- 138ನೇ ಕಾರ್ಮಿಕ ದಿನಾಚರಣೆ- ಹಿರಿಯ ಕಾರ್ಮಿಕರಿಗೆ ಅಭಿನಂದನೆ ಸಮಾರಂಭ - - -
ಕನ್ನಡಪ್ರಭ ವಾರ್ತೆ, ದಾವಣಗೆರೆ ಕಾರ್ಲ್ ಮಾಕ್ಸ್ ಕಾರ್ಮಿಕರ ಮೂಲ ಸಮಸ್ಯೆಗಳಿಗೆ ಪರಿಹಾರ ನೀಡಿದ ಮಹಾನ್ ದಾರ್ಶನಿಕರಾಗಿದ್ದಾರೆ. ವಿಶ್ವದ ಕಾರ್ಮಿಕರೆಲ್ಲಾ ಒಂದಾದರೆ ಮಾತ್ರ ಕಾರ್ಮಿಕರಿಗೆ ನ್ಯಾಯ ಸಿಗುತ್ತದೆ ಎಂಬ ಸಂದೇಶ ನೀಡಿದ್ದರು. ಅದರಂತೆ ಕಾರ್ಮಿಕರು ಒಗ್ಗಟ್ಟಿನಲ್ಲಿ ಬಲ ಇರುವುದನ್ನು ಮನಗೊಂಡು ಒಂದಾಗಬೇಕೆಂದು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಾದಾಪೀರ್ ನವಿಲೇಹಾಳ್ ಹೇಳಿದರು.ನಗರದ ವನಿತಾ ಸಮಾಜದಲ್ಲಿ ಭಾನುವಾರ ಕರ್ನಾಟಕ ಶ್ರಮಿಕ ಶಕ್ತಿಯಿಂದ ಹಮ್ಮಿಕೊಂಡಿದ್ದ 138ನೇ ಕಾರ್ಮಿಕ ದಿನಾಚರಣೆ ಮತ್ತು ಹಿರಿಯ ಕಾರ್ಮಿಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕಾ ಕ್ರಾಂತಿಯ ನಂತರ ಕಾರ್ಮಿಕರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ದಿನಕ್ಕೆ 18 ಗಂಟೆ ಕಾಲ ಕೆಲಸ ಮಾಡಬೇಕಾಗಿದ್ದ ಸಂದರ್ಭದಲ್ಲಿ 1886ರಲ್ಲಿ ಚಿಕಾಗೋದಲ್ಲಿ ನಡೆದ ಕಾರ್ಮಿಕರ ಹೋರಾಟವು ಅವಿಸ್ಮರಣೀಯ ಬದಲಾವಣೆ ತಂದಿತು. ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಕ್ಕರೆ ತಿನ್ನುವ ಅವಕಾಶವಿಲ್ಲದಂತಹ ಪರಿಸ್ಥಿತಿ ಈಗಲೂ ಮುಂದುವರಿಯುತ್ತಿದೆ. ಕಾರ್ಮಿಕರು ಅದೆಷ್ಟೇ ಕೆಲಸ ಮಾಡಿದರೂ, ಅವರಿಗೆ ದುಡಿಮೆಗೆ ತಕ್ಕ ಕೂಲಿ ಈಗಲೂ ಮರೀಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕರ್ನಾಟಕ ಶ್ರಮಿಕ ಶಕ್ತಿಯ ಸತೀಶ್ ಅರವಿಂದ್ ಮಾತನಾಡಿ, 138 ವರ್ಷಗಳ ಹಿಂದೆ ನಡೆದ ಕಾರ್ಮಿಕರ ಹೋರಾಟವೇ ನಾವುಗಳು ಇಂದು ಒಟ್ಟಾಗಿ ಸೇರಲು ಮತ್ತು ಕನಿಷ್ಠ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ನಮ್ಮ ಮುಂದೆ ಇನ್ನೂ ಹಲವಾರು ಜಟಿಲ ಸಮಸ್ಯೆಗಳಿದ್ದು, ಅವುಗಳ ನಿವಾರಣೆಗಾಗಿ ಎಲ್ಲ ಅಸಂಘಟಿತ ಕಾರ್ಮಿಕರೆಲ್ಲರೂ ಒಟ್ಟಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಇದೇ ವೇಳೆ ಹಿರಿಯ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆದಿಲ್ ಖಾನ್, ಟಿ.ಎಚ್. ಲಕ್ಷ್ಮೀಕಾಂತ್, ಅಶ್ಫಾಕ್, ಮಹಮ್ಮದ್ ರಫೀಕ್, ಅತ್ತು, ಹನುಮಂತಪ್ಪ, ನಾಜೀಮಾ ಬಾನು, ಅಕ್ಬರ್, ಅಪ್ರೋಜ್, ವೆಂಕಟೇಶ್ ಇತರರು ಭಾಗವಹಿಸಿದ್ದರು.- - -
ಕೋಟ್ದಾವಣಗೆರೆಯಲ್ಲಿ ಹತ್ತಿ ಗಿರಣಿಗಳು ಸಾಕಷ್ಟು ಕಾಲ ನಿಲ್ಲಲು ಕಾರ್ಮಿಕರ ಹೋರಾಟ ಕಾರಣ. 15 ವರ್ಷಗಳ ಕಾಲ ಪಂಪಾಪತಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರೆಂದರೆ ಕಾರ್ಮಿಕರ ಒಗ್ಗಟ್ಟಿನ ಶಕ್ತಿಯೇ ಕಾರಣ
- ಡಾ. ದಾದಾಪೀರ್ ನವಿಲೇಹಾಳ್, ಪ್ರಾಚಾರ್ಯ- - -
-2ಕೆಡಿವಿಜಿ43ಃ:ದಾವಣಗೆರೆಯಲ್ಲಿ ಕರ್ನಾಟಕ ಶ್ರಮಿಕ ಶಕ್ತಿಯಿಂದ ನಡೆದ ಕಾರ್ಮಿಕ ದಿನ ಕಾರ್ಯಕ್ರಮವನ್ನು ಡಾ.ದಾದಾಪೀರ್ ನವಿಲೇಹಾಳ್ ಉದ್ಘಾಟಿಸಿದರು.