ಪತ್ರಕರ್ತರು ಸತ್ಯಶೋಧನಾ ಮಾರ್ಗದಲ್ಲಿ ನಡೆಯಬೇಕು

KannadaprabhaNewsNetwork |  
Published : Aug 01, 2024, 12:22 AM IST
31ಜೆಎಲ್ಆರ್ಚಿತ್ರ1: ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಪತ್ರಿಕಾ ದಿನಾಚರಣೆಯನ್ನು ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆದರೆ ಸಮಾಜದಲ್ಲಿ ನಡೆಯುವ ಸತ್ಯ ಮತ್ತು ಅಸತ್ಯತೆಗಳು ಹೊರಬರುತ್ತದೆ ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿ ಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಚನ್ನಗಿರಿಯಲ್ಲಿ ನುಡಿದಿದ್ದಾರೆ.

- ಜಗಳೂರಲ್ಲಿ ಪತ್ರಿಕಾ ದಿನ ಸಮಾರಂಭದಲ್ಲಿ ಡಾ.ನಾಲ್ವಡಿ ಶಾಂತಲಿಂಗ ಶ್ರೀ ಸಲಹೆ - - -

ಕನ್ನಡ ಪ್ರಭವಾರ್ತೆ ಜಗಳೂರು

ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆದರೆ ಸಮಾಜದಲ್ಲಿ ನಡೆಯುವ ಸತ್ಯ ಮತ್ತು ಅಸತ್ಯತೆಗಳು ಹೊರಬರುತ್ತದೆ ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿ ಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲೂಕಿನ ಕಣ್ವಕುಪ್ಪೆ ಗವಿ ಮಠದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯಾರೋ ಹೇಳಿದರು ಎಂದು ಸುದ್ದಿ ಬರೆಯುವ ಮುನ್ನ, ಸತ್ಯಶೋಧನೆ ಮಾಡಬೇಕು. ಕರ್ತವ್ಯದಲ್ಲಿ ಸದಾಚಾರ, ಕ್ರಿಯಾಶೀಲತೆ, ನಿಸ್ವಾರ್ಥತೆ ಇದ್ದರೆ ಭಗವಂತ ಫಲ ಕೊಟ್ಟೇ ಕೊಡುತ್ತಾನೆ. ಸದಾ ಸತ್ಕಾರ್ಯದಲ್ಲಿ ಭಾಗಿಯಾಗಿ ಸತ್ಯವನ್ನೇ ಬರೆಯಬೇಕೆಂದು ಪರ್ತಕರ್ತರಿಗೆ ಸಲಹೆ ನೀಡಿದರು.

ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ್ ಮಾತನಾಡಿ, ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನಿವೇಶನ ಪಡೆಯಬೇಕಾದರೆ ಸ್ಥಳೀಯ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು. ನಿಮ್ಮ ಎಲ್ಲ ಕಷ್ಟ-ಸುಖದಲ್ಲಿ ಸಂಘ ಜೊತೆಗಿರುತ್ತದೆ ಎಂದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಮಾತನಾಡಿ, ಸಮಾಜ ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಹೆಚ್ಚು ಬೆಲೆ ಕೊಡುತ್ತದೆ. ತಾಲೂಕುಮಟ್ಟದ ಪತ್ರಕರ್ತರು ಸಾಕಷ್ಟು ಶೋಷಣೆಗೆ ಒಳಗಾಗಿದ್ದಾರೆ. ನಾನೂ ಸಾಕಷ್ಟು ನೋವನ್ನು ಅನುಭವಿಸಿದ್ದೇನೆ. ಸರ್ಕಾರಿ ಸವಲತ್ತುಗಳಿಂದ ಪತ್ರಕರ್ತರು ವಂಚಿತರಾಗಿದ್ದಾರೆ. ಕುಟುಂಬ ಜೊತೆಗೆ ಸಾಲು ಸಾಲು ಸಮಸ್ಯೆಗಳಿವೆ. ಹಾವು ಏಣಿ ಆಟದಂತೆ ಪತ್ರಕರ್ತರ ಜೀವನವಾಗಿದೆ. ಆದರೆ, ಬರೆಯುವ ಪೆನ್ನಿನ ಮಸಿ ಕೈಗೆ ಅಂಟದಂತೆ ಇರುವುದೇ ಪತ್ರಕರ್ತರ ನಿಜವಾದ ಬದ್ಧತೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಡಿ. ಶ್ರೀನಿವಾಸ್, ಅಣಬೂರು ಮಠದ ಕೊಟ್ರೇಶ್ ಮಾತನಾಡಿ, ಪತ್ರಕರ್ತರಿಗೆ ನಿವೇಶನ ಸೇರಿದಂತೆ ಸರ್ಕಾರದ ಎಲ್ಲ ಸವಲತ್ತುಗಳನ್ನು ಜಿಲ್ಲಾ ಮತ್ತು ರಾಜ್ಯ ಸಂಘ ಒದಗಿಸುವಂತ ಹೆಚ್ಚಿನ ಗಮನ ಹರಿಸಬೇಕು ಎಂದರು.

ತಾಲೂಕು ಅಧ್ಯಕ್ಷ ಜಿ.ಎಸ್. ಚಿದಾನಂದ, ಮಾತನಾಡಿ ಪತ್ರಕರ್ತರ ಸಂಘವು ಪತ್ರಕರ್ತರ ನೆರವಿಗೆ ಸದಾ ಇರುತ್ತದೆ. ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾಮಿಣ ಪತ್ರಕರ್ತರಿಗೆ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಜಿಲ್ಲಾ ಕಾರ್ಯದರ್ಶಿ ಎ.ಫಕೃದ್ಧೀನ್ ತಾಲೂಕು ಪತ್ರಕರ್ತರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು. ಸಾಹಿತಿ ಎನ್.ಟಿ. ಯರ್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ವೀರೇಶ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಐಹೊಳೆ, ಖಜಾಂಚಿ ಕೆ.ಎಂ. ಜಗದೀಶ್, ರುದ್ರೇಶ್, ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷ ಸಯೀದ್ ವಾಸಿಂ, ರೈತ ಮುಖಂಡರಾದ ಚಿರಂಜೀವಿ , ತುಪ್ಪದಹಳ್ಳಿ ಪೂಜಾರಿ ಸಿದ್ದಪ್ಪ, ಪತ್ರಕರ್ತರಾದ ಧನ್ಯಕುಮಾರ್, ಎಸ್.ಎಂ.ಸೋಮನಗೌಡ, ಶಿವಲಿಂಗಪ್ಪ, ಎಂ.ಸಿ.ಬಸವರಾಜ್ , ಮಂಜು, ಮಂಜಯ್ಯ, ಮಹಾಲಿಂಗಪ್ಪ, ಮಹಾಂತೇಶ್ ಬ್ರಹ್ಮ್ , ರಕೀಬ್, ವೇದಮೂರ್ತಿ, ಮಲೆಮಾಚಿಕೆರೆ ಸತೀಶ್, ಎಚ್.ಎಂ. ಹೊಳೆ ಮಹಲಿಂಗಪ್ಪ, ರೈತ ಸಂಘ ಮುಖಂಡರು, ಡಿಎಸ್ಎಸ್ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು, ಪತ್ರಕರ್ತರು, ಪತ್ರಿಕಾ ವಿತರಕರು ಇದ್ದರು.

- - - -31ಜೆಎಲ್ಆರ್ಚಿತ್ರ1:

ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿ ಮಠದಲ್ಲಿ ಪತ್ರಿಕಾ ದಿನಾಚರಣೆಯನ್ನು ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

PREV