- ಹಿರಿಯ ಪತ್ರಕರ್ತ ದಿ।। ವೀರಪ್ಪ ಎಂ. ಭಾವಿ ನುಡಿನಮನ ಕಾರ್ಯಕ್ರಮ
ಪ್ರಸ್ತುತ ಕಾಲಘಟ್ಟದಲ್ಲಿ ಪತ್ರಕರ್ತರಿಗೆ ತುಂಬಾ ಗೌರವದ ಸ್ಥಾನವಿದೆ. ಸಮಾಜದ ಓಕೆಕೋರೆ ತಿದ್ದುವಂತಹ ಪತ್ರಿಕಾ ವೃತ್ತಿ ಗೌರವ ಕಾಪಾಡುವ ಮೂಲಕ ಸಮಾಜಕ್ಕೆ ಸಾಧ್ಯವಾದ ಒಳ್ಳೆಯದನ್ನು ಮಾಡುವಂತೆ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ದೇವರಾಜ ಅರಸು ಬಡಾವಣೆಯ ಶ್ರೀ ಹಾಲಕೆರೆ ಅನ್ನದಾನೀಶ್ವರ ಶಾಖಾ ಮಠದಲ್ಲಿ ಗುರುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಇಂದಿನ ಸುದ್ದಿ ಪತ್ರಿಕೆಯಿಂದ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ದಿವಂಗತ ವೀರಪ್ಪ ಎಂ.ಭಾವಿಯವರ ನುಡಿನಮನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಪತ್ರಕರ್ತರು ಹಮ್ಮು ಬಿಮ್ಮುಗಳನ್ನು ಬಿಟ್ಟು, ಸಮಾಜಮುಖಿಯಾಗಿ ತಮ್ಮ ಕಾಯಕ ಮಾಡಬೇಕು. ಅನ್ನದಾನೀಶ್ವರ ಮಠದ ಬೆಳವಣಿಗೆಯಲ್ಲಿ ಅಥಣಿ ಎಸ್.ವೀರಣ್ಣ, ಎನ್.ಅಡಿವೆಪ್ಪನವರ ಜೊತೆಗೆ ವೀರಪ್ಪ ಭಾವಿ ಹೆಗಲಿಗೆ ಹೆಗಲು ಕೊಟ್ಟವರು. ಎರೆಸೀಮೆಯಿಂದ ಬಂದ ಜನರಿಗೆ ಬಾಯಾರಿದವರಿಗೆ ನೀರಿನ ಬಾವಿ ಕಂಡಂತೆ ಕಷ್ಟ, ಸುಖಕ್ಕೆ ವೀರಪ್ಪ ಭಾವಿ ಆಗುತ್ತಿದ್ದ ವ್ಯಕ್ತಿ ಎಂದು ಅವರು ಸ್ಮರಿಸಿದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ತುಂಬಾ ಸರಳ ವ್ಯಕ್ತಿತ್ವದ ವೀರಪ್ಪ ಭಾವಿ ಕಷ್ಟಕಾಲದಲ್ಲಿ ಪತ್ರಿಕಾ ರಂಗ ಪ್ರವೇಶಿಸಿ, ಸ್ವಂತ ಪತ್ರಿಕೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಲಾಭವಿಲ್ಲದಿದ್ದರೂ ಕಾಯಕ ನಿಷ್ಟೆಯಿಂದ ಕೆಲಸ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಡಾ.ಜಸ್ಟಿನ್ ಡಿಸೌಜ, ಹಿರಿಯ ಪತ್ರಕರ್ತ ಬಾ.ಮ.ಬಸವರಾಜಯ್ಯ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಖಜಾಂಚಿ ಎನ್.ವಿ.ಬದರೀನಾಥ, ಮಂಗಳಾ ವೀರಪ್ಪ ಭಾವಿ, ಮುತ್ತುರಾಜ ಎಂ. ಭಾವಿ, ಅನಿಲಕುಮಾರ ಎಂ.ಭಾವಿ, ವೇದಮೂರ್ತಿ, ಮಾಗನೂರು ಮಂಜಪ್ಪ, ಎಚ್.ಎಂ.ಪಿ.ಕುಮಾರ, ಇ.ಎಂ.ಪವನ್, ಮಹೇಶ ಕಾಶೀಪುರ, ಜಿ.ಎಸ್.ವೀರೇಶ ಇತರರು ಇದ್ದರು.
- ಡಾ. ಜಸ್ಟಿನ್ ಡಿಸೌಜ, ಮುಖ್ಯಸ್ಥ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ
ದಾವಣಗೆರೆ ಹಾಲಕೆರೆ ಮಠದಲ್ಲಿ ಹಿರಿಯ ಪತ್ರಕರ್ತ ದಿ।। ವೀರಪ್ಪ ಎಂ.ಭಾವಿ ಭಾವಚಿತ್ರಕ್ಕೆ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಅಥಣಿ ಎಸ್.ವೀರಣ್ಣ, ಕೆ.ಎಸ್.ಬಸವಂತಪ್ಪ, ಡಾ.ಜಸ್ಟಿನ್ ಡಿಸೌಜ ಇತರ ಗಣ್ಯರು ಪುಷ್ಪನಮನ ಸಲ್ಲಿಸಿದರು.