ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುನಾಥ್ ಅಲಿಯಾಸ್ ಪೆಂಡಾಲ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಪೊಲೀಸ್ ಇಲಾಖೆಯವರು ನಾಯಕ ಜನಾಂಗದ ಮಂಜುನಾಥ್ ಎಂದು ಹೇಳಿರುವುದು ಸರಿಯಲ್ಲ ಎಂದರು.
ಜ್ಯೋತಿಗೌಡನಪುರದಲ್ಲಿ ದಲಿತ ಜನಾಂಗದವರೇ ತಪ್ಪಿತಸ್ಧರನ್ನು ಬಂಧಿಸಿಲ್ಲ ಎಂದು ಪೊಲೀಸರಿಗೆ ಛೀಮಾರಿ ಹಾಕಿದ್ದಾರೆ. ಶ್ವಾನ ಮಂಜುನಾಥ್ ಮನೆಗೆ ಹೋಗಿಲ್ಲ, ಹೋಗಿರುವುದು ದಲಿತರ ಬೀದಿಯಲ್ಲಿ. ಆತ ತಪ್ಪು ಮಾಡಿದ್ದರೆ ಮಹಾಘೋರ ಶಿಕ್ಷೆಯಾಗಲಿ. ನಾವು ದಲಿತ ವಿರೋಧಿ ಅಲ್ಲ. ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದಲೇ ನಾವೆಲ್ಲ ಈ ಮಟ್ಟಕ್ಕೆ ತಲುಪಿರುವುದು ಎಂದರು.ಘಟನೆಗೆ ಸಂಬಂಧಪಟ್ಟಂತೆ ಹರದನಹಳ್ಳಿ ಶಿವಣ್ಣನನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡಿ, ಅತನಿಗೆ ಥಳಿಸಿ, ಬಲವಂತವಾಗಿ ಮಂಜುನಾಥನೇ ಮಾಡಿದ್ದಾನೆ ಎಂದು ಹೇಳಿಕೆ ಪಡೆದಿರುವುದು ಸರಿಯಲ್ಲ. ಆತ ಪದವೀಧರ ಅಂತಹ ಕೀಳು ಮಟ್ಟಕ್ಕೆ ಇಳಿಯುವ ವ್ಯಕ್ತಿ ಅಲ್ಲ, ಯಾರದೋ ಒತ್ತಡಕ್ಕೆ ಮಣಿದು ಈ ರೀತಿ ತನಿಖೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಬಾಬಾ ಸಾಹೇಬರ ಮೀಸಲಾತಿ ಋಣದಲ್ಲಿ ನಾವು ಬದುಕುತ್ತಿದ್ದೇವೆ ಅವರು ದಲಿತ ಜನಾಂಗಕ್ಕೆ ಸೀಮಿತವಲ್ಲ. ಅವರ ವಿಚಾರ ನಾವು ದುರ್ಬಳಕೆ ಮಾಡಿಕೊಂಡಿಲ್ಲ, ನಾವು ಅವರನ್ನು ಗೌರವದಿಂದ ಕಾಣುತ್ತಿದ್ದೇವೆ ಎಂದರು.
ಜ್ಯೋತಿ ಗೌಡನಪುರ ವಿಚಾರದಲ್ಲಿ ನಾನು ಗ್ರಾಮಕ್ಕೆ ಭೇಟಿ ಮಾಡಿ ನಮ್ಮ ಜನಾಂಗದವರನ್ನು ವಿಚಾರಿಸಿ ವಾಸ್ತವ ಮಾಹಿತಿ ಪಡೆದು ಜನಾಂಗದವರು ತಪ್ಪು ಮಾಡಿದ್ದರೆ ನೈತಿಕ ಹೊಣೆ ಹೊರುವಂತೆ ಹೇಳಿದ್ದೇನೆ. ಬದನಗುಪ್ಪೆ ವಿಚಾರದಲ್ಲಿ ಮಾಹಿತಿ ಕೊರತೆ ಇದೆ ಅದು ಸರ್ಕಾರಿ ಜಾಗ, ಅಲ್ಲಿ ಯಾವುದೇ ಪ್ರತಿಮೆ ಮಾಡಬೇಕಾದರೂ ಅನುಮತಿ ಮುಖ್ಯ, ಅಮಚವಾಡಿಯಲ್ಲೂ ಅಷ್ಟೇ ಎಂದರು.ಈಗಾಗಲೇ ಎಲ್ಲೆಡೆ ಉಂಟಾಗಿರುವ ಪ್ರತಿಮೆಗಳ ಅಪಮಾನ ವಿಚಾರದಲ್ಲಿ ಬಹುತೇಕ ಕಡೆ ಸ್ವಜಾತಿಯವರು ಮಾಡಿರುವುದು ರುಜುವಾತಾಗಿದೆ. ಅಂತಹದ್ದರ ಬಗ್ಗೆ ಮಾತನಾಡುವುದೇ ಇಲ್ಲ. ಅದು ಬಿಟ್ಟು ಸಾಮರಸ್ಯ ಹಾಳು ಮಾಡುವ ಹೇಳಿಕೆ ನೀಡುವುದು ಸರಿಯಲ್ಲ, ಮುಂದಿನ ದಿನಗಳಲ್ಲಿ ನಮ್ಮ ಜನಾಂಗದ ಮುಖಂಡರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಿ ಎಂದರು.
ಹರದನಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಶಸ್ತ್ರಬ್ಯಾಸ ನಡೆಯುತ್ತಿದೆ ಎಂದು ತಪ್ಪು ಮಾಹಿತಿ ನೀಡಿ, ಬಿಜೆಪಿ ಆರ್‌ಎಸ್‌ಎಸ್ ನವರೇ ಘಟನೆಗೆ ಕಾರಣ ಎಂದು ದಲಿತ ಮುಖಂಡ ಸಂಘಸೇನೆ ಹೇಳಿಕೆ ಸರಿಯಲ್ಲ ಎಂದರು.ಹರದನಳ್ಳಿ ಪ್ರದೀಪ್, ಬಸವಣ್ಣ, ಲಿಂಗನಾಯಕ, ರವಿ, ನಾಗೇಂದ್ರ, ವೆಂಕಟೇಶ್ ಇದ್ದರು