಮುಗಿಯುತ್ತಿದ್ದಂತೆ ಗೆದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.