ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನ್ಯಾಯಾಶಧೀಶರ ಸಲಹೆ

KannadaprabhaNewsNetwork | Updated : Oct 14 2024, 01:26 AM IST

ಸಾರಾಂಶ

ಹಣ ಮಾಡುವ ಯೋಜನೆಯಲ್ಲಿ ಆರೋಗ್ಯವನ್ನೇ ಹದೆಗೆಡಿಸಿಕೊಳ್ಳುತ್ತಿರುವ ಪ್ರಕರಣಗಳು ಇಂದು ಹೆಚ್ಚಾಗುತ್ತಿವೆ. ಜಗತ್ತಿನಲ್ಲಿ ಹಲವು ಮಂದಿ ಮಾನಸಿಕ ಒತ್ತಡದಲ್ಲಿ ಬದುಕುತ್ತಿದ್ದಾರೆ. ಅವರು ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಂಪಾದಿಸುವ ಹಣದಲ್ಲಿಯೇ ತೃಪ್ತಿಪಟ್ಟಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಾನಸಿಕ ಒತ್ತಡಕ್ಕೆ ಒಳಗಾಗದೇ ಪ್ರತಿಯೊಬ್ಬರೂ ನೆಮ್ಮದಿ ಜೀವನ ಸಾಗಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಚ್.ಎಸ್.ಕಾವ್ಯಶ್ರೀ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಣ ಮಾಡುವ ಯೋಜನೆಯಲ್ಲಿ ಆರೋಗ್ಯವನ್ನೇ ಹದೆಗೆಡಿಸಿಕೊಳ್ಳುತ್ತಿರುವ ಪ್ರಕರಣಗಳು ಇಂದು ಹೆಚ್ಚಾಗುತ್ತಿವೆ. ಜಗತ್ತಿನಲ್ಲಿ ಹಲವು ಮಂದಿ ಮಾನಸಿಕ ಒತ್ತಡದಲ್ಲಿ ಬದುಕುತ್ತಿದ್ದಾರೆ. ಅವರು ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಂಪಾದಿಸುವ ಹಣದಲ್ಲಿಯೇ ತೃಪ್ತಿಪಟ್ಟಿಕೊಳ್ಳಬೇಕೆಂದು ಸಲಹೆ ನೀಡಿದರು. ತಾಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಮಾತನಾಡಿ, ಕಿನ್ನತೆಗೆ ಒಳಗಾದರೆ ಹಲವು ರೋಗಗಳಿಗೆ ದಾರಿಯಾಗುತ್ತದೆ. ಆಸೆ, ಆಕಾಂಕ್ಷೆಗೆ ಒಳಗಾಗದೇ ಇರುವುದರಲ್ಲಿಯೇ ನೆಮ್ಮದಿ ಕಾಣಬೇಕಿದೆ. ರೋಗ ಬಂದು ನರಳುವ ಬದಲು ಮೊದಲೇ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕೆಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಡಿ.ಎಂ ಸುಂದರ್ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಶಂಕರಸ್ವಾಮಿ, ಅಪರ ಸರ್ಕಾರಿ ವಕೀಲ ಶ್ರೀಕಂಠಸ್ವಾಮಿ, ಆಡಳಿತ ವೈದ್ಯಾಧಿಕಾರಿ ಡಾ. ಸಂಜಯ್, ಆಪ್ತ ಸಮಾಲೋಚಕ ಸನತ್‌ ಕುಮಾರ್, ಸೋಯಲ್ ಸೇರಿದಂತೆ ಇತರರು ಇದ್ದರು.

ಬಿ.ಆರ್. ಅಂಬೇಡ್ಕರ್ ಭವನಕ್ಕೆ ಶಾಸಕ ಮಧು ಭೇಟಿ ಪರಿಶೀಲನೆಭಾರತೀನಗರ:ಮಣಿಗೆರೆ ಗ್ರಾಮದ ಬಿ.ಆರ್.ಅಂಬೇಡ್ಕರ್ ಭವನಕ್ಕೆ ಶಾಸಕ ಮಧು ಜಿ.ಮಾದೇಗೌಡ ಭೇಟಿನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಮಧು ಅವರು, ಅಂಬೇಡ್ಕರ್ ಭವನಕ್ಕೆ ಈಗಾಗಲೇ ನನ್ನ ಮತ್ತು ಶಾಸಕ ದಿನೇಶ್‌ ಗೂಳಿಗೌಡ ಶಾಸಕತ್ವ 10 ಲಕ್ಷ ರು.ಅನುದಾನ ನೀಡಲಾಗಿದೆ. ಭವನ ತುಂಬಾ ಅಚ್ಚುಕಟ್ಟಾಗಿ ನಿರ್ಮಾಣವಾಗುತ್ತಿದೆ ಎಂದರು.ಜಿಲ್ಲೆಯಲ್ಲಿರುವ ಗ್ರಾಮೀಣ ಪ್ರದೇಶದ ಡಾ.ಬಿ.ಅಂಬೇಡ್ಕರ್ ಭವನಗಳಲ್ಲಿ ಶೌಚಾಲಯ ವ್ಯವಸ್ಥೆ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಥಾನದ ಮನೆಗಳ ವ್ಯವಸ್ಥೆ ಮತ್ತು ಅಡುಗೆ ಮನೆ, ಕುಡಿಯುವ ನೀರಿನ ಸೌಕರ್ಯ ಎಲ್ಲವನ್ನು ಒಳಗೊಂಡಂತೆ ಜಿಲ್ಲೆಯಲ್ಲಿ ಪ್ರಥಮ ಭವನ ಎನಿಸುತ್ತಿದೆ. ಉಳಿಕೆ ಕಾಮಗಾರಿಗೆ ಮತ್ತೆ ಇನ್ನೂ 5 ಲಕ್ಷ ರು.ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ನಿವೃತ್ತ ಕಾರ್ಯಪಾಲಕ ಅಭಿಯಂತರ ಬಸರಾಜೇಗೌಡ, ಗ್ರಾಮದ ಮುಖಂಡ ಕಬ್ಬಾಳಯ್ಯ, ಗುತ್ತಿಗೆದಾರ ಪುಟ್ಟಸ್ವಾಮೀಗೌಡ, ಮುಡೀನಹಳ್ಳಿ ಅಪ್ಪಾಜಿ ಹಾಗೂ ಗ್ರಾಮದ ಸ್ಥಳೀಯ ಮುಖಂಡರು ಹಾಜರಿದ್ದರು.

Share this article