ಯಾರೋ ಕೂಗಿದ್ದಕ್ಕೆ ರಾಜಕಾರಣದಲ್ಲಿ ಬದಲಾಗಲ್ಲ

KannadaprabhaNewsNetwork | Published : Jan 23, 2025 12:46 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಯಾರೋ ಕೂಗಿದ ಕೂಡಲೇ ರಾಜಕಾರಣದಲ್ಲಿ ಬದಲಾವಣೆಯಾಗಿ ಬಿಡುತ್ತಾ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಶ್ನಿಸಿದರು. ಮುಂದಿನ ಸಿಎಂ ಡಿಕೆಶಿ ಎಂದು ಸಿದ್ದರಾಮಯ್ಯ ಎದುರು ಕೂಗಿದ್ದು ಸಿದ್ದರಾಮಯ್ಯಗೆ ಅವಮಾನ ಆಗಿದೆ ಎಂಬ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿಕೆ ಬಗ್ಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ.ರವಿಗೆ ಟಾಂಗ್‌ ನೀಡಿದರು. ಅಲ್ಲಿ ಲಕ್ಷಾಂತರ ಜನ ಸೇರಿದ್ರು, ಯಾರೋ ಕೂಗಿಬಿಡುತ್ತಾರೆ, ಅದ್ಧರಿಂದ ಬದಲಾಗುತ್ತಾ?, ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಇದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಂದು ರೀತಿ ನೀತಿ ಇದೆ. ಸಿಎಂ, ಡಿಸಿಎಂ, ಸಚಿವರಾಗಿ ಯಾರನ್ನು ಮಾಡಬೇಕು, ಯಾರನ್ನ ಬದಲಾವಣೆ ಮಾಡಬೇಕು ಅಂತ ನಿರ್ಧರಿಸುವುದು ಹೈಕಮಾಂಡ್. ಯಾರೋ ನಾಲ್ಕು ಜನ ಕೂಗಿದ್ರೆ?, ಅಭಿಮಾನಕ್ಕೆ ಕೂಗುತ್ತಾರೆ ಎಂದು ಸ್ಪಷ್ಟನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯಾರೋ ಕೂಗಿದ ಕೂಡಲೇ ರಾಜಕಾರಣದಲ್ಲಿ ಬದಲಾವಣೆಯಾಗಿ ಬಿಡುತ್ತಾ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಶ್ನಿಸಿದರು.

ಮುಂದಿನ ಸಿಎಂ ಡಿಕೆಶಿ ಎಂದು ಸಿದ್ದರಾಮಯ್ಯ ಎದುರು ಕೂಗಿದ್ದು ಸಿದ್ದರಾಮಯ್ಯಗೆ ಅವಮಾನ ಆಗಿದೆ ಎಂಬ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿಕೆ ಬಗ್ಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ.ರವಿಗೆ ಟಾಂಗ್‌ ನೀಡಿದರು. ಅಲ್ಲಿ ಲಕ್ಷಾಂತರ ಜನ ಸೇರಿದ್ರು, ಯಾರೋ ಕೂಗಿಬಿಡುತ್ತಾರೆ, ಅದ್ಧರಿಂದ ಬದಲಾಗುತ್ತಾ?, ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಇದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಂದು ರೀತಿ ನೀತಿ ಇದೆ. ಸಿಎಂ, ಡಿಸಿಎಂ, ಸಚಿವರಾಗಿ ಯಾರನ್ನು ಮಾಡಬೇಕು, ಯಾರನ್ನ ಬದಲಾವಣೆ ಮಾಡಬೇಕು ಅಂತ ನಿರ್ಧರಿಸುವುದು ಹೈಕಮಾಂಡ್. ಯಾರೋ ನಾಲ್ಕು ಜನ ಕೂಗಿದ್ರೆ?, ಅಭಿಮಾನಕ್ಕೆ ಕೂಗುತ್ತಾರೆ ಎಂದು ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ ಪವರ್‌ ಶೇರಿಂಗ್ ಎಂಬ ಬಗ್ಗೆ ಉತ್ತರಿಸಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ಕೇಳಿ. ಹೈಕಮಾಂಡ್ ಏನಾದರೂ ಪವರ್‌ ಶೇರಿಂಗ್ ಬಗ್ಗೆ ಹೇಳಿದ್ಯಾ?. ಇದು ಆಗಾಗ ಬರುತ್ತಿರುತ್ತೆ. ಸುರ್ಜೇವಾಲಾ, ವೇಣುಗೋಪಾಲ, ಖರ್ಗೆ ಅವರು ನಿನ್ನೆ ಬಂದಿದ್ದರು. ಅವರನ್ನೇ ಕೇಳಬೇಕಿತ್ತು ಎಂದು ಜಾರಿಕೊಂಡರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತ್ಯಾಗದ ಮಾತಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ತ್ಯಾಗ ಮನೋಭಾವ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಇದೆ. ಕಾಂಗ್ರಸ್‌ನವರು ಸ್ವಾತಂತ್ರ್ಯ ಹೋರಾಟದಲ್ಲಿ ಅಧಿಕಾರ ಬರುತ್ತೆ ಅಂತ ಹೋರಾಟ ಮಾಡ್ಲಿಲ್ಲ. ತ್ಯಾಗ ಬಲಿದಾನ ಮಾಡಿದ್ದಾರೆ, ಇಂದಿರಾಗಾಂಧಿ ತ್ಯಾಗ ಮಾಡಲಿಲ್ವಾ?. ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಪ್ರಧಾನ ಮಂತ್ರಿ ಹುದ್ದೆ ಬಿಟ್ಟು ಕೊಡಲಿಲ್ವಾ? ಎಂದರು.

ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ತ್ಯಾಗದ ಮಾತಿನ ಬಗ್ಗೆ ಪ್ರತಿಕ್ರಿಯಿಸಿ, ನಾನು ಎಷ್ಟೇ ಮಾತಾಡಿದ್ರೂ ನಿಮಗೆ ಕಾಂಟ್ರುವರ್ಸಿ ಬೇಕು. ನಾಳೆ, ಈಗಿನಿಂದಲೇ ಬ್ರೇಕಿಂಗ್ ನ್ಯೂಸ್ ಬೇಕು. ಮಾಧ್ಯಮಗಳದ್ದು ತಪ್ಪಲ್ಲ, ನ್ಯೂಸ್ ಬೇಕಲ್ವಾ ಎಂದು ಸಚಿವ ಜಾರ್ಜ್ ನಕ್ಕರು.

ಈ ವೇಳೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಶಾಸಕ ಅಶೋಕ ಮನಗೂಳಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

------------

ಬಾಕ್ಸ್‌

ತಿಯೊಂದು ಕುಟುಂಬಕ್ಕೆ 58 ಜಾಸ್ತಿ ಆಯ್ತು

ಗೃಹಜ್ಯೋತಿ ಯೋಜನೆ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ 2.62 ಕೋಟಿ ಗೃಹಜ್ಯೋತಿ ಗ್ರಾಹಕರಿದ್ದಾರೆ. ರಿವೈಸ್ ಬಗ್ಗೆ ಬೇಡಿಕೆ ಬಂದರೆ ಕ್ಯಾಬಿನೆಟ್ ನಲ್ಲಿಟ್ಟು ಚರ್ಚೆ ಮಾಡುತ್ತೇವೆ. ಪ್ರತಿಯೊಂದು ಕುಟುಂಬಕ್ಕೆ 58 ಜಾಸ್ತಿ ಆಯ್ತು, ನಮ್ಮ ಸರಾಸರಿ ಐವತ್ತು ಯುನಿಟ್ ಮಾತ್ರ. ಗೃಹಜ್ಯೋತಿ ಯೋಜನೆ ಎಲ್ಲರಿಗೂ ಕೊಡಲಿಕ್ಕೆ ಸಾಧ್ಯವಿಲ್ಲ, ಯಾರು ಆರ್ಥಿಕವಾಗಿ ಕಷ್ಟದಲ್ಲಿದ್ದಾರೋ ಅವರಿಗೆ ಮಾತ್ರ. ಪ್ರತಿಯೊಬ್ಬರಿಗೂ ಫ್ರೀ ಕೊಡುತ್ತೇವೆ ಅಂತ ಹೇಳಿಕಾಗುವುದಿಲ್ಲ. ಪ್ರಾರಂಭದಲ್ಲಿ ಎಷ್ಟು ಯೂನಿಟ್ ಉಚಿತ ಕೊಟ್ಟಿರುತ್ತಾರೋ ಅಷ್ಟು ಮಾತ್ರ ಕೊಡಲು ಸಾಧ್ಯ. ಗೃಹಜ್ಯೋತಿ ಯೋಜನೆ ಅಡಿ ಹೊಸ ಕಟ್ಟಡಗಳಿಗೆ 58 ಯೂನಿಟ್ ಉಚಿತವಾಗಿ ಕೊಡಲಾಗಿದೆ. ಅದನ್ನು ನವೀಕರಿಸಲು ಸಾಧ್ಯವಿಲ್ಲ. ಈಗಾಗಲೇ 2.62 ಕೋಟಿ ಕುಟುಂಬಗಳಿಗೆ 10 ರಿಂದ 12 ಸಾವಿರ ಕೋಟಿ ಪ್ರತಿ ವರ್ಷಕ್ಕೆ ನೀಡುತ್ತಿದ್ದೇವೆ ಎಂದು ಹೇಳಿದರು.----------

ಕೋಟ್‌....ಮೊದಲು ಚಲವಾದಿ ನಾರಾಯಣಸ್ವಾಮಿ ಯಾವ ಪಕ್ಷದಲ್ಲಿದ್ರು?. ಚಲವಾದಿ ನಾರಾಯಣಸ್ವಾಮಿ ನನಗೆ ಬಹಳ ಚೆನ್ನಾಗಿ ಗೊತ್ತು. ಕಾಂಗ್ರೆಸ್‌ನಲ್ಲಿದ್ದವರು ಈಗ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯವರು ಏನೆಲ್ಲಾ ಪ್ರಶ್ನೆ ಕೇಳಬೇಕು ಅಂತ ಬರೆದುಕೊಡ್ತಾರೆ, ಅದನ್ನು ಇವರು ಕೇಳುತ್ತಾರೆ. ಅವರು ಕಾಂಗ್ರೆಸ್ ಪಕ್ಷದಲ್ಲಿದ್ದವರು ತಾನೆ?. ಲಕ್ಷ್ಮೀ ಹೆಬ್ಬಾಳ್ಕರ ಸಚಿವರು, ಲೀಡರ್ ಕಾರಿನಲ್ಲಿ ಕುಳಿತುಕೊಂಡು ದುಡ್ಡು ಸಾಗಿಸಬೇಕಾ?. ಓರ್ವ ಮಿನಿಸ್ಟರ್ ಅಪಘಾತವಾಗಿದ್ದಾಗ ಸಹಾನುಭೂತಿ ತೋರಿಸೋದು ಬಿಟ್ಟು. ಇದೆಲ್ಲಾ ಯಾವ ರಾಜಕಾರಣ ಅಂತ ನನಗೆ ಗೊತ್ತಾಗ್ತಿಲ್ಲ.- ಕೆ.ಜೆ.ಜಾರ್ಜ್‌, ಇಂಧನ ಸಚಿವ

Share this article