ದಾಂಪತ್ಯಕ್ಕೆ ಕಾಲಿಟ್ಟ ಜ್ಯೋತಿರಾಜ್

KannadaprabhaNewsNetwork |  
Published : Aug 24, 2026, 02:00 AM IST
Jyothi Raj

ಸಾರಾಂಶ

ಚಿತ್ರದುರ್ಗದ ಕೋತಿರಾಜ್ ಆಲಿಯಾಸ್ ಜ್ಯೋತಿರಾಜ್ ಎಂಬ ಸ್ಪೈಡರ್ ಮ್ಯಾನ್ ಭಾನುವಾರ ವಿವಾಹವಾಗುವ ಮೂಲಕ ನವಜೀವನಕ್ಕೆ ಕಾಲಿಟ್ಟಿದ್ದಾರೆ.ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ನಿವೇದಿತಾ ಎಂಬ ಪದವಿ ಕಲಿತಿರುವ ಯುವತಿಯ ಜೊತೆ ವೖವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ

ಚಿತ್ರದುರ್ಗ :  ಚಿತ್ರದುರ್ಗದ ಕೋತಿರಾಜ್ ಆಲಿಯಾಸ್ ಜ್ಯೋತಿರಾಜ್ ಎಂಬ ಸ್ಪೈಡರ್ ಮ್ಯಾನ್ ಭಾನುವಾರ ವಿವಾಹವಾಗುವ ಮೂಲಕ ನವಜೀವನಕ್ಕೆ ಕಾಲಿಟ್ಟಿದ್ದಾರೆ.

ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ನಿವೇದಿತಾ ಎಂಬ ಪದವಿ ಕಲಿತಿರುವ ಯುವತಿಯ ಜೊತೆ ಭಾನುವಾರ ಚಿತ್ರದುರ್ಗ ನಗರದ ವೈಭವ ಗಾರ್ಡನ್‌ನಲ್ಲಿ ವೖವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ರಾಜ್ಯದಾದ್ಯಂತ ದೊಡ್ಡ ಹೆಸರು ಮಾಡಿದ ಜ್ಯೋತಿರಾಜ್

ನೋಡುಗರನ್ನು ಕ್ಷಣಕಾಲ ದಂಗಾಗುವಂತೆ ಕೋಟೆಯ ಕಲ್ಲುಗಳನ್ನು ಕೋತಿಯಂತೆ ಮೇಲೇರುವ ಈತನ ಸಾಹಸಕ್ಕೆ ತಲೆದೂಗದವರೇ ಇಲ್ಲ. ಚಿತ್ರದುರ್ಗ ಕೋಟೆ ಮಾತ್ರವಲ್ಲದೇ ರಾಜ್ಯದ ಬೇರೆ ಭಾಗಗಳಲ್ಲೂ ಇಂತಹ ಸಾಹಸ ಮಾಡುವ ಮೂಲಕ ರಾಜ್ಯದಾದ್ಯಂತ ದೊಡ್ಡ ಹೆಸರು ಮಾಡಿದ್ದರು.

ಇಂತಹ ಸಾಹಸಿಗ ಇದೀಗ ಚಳ್ಳಕೆರೆಯ ಬಾಳ ಸಂಗಾತಿಯೊಂದಿಗೆ ಅಸಂಖ್ಯಾತ ಅಭಿಮಾನಿಗಳು, ಮಾರ್ಗದರ್ಶಕರು, ಕುಟುಂಬಸ್ಥರ ಸಮ್ಮುಖದಲ್ಲಿ ಹಸೆ ಮಣೆ ಏರಿದ್ದಾರೆ.

ಸ್ಪೈಡರ್ ಮ್ಯಾನ್, ಮಂಕಿಮ್ಯಾನ್ ಖ್ಯಾತಿಯ ಜ್ಯೋತಿರಾಜ್

ಸ್ಪೈಡರ್ ಮ್ಯಾನ್, ಮಂಕಿಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ರಾಕ್ ಕ್ಲೈಂಬಿಂಗ್ ಸಾಹಸಕ್ಕೆ ಹೆಸರಾಗಿದ್ದಾರೆ. ಜೋಗಜಲಪಾತ ಸೇರಿದಂತೆ ಬೆಂಗಳೂರಿನ ಬಹುಮಹಡಿ ಕಟ್ಟಡವೊಂದನ್ನು ಏರಿ ಹೆಸರಾಗಿದ್ದ.

ಓಡಿಶಾ ರಾಜ್ಯ ಸಾಹಸ ಕ್ರೀಡೆ ರಾಯಭಾರಿಯಾಗಿಯೂ ಜ್ಯೋತಿರಾಜ್ ಆಯ್ಕೆಯಾಗಿದ್ದಾರೆ. ಇದಲ್ಲದೇ ಮತದಾನ ಜಾಗೃತಿ ರಾಯಭಾರಿ ಆಗಿ ಸೇವೆ ಸಲ್ಲಿಸಿರುವ ಜ್ಯೋತಿರಾಜ್ ಜೀವನಗಾಥೆ ಕುರಿತ ಚಲನಚಿತ್ರ ತೆರೆ ಕಂಡಿದೆ.

ಮೂಲತಃ ತಮಿಳುನಾಡಿನವರಾದ ಜ್ಯೋತಿರಾಜ್ ಕರ್ನಾಟಕದ ಐತಿಹಾಸಿಕ ಚಿತ್ರದುರ್ಗದ ಕೋಟೆಯಲ್ಲಿ ತಮ್ಮ ಸಾಹಸ ಕ್ರೀಡೆಯನ್ನು ಪ್ರದರ್ಶನ ಮಾಡಿ ಹೆಸರಾದವರು. ಕನ್ನಡನಾಡು ನುಡಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುವ ಸಾಹಸಿಗ ಇದೀಗ ವೃತ್ತಿಗೆ ಆಶ್ರಯ ನೀಡಿದ್ದ ಕೋಟೆನಾಡಿನಲ್ಲೇ ವಿವಾಹವಾಗಿರುವುದು ಕನ್ನಡ ನೆಲದ ಬಗ್ಗೆ ಇವರಿಗಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ.

ತಮಿಳುನಾಡಿನಲ್ಲಿ ಮದುವೆ ಆಗಲು ಕುಟುಂಬಸ್ಥರು ಹೇಳಿದ್ದರು. ಆದರೆ, ನಾನು ಕನ್ನಡಿಗನಾಗಿ ದುರ್ಗದಲ್ಲೇ ಮದುವೆ ಆಗುತ್ತಿದ್ದೇನೆಂದು ಜ್ಯೋತಿರಾಜ್ ಕುಟುಂಬಸ್ಥರಿಗೆ ಹೇಳಿದ್ದಾರೆ. ಆದ್ದರಿಂದ ಕೋಟೆನಾಡಲ್ಲೇ ವಿವಾಹವಾಗಲು ನಿರ್ಧರಿಸಿದ್ದರು. ಪೋಟೋ:

ಕೋತಿರಾಜ್ ಆಲಿಯಾಸ್ ಜ್ಯೋತಿರಾಜ್ ಹಾಗೂ ನಿವೇದಿತಾ ಹೊಸ ಜೀವನಕ್ಕೆ ಅಣಿಯಾದ ಸಂದರ್ಭ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕಲಾಕೃತಿಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಡಾ.ವಸುಂಧರಾ
371ಜೆ ಧರಣಿ ಸತ್ಯಾಗ್ರಹ: ವಕೀಲರ ಬೆಂಬಲ