ಪತ್ರಕರ್ತರು ಸಮಾಜದಲ್ಲಿ ವಿಶ್ವಾಸ ಗಳಿಸಿ: ಶ್ರೀನಿವಾಸ್

KannadaprabhaNewsNetwork | Published : May 19, 2024 1:59 AM
Follow Us

ಸಾರಾಂಶ

ಹೊಸಕೋಟೆ: ಪ್ರಸ್ತುತ ದಿನಗಳಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಹಾಗೂ ಪತ್ರಕರ್ತರು ಸಮಾಜದಲ್ಲಿ ವಿಶ್ವಾಸಾರ್ಹತೆ ಗಳಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಾ.ಜಿ.ಶ್ರೀನಿವಾಸ್ ತಿಳಿಸಿದರು.

ಹೊಸಕೋಟೆ: ಪ್ರಸ್ತುತ ದಿನಗಳಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಹಾಗೂ ಪತ್ರಕರ್ತರು ಸಮಾಜದಲ್ಲಿ ವಿಶ್ವಾಸಾರ್ಹತೆ ಗಳಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಾ.ಜಿ.ಶ್ರೀನಿವಾಸ್ ತಿಳಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ 2024-25ನೇ ಸಾಲಿನ ಗುರುತಿನ ಚೀಟಿ ವಿತರಿಸಿ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗಕ್ಕೆ ವಿಶೇಷ ಸ್ಥಾನಮಾನವಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಪತ್ರಿಕಾರಂಗ ಕೂಡ ಉದ್ಯಮವಾಗಿ ಪರಿಣಮಿಸಿದ್ದು ಇಂದಿನ ರಾಜಕೀಯ ವ್ಯವಸ್ಥೆಗೆ ಪತ್ರಕರ್ತರು ತಳಕು ಹಾಕಿಕೊಂಡು ತಮ್ಮತನ ಮರೆಯುತ್ತಿರುವ ಪರಿಣಾಮ ಪತ್ರಕರ್ತರೆಂದರೆ ಮೂಗು ಮುರಿಯುವಂತಹ ಸನ್ನಿವೇಶ ಎದುರಾಗಿದೆ. ಆದ್ದರಿಂದ ಪತ್ರಕರ್ತರು ತಮ್ಮ ಅಂತಃಕರಣ ಒಪ್ಪುವಂತೆ ಕೆಲಸ ಮಾಡಬೇಕು. ಇದರಿಂದ ಪತ್ರಿಕಾ ಧರ್ಮದ ಘನತೆಯನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಜಿಲ್ಲಾ ಪ್ರ ದೃಧಾನ ಕಾರ್ಯದರ್ಶಿ ದೊಡ್ಡಬಳ್ಳಾಪುರ ರಮೇಶ್ ಮಾತನಾಡಿ, ಪತ್ರಕರ್ತರು ಪಕ್ಷಾತೀತ, ಧರ್ಮಾತೀತ ಸಮಾಜದ ಅಭಿವೃದ್ಧಿ ದೃಷ್ಠಿಯಿಂದ ವಾಸ್ತವ ಅರಿತು ವರದಿ ಮಾಡಬೇಕು. ಸಂಘದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಪರಸ್ಪರ ಭಿನ್ನಾಭಿಪ್ರಾಯ ಬಿಟ್ಟು ಕೆಲಸ ಮಾಡಬೇಕು. ಇದರಿಂದ ಸಂಘದ ಜೊತೆಗೆ ಪತ್ರಕರ್ತರು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ನೂತನ ಅಧ್ಯಕ್ಷ ಡಿ.ನಾಗರಾಜ್ ಮಾತನಾಡಿ, ಸಂಘದಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಸರ್ವತೋಮುಖ ಅಬಿವೃದ್ದಿಗೆ ನನ್ನ ಅವಧಿಯಲ್ಲಿ ಶ್ರಮಿಸುತ್ತೇನೆ ಈ ನಿಟ್ಟಿನಲ್ಲಿ ಸದಸ್ಯರ ಸಂಪೂರ್ಣ ಸಹಕಾರ ಬಯಸುತ್ತೇನೆ. ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಎಂ.ಆರ್.ನಾಗರಾಜ್, ಗೌರವ ಸಲಹೆಗಾರ ರಫೀಕ್, ನಿರ್ದೇಶಕರಾದ ಸುಗ್ಗರಾಜ್, ರಾಘವೇಂದ್ರಾಚಾರಿ, ವೈ.ಆನಂದ್, ಎಸ್.ಸಿ.ಮಂಜುನಾಥ್, ಆರ್.ಸತೀಶ್, ಕೆ.ಎಂ.ದೇವರಾಜ್, ತಾಲೂಕು ಅಧ್ಯಕ್ಷ ಎಚ್.ಕೆ.ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ರಾಜ ಆರ್ಟ್ಸ್ ಮುನಿರಾಜ್ಎ, ಲ್ಲಾ ಪಧಾಧಿಕಾರಿಗಳು ಹಾಜರಿದ್ದರು.

ಪಧಾಧಿಕಾರಿಗಳ ಆಯ್ಕೆ:

ಅಧ್ಯಕ್ಷರಾಗಿ ಡಿ.ನಾಗರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ರಕಾಶ್ ಸ್ವರೂಪ್, ಉಪಾಧ್ಯಕ್ಷರಾಗಿ ಎಂ.ಮುನಿರಾಜು, ಎಂ.ಆರ್.ಮಂಜುನಾಥ್, ಖಜಾಂಚಿಯಾಗಿ ಚಾಂದ್ ಸಾಹೇಬ್, ಕಾರ್ಯದರ್ಶಿ ರಾಮಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ.ತ್ಯಾಗರಾಜ್, ರವಿಕುಮಾರ್, ಎಂ.ಆನಂದ್, ಎಸ್.ಕೆ.ವಸಂತ್ ಕುಮಾರ್, ಎನ್.ಎಂ.ನಾಗರಾಜ್, ಎಸ್.ಸಿ ವೆಂಕಟಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.ಫೋಟೋ: 18 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕು ಸಂಘ ಸದಸ್ಯರಿಗೆ ಬೆಂಗಳೂರು ಗ್ರಾಮಾಂತರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ನೇತೃತ್ವದಲ್ಲಿ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.