8 ಕೆರೆಗಳಿಗೆ ನೀರು ತುಂಬಿಸಲು ಜೆಟಿಪಾ ಚಾಲನೆ

KannadaprabhaNewsNetwork |  
Published : Aug 08, 2026, 03:00 AM IST
ಕಲಾದಗಿ | Kannada Prabha

ಸಾರಾಂಶ

ಹಿರೇಶೆಲ್ಲಿಕೇರಿ ಕ್ರಾಸ್ ಬಳಿ ಇರುವ ಹೇರಕಲ್ ದಕ್ಷಿಣ ಏತ ನೀರಾವರಿ ಯೋಜನೆಯ ಬೃಹತ್ ಕಾಲುವೆ ಜಾಕ್ವೆಲ್ ಪಂಪ್‌ ಹೌಸ್‌ ಮೂಲಕ ಕಳಸಕೊಪ್ಪ ಕೆರೆ ಹಾಗೂ ಬಾದಾಮಿ ತಾಲೂಕಿನ 7 ಕೆರೆಗಳಿಗೆ ಪ್ರಸಕ್ತ ವರ್ಷ ನೀರು ತುಂಬಿಸಲು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಹಿರೇಶೆಲ್ಲಿಕೇರಿ ಕ್ರಾಸ್ ಬಳಿ ಇರುವ ಹೇರಕಲ್ ದಕ್ಷಿಣ ಏತ ನೀರಾವರಿ ಯೋಜನೆಯ ಬೃಹತ್ ಕಾಲುವೆ ಜಾಕ್ವೆಲ್ ಪಂಪ್‌ ಹೌಸ್‌ ಮೂಲಕ ಕಳಸಕೊಪ್ಪ ಕೆರೆ ಹಾಗೂ ಬಾದಾಮಿ ತಾಲೂಕಿನ 7 ಕೆರೆಗಳಿಗೆ ಪ್ರಸಕ್ತ ವರ್ಷ ನೀರು ತುಂಬಿಸಲು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಚಾಲನೆ ನೀಡಿದರು.

ಪಂಪ್‌ ಹೌಸ್‌ ಜಾಕ್ವೆಲ್‌ನಲ್ಲಿನ ಮೋಟಾರ್ ಬಟನ್ ಒತ್ತಿ ಚಾಲನೆ ನೀಡಿ ಮಾತನಾಡಿದ ಅವರು, ದುರಸ್ತಿಯಲ್ಲಿದ್ದ ಟ್ರಾನ್ಸಫಾರ್ಮರ್‌ ಬದಲು ಮಾಡಲು ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದಿಂದ ತರಿಸಲಾದ ಟಿಸಿ 6 ಕೆ.ವಿ ಇದೆ. ಇದರಿಂದ ಎಲ್ಲ ಮೋಟಾರುಗಳನ್ನು ಆನ್‌ ಮಾಡಲು ಸಾಧ್ಯವಿಲ್ಲ. ಕೂಡಲೇ 9 ಕೆವಿ ಟಿಸಿ ತರಿಸಲು ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನೂ ಎರಡು ಮೋಟಾರು ಆರಂಭಿಸಿ ಶೀಘ್ರ ಕೆರೆಗಳು ತುಂಬುವಂತೆ ಮಾಡಲು ನಿರಂತರ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು. ಪ್ರಸಕ್ತ ವರ್ಷ ಸರಿಯಾಗಿ ಮಳೆಯಾಗದೆ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು ಕಳಸಕೊಪ್ಪ ಕೆರೆ ಕೆಳಭಾಗಕ್ಕೆ ಬರುವ ಗ್ರಾಮದ ಭೂಮಿಗೆ ಕೆರೆಯ ಕಾಲುವೆ ಮೂಲಕ ನೀರು ಬಿಡುವಂತೆ ಸಲಹೆ ನೀಡಿದರು.

ಈ ವೇಳೆ ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸಂಶಿ, ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗಾರ್, ಭರಮಲಿಂಗೇಶ್ವರ ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಸಂಗಣ್ಣ ಮುಧೋಳ, ಜಿಪಂ ಮಾಜಿ ಸದಸ್ಯ ಪಾಂಡು ಪೊಲೀಸ್, ಅಶೋಕ ಕೊಪ್ಪದ, ಪ್ರವೀಣ ಚಿಕ್ಕೂರ, ಬಂದೇನವಾಜ್ ಸೌದಾಗಾರ್, ಹಸನಮ್ಮದ್ ರೋಣ, ಯಲ್ಲಪ್ಪ ಕುಳಗೇರಿ, ಧರ್ಮಣ್ಣ ಭಗವತಿ, ಮಂಜು ಗೌಡರ, ಬಸವರಾಜ ಗೊಡಚಿ, ಶಣ್ಮುಕಯ್ಯ ನೂರಂದಯ್ಯನಮಠ, ಗಂಗಯ್ಯ ಸರ್ಕಾರ, ಕೆಬಿಜೆಎನ್‌ಎಲ್ ಎಸ್ಸಿ ಬಿ.ಎಸ್.ಪಾಟೀಲ, ಇಇ ಎಸ್.ಎಸ್.ಕೊಳ್ಳಿ, ಇಎ ನವೀನ್ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಕೊಟ್ಟ ಮುಂಗಾರು, ಅನ್ನದಾತ ಕಂಗಾಲು!
ಉದ್ಯಮ ಆರಂಭಿಸುವಂತ ವಾತಾವರಣ ನಿರ್ಮಾಣವಾಗಲಿ